ಕೆಂಪೇಗೌಡ ಏರ್ಪೋಟ್​ಗೆ ಸಿಗಲಿದೆ ಮತ್ತೊಂದು ಗರಿ, ಕೆಐಎಬಿಯಲ್ಲಿ ಉದ್ಘಾಟನೆಗೆ ಸಿದ್ದವಾಗ್ತಿದೆ ದೇಶದ ಮಾದರಿ ಟರ್ಮಿನಲ್

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಟರ್ಮಿನಲ್​ನ್ನು ನವೆಂಬರ್ 11 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಕೆಂಪೇಗೌಡ ಏರ್ಪೋಟ್​ಗೆ ಸಿಗಲಿದೆ ಮತ್ತೊಂದು ಗರಿ, ಕೆಐಎಬಿಯಲ್ಲಿ ಉದ್ಘಾಟನೆಗೆ ಸಿದ್ದವಾಗ್ತಿದೆ ದೇಶದ ಮಾದರಿ ಟರ್ಮಿನಲ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 24, 2022 | 10:11 PM

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ (Kempegowda International Airport) ಅಂದ್ರೆ ಹಚ್ಚ ಹಸಿರಿನ ಗ್ರೀನ ರಿ ಜೊತೆಗೆ ವಿಶಾಲವಾಗಿರೂ ಸುಂದರ ಏರ್ಪೋಟ್ ನೆನಪಾಗ್ತಿತ್ತು. ಆದರೆ ಇನ್ನೂ ಕೆಲವೆ ದಿನಗಳಲ್ಲಿ ಏರ್ಪೋಟ್ ಅಂದ್ರೆ ಹೀಗೂ ಇರುತ್ತಾ ಅನ್ನೂ ರೀತಿ ನೋಡುಗರೆ ನಿಬ್ಬೆರಗಾಗುವಂತೆ ಅತ್ಯಾಧುನಿಕ ಟೆಕ್ನಾಲಜಿಯ ಹೊಸ ಟರ್ಮಿನಲ್ ಉದ್ಘಾಟನೆಯಾಗಲಿದೆ.

ಇಷ್ಟುದಿನ ಹಚ್ಚ ಹಸಿರಿನ ಗಾರ್ಡನ್ ಮತ್ತು ಹೈ ಪೈ ಟೆಕ್ನಾಲಜಿಯೊಂದಿಗೆ ಹಲವು ಪ್ರಶಸ್ತಿಗಳನ್ನ ತನ್ನ ಮುಡಿಗೇರಿಸಿಕೊಂಡಿದ್ದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ ಇನ್ನು ಕೆಲವೆ ದಿನಗಳಲ್ಲಿ ಕಣ್ಮನ ಸೆಳೆಯುವಂತಹ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಟರ್ಮಿನಲ್ ಅನ್ನ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುತ್ತಿದೆ. 13 ಸಾವಿರ ಕೋಟಿ ವೆಚ್ಚದಲ್ಲಿ ಹೊಸ 2 ನೇ ಟರ್ಮಿನಲ್ ಮತ್ತು ಹೊಸ ರನ್ ವೇ ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ಉದ್ಘಾಟನೆಗೆ ಸಿದ್ದವಾಗಿದೆ. ಮುಂದಿನ ತಿಂಗಳು ನವಂಬರ್ 11 ಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ 2ನೇ ಟರ್ಮಿನಲನ್ನು ಉದ್ಘಾಟನೆ ಮಾಡಲಿದ್ದಾರೆ. ಪ್ರಸ್ತುತವಿರುವ ಮೊದಲನೆ ಟರ್ಮಿನಲ್​ನ ಎಡ ಭಾಗದಲ್ಲಿ ಇದೀಗ ಹೊಸ ಟರ್ಮಿನಲ್ ನಿರ್ಮಾಣವಾಗಿದ್ದು ಹೊರ ಭಾಗದ ಅಂತಿಮ ಘಟ್ಟದ ಕಾಮಗಾರಿ ಕೆಲಸ ತ್ವರಿತ ಗತಿಯಲ್ಲಿ ನಡೆಯುತ್ತಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದ ಒಂದನೆ ಟರ್ಮಿನಲ್​ನಲ್ಲಿ ವಾರ್ಷಿಕ 16 ಮಿಲಿಯನ್ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ಇದೀಗ ಎರಡನೆ ಟರ್ಮಿನಲ್​​ನಲ್ಲಿ ವಾರ್ಷಿಕ 25 ಮಿಲಿಯನ್ ಪ್ರಯಾಣಿಕರು ಸಂಚಾರ ಮಾಡಲಿದ್ದಾರೆ. ಹೊಸ ಗಾರ್ಡನ್ ಟರ್ಮಿನಲ್ ಇದಾಗಿದ್ದು ಒಳ ಭಾಗದಲ್ಲಿ ನೇತಾಡುವ ಹಚ್ಚ ಹಸಿರಿನ ಗಿಡಗಳ ಜೊತೆಗೆ ನಿರ್ಮಾಣಮಾಡಿದರೂ, ಕೃತಕ ವಾಟರ್ ಪಾಲ್ಸ್ ಪ್ರಯಾಣಿಕರನ್ನು ಆಕರ್ಷಿಸಲಿದೆ. ಅಲ್ಲದೆ ನೂತನ ಟರ್ಮಿನಲ್ ನಲ್ಲಿ 66 ವಿಮಾನಗಳನ್ನ ಏಕಕಾಲದಲ್ಲಿ ನಿಲ್ಲಿಸಬಹುದಾದಂತ ವ್ಯವಸ್ಥೆಯನ್ನು ಮಾಡಲಾಗಿದ್ದು ಮಳೆ ಬಿಸಿಲಿನ ನಡುವೆಯು 27 ವಿಮಾನಗಳಿಗೆ ಏರೋ ಬ್ರಿಡ್ಸ್ ಮೂಲಕ ಟರ್ಮಿನಲ್ ನಿಂದ ವಿಮಾನದ ಒಳಕ್ಕೆ ಪ್ರಯಾಣಿಕರು ಹೋಗಬಹುದಾಗಿದೆ. ಹೊಸ ಟರ್ಮಿನಲನ್ನು ಎರಡು ಅಂತಸ್ತುಗಳಲ್ಲಿ ನಿರ್ಮಾಣ ಮಾಡಿದ್ದು ಮೊದಲನೆ ಮಹಡಿಯಲ್ಲಿ ಡಿಪಾರ್ಚರ್ (ನಿರ್ಗಮನ) ಮತ್ತು ಕೆಳ ಮಹಡಿಯಲ್ಲಿ ಅರೈವಲ್ (ಆಗಮನ) ಗೆ ಮೀಸಲಿಡಲಾಗಿದೆ. ಏರ್ಪೋಟ್ ಒಳಗಡೆಗೆ ಎಂಟ್ರಿಯಾಗಲು 13 ಗೇಟ್ ಮತ್ತು 90 ಚೆಕ್ ಇನ್ ಗೇಟ್ಸ್​​ಗಳನ್ನು ಮಾಡಲಾಗಿದ್ದು ಪ್ರಯಾಣಿಕರು ಯಾವುದೆ ಹರಸಾಹಸ ಪಡದೆ ಸುಲಭವಾಗಿ ಏರ್ಪೋಟ್ ನಿಂದ ಬೇರೆಡೆಗೆ ಸಂಚರಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು ಹೊಸ ಟರ್ಮಿನಲ್ ಹಲವು ವಿಶೇಷತೆಗಳಿಂದಾಗಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಒಟ್ಟಾರೆ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಇರೋದರಲ್ಲೇ ಬೆಸ್ಟ್ ಸರ್ವಿಸ್ ನೀಡುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ ಶೀಘ್ರದಲ್ಲಿ ಮತ್ತೊಂದು ಗರಿಯನ್ನು ತನ್ನ ತಕ್ಕೆಗೆ ಹಾಕಿಕೊಳ್ಳಲಿದೆ. ಇನ್ನೂ ಹೊಸ ಟರ್ಮಿನಲ್​ನ ವಿಡಿಯೋಗಳನ್ನು ನೋಡಿದ ಜನರಿಗೆ ಹೊಸ ಟರ್ಮಿನಲ್ ನೋಡುವ ಕಾತುರವನ್ನ ಮತ್ತಷ್ಟು ಹೆಚ್ಚಿಸಿದ್ದು ನವೆಂಬರ್ 11 ರ ನಂತರ ಹೊಸ ಟರ್ಮಿನಲ್ ನಲ್ಲಿ ಓಡಾಡುವ ಅವಕಾಶ ಸಿಲಿಕಾನ್ ಸಿಟಿ ಜನರಿಗೆ ಸಿಗಲಿದೆ.

ವರದಿ- ನವೀನ್ ಟಿವಿನೈನ್ ದೇವನಹಳ್ಳಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:06 pm, Mon, 24 October 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ