ಬೆಂಗಳೂರಿನಲ್ಲಿ ಮಹಿಳೆ ಶವ ಪತ್ತೆ: 3 ಮಕ್ಕಳ ತಾಯಿಯನ್ನ ಕೊಂದು ಬಿಸಾಡಿರುವ ದುಷ್ಕರ್ಮಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2025 | 4:00 PM

ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿದ್ದ ಬಾಂಗ್ಲಾ ಮೂಲದ ಮಹಿಳೆಯ ಶವ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ಪತ್ತೆಯಾಗಿದೆ. ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಶೋಧ ನಡೆಸಿದ್ದಾರೆ. ಮೃತ ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದರು.

ಬೆಂಗಳೂರಿನಲ್ಲಿ ಮಹಿಳೆ ಶವ ಪತ್ತೆ: 3 ಮಕ್ಕಳ ತಾಯಿಯನ್ನ ಕೊಂದು ಬಿಸಾಡಿರುವ ದುಷ್ಕರ್ಮಿಗಳು
ಬೆಂಗಳೂರಿನಲ್ಲಿ ಮಹಿಳೆ ಶವ ಪತ್ತೆ: 3 ಮಕ್ಕಳ ತಾಯಿಯನ್ನ ಕೊಂದು ಬಿಸಾಡಿರುವ ದುಷ್ಕರ್ಮಿಗಳು
Follow us on

ಬೆಂಗಳೂರು, ಜನವರಿ 24: ಮನೆಗೆಲಸ ಮಾಡುತ್ತಿದ್ದ ಮಹಿಳೆ (Woman) ಶವವಾಗಿ ಪತ್ತೆ ಆಗಿರುವಂತಹ ಘಟನೆ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ ಆಗಿದೆ. ನಜ್ಮಾ ಮೃತ ಬಾಂಗ್ಲಾದೇಶ ಮೂಲದ ಮಹಿಳೆ. ನಜ್ಮಾ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕಲ್ಕೆರೆಯ ಡಿಎಸ್​ಆರ್​​ನ ಅಪಾರ್ಟ್​ಮೆಂಟ್​ನಲ್ಲಿ ಮನೆಗೆಲಸ ಮಾಡುತ್ತಿದ್ದ ನಜ್ಮಾ, ಸುಮನ್​ ಎಂಬುವವರನ್ನು ಮದುವೆಯಾಗಿದ್ದರು. 3 ಮಕ್ಕಳ ತಾಯಿಯನ್ನು ದುಷ್ಕರ್ಮಿಗಳು ಕೊಂದು ಬಿಸಾಡಿದ್ದಾರೆ.

ಕಮಿಷನರ್ ರಮೇಶ್ ಬಾನೋತ್ ಹೇಳಿದ್ದಿಷ್ಟು

ಘಟನೆ ಬಗ್ಗೆ ಪೂರ್ವ ವಲಯದ ಹೆಚ್ಚುವರಿ ಕಮಿಷನರ್ ರಮೇಶ್ ಬಾನೋತ್​ ಹೇಳಿಕೆ ನೀಡಿದ್ದು, ಬೆಳಿಗ್ಗೆ 8.45ರ ಸುಮಾರಿಗೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆ ಬರುತ್ತೆ. ಇನ್‌ಸ್ಪೆಕ್ಟರ್‌ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಎಫ್​​ಎಸ್​ಎಲ್​ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು, ಬಾಡಿ ಶಿಫ್ಟ್ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!

ಡಿಸಿಪಿ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ನಾನು ಭೇಟಿ ನೀಡಿದ್ದೆ. ಮೇಲ್ನೋಟಕ್ಕೆ ಚುಚ್ಚಿ, ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದು ಕಂಡು ಬಂದಿದೆ. ಲೈಗಿಂಕ ದೌರ್ಜನ್ಯ ಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತೆ. ಕೊಲೆ ಹಾಗೂ ಲೈಗಿಂಕ ದೌರ್ಜನ್ಯ ಅಂತ ಕೇಸ್ ಹಾಕಲಾಗಿದೆ. ಯಾರು ಕೊಲೆ ಮಾಡಿದ್ದು ಅಂತ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಪಾರ್ಟ್​​ಮೆಂಟ್​ನಲ್ಲಿ ಕೆಲಸ ಮುಗಿಸಿ ಹೊರಟವರು ಮರಳಿ ಮನಗೆ ಹೋಗಿಲ್ಲ. ರಾತ್ರಿ ಅವರ ಪತಿ, ನಾಪತ್ತೆ ಅಂತ ದೂರು ನೀಡಿದ್ದರು. ಬೆಳಿಗ್ಗೆ ಶವ ಸಿಕ್ಕಿದೆ. ಅತ್ಯಾಚಾರ ಆಗಿದೆಯಾ ಅಂತ ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾಗಿ ಬಾಳೋಣಾ ಎಂದು ಕರೆಯಲು ಹೋಗಿ ಹೆಂಡ್ತಿ ಮನೆಯಲ್ಲೇ ಪತಿ ಆತ್ಮಹತ್ಯೆ!

ಇನ್ನು ಪತಿ ಸುಮನ್ ಪಾಸ್ ಪೋರ್ಟ್ ಮೂಲಕ ಬಂದಿದ್ದಾರೆ. ಪತ್ನಿ ಬಳಿ ಯಾವುದೇ ಪಾಸ್ ಪೋರ್ಟ್ ಇಲ್ಲ. ಅಕ್ರಮ‌ವಾಗಿ ಬಂದಿರಬಹುದು. ಇನ್ನೂ ಪಾಸ್ ಪೋರ್ಟ್ ಸಿಕ್ಕಿಲ್ಲ. ನಜ್ಮಾ ಮೂಲತಃ ಬಾಂಗ್ಲಾದೇಶದವರು 6 ವರ್ಷದಿಂದ ಇಲ್ಲಿ ಕೆಲಸ ಮಾಡಕೊಂಡಿದ್ದರು ಎಂದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:57 pm, Fri, 24 January 25