ಬೆಂಗಳೂರು, (ನವೆಂಬರ್ 20): ಬೆಂಗಳೂರಿನ (Bengaluru) ಕುಂಬಾರಪೇಟೆಯ ಗೋದಾಮಿನಲ್ಲಿ ಅಗ್ನಿ(Fire) ಅವಘಡ ಸಂಭವಿಸಿದ್ದು, ಆದಿಲ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮು ಬೆಂಕಿಗಾಹುತಿಯಾಗಿದೆ. ನಿನ್ನೆ(ನವೆಂಬರ್ 20) ಮಧ್ಯಾಹ್ನ ಹೊತ್ತಿಕೊಂಡ ಬೆಂಕಿ, ಇಂದು ಸಹ ಧಗಧಗಿಸುತ್ತಿದೆ. ಹೌದು..ಆರಂಭದಲ್ಲಿ ಪ್ಲಾಸ್ಟಿಕ್ ಗೋದಾಮಿನ 3, 4ನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಇದೀಗ ಐದನೇ ಮಹಡಿಗೂ ವ್ಯಾಪಿಸಿಕೊಂಡಿದೆ. ಐದನೇ ಫ್ಲೋರ್ನಲ್ಲಿ ಮತ್ತೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ಇನ್ನು ಈ ಬೆಂಕಿ ಅವಘಡದಿಂದ ಕವಿತ ಎನ್ನುವ ಮಹಿಳೆ ಪಾರಾಗಿದ್ದಾರೆ. ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ನಾಲ್ಕು, ಐದು ಮತ್ತು ಆರನೇ ಅಂತಸ್ತು ಸುಟ್ಟು ಕರಕಲಾಗಿದೆ. ಆದಿಲ್ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಆಟಿಕೆ ವಸ್ತು ಗೋಡೌನ್ ಇದು. ಅಲ್ಲಿ ನಮ್ಮ ಪತಿ ಕೆಲಸ ಮಾಡುತ್ತಿದ್ದರು. ಹಾಗಾಗಿ ನಮಗೆ ಐದನೇ ಫ್ಲೋರ್ ನಲ್ಲಿ ಉಳಿದುಕೊಳ್ಳಲು ಮನೆಕೊಟ್ಟಿದ್ದರು. ಬೆಂಕಿ ಹೊತ್ತಿಕೊಂಡಾಗ ನಾನು ಮನೆಯಲ್ಲೇ ಇದ್ದೆ/ ಮೊದಲು ಹೊಗೆಯ ವಾಸನೆ ಬಂದಿದೆ. ಹಾಗಾಗಿ ನಾನು ಕೆಳಗೆ ಬರಲಾಗದೇ ಆರನೇ ಫ್ಲೋರ್ ಗೆ ಹೋದೆ. ಈ ವೇಳೆ ಹೊಗೆ ಜಾಸ್ತಿ ಆಗುತ್ತಿತ್ತು. ಸ್ಥಳೀಯರೆಲ್ಲ ಸಹಾಯ ಮಾಡಿ ಕಾಪಾಡಿದ್ರು. ಹಗ್ಗ,ಸೀರೆ ಕಟ್ಟಿ ನನ್ನನ್ನ ಕಾಪಾಡಿದ್ರು.ಇಲ್ಲದಿದ್ದರೆ ತುಂಬಾನೇ ಕಷ್ಟ ಆಗಿಬಿಡ್ತಿತ್ತು. ನಮ್ಮ ಮನೆಯಲ್ಲಿರುವ ವಸ್ತುಗಳಿಗೆಲ್ಲ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ಕಟ್ಟಡದ ಮೂರನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ, ಆರನೇ ಮಹಡಿಗೂ ಹಬ್ಬಿದ ಬೆಂಕಿ
ನಿನ್ನೆ ವೀಕೆಂಡ್ ಹಿನ್ನೆಲೆ ಎಸ್‌ಪಿ ರೋಡ್ ಸೇರಿದಂತೆ ಸುತ್ತಮುತ್ತಲಿನ ಎಲ್ಲ ರಸ್ತೆಗಳ ವಾಣಿಜ್ಯ ಕೇಂದ್ರಗಳು ಸ್ತಬ್ಧವಾಗಿದ್ವವು. ಕಾರಣ ಒಂದು ಭಾನುವಾರ, ಇನ್ನೊಂದು ವಿಶ್ವಕಪ್ ಫೈನಲ್ ಮ್ಯಾಚ್. ಹೀಗಾಗಿ ಜನರು ಟಿವಿ ಮುಂದೆ ಕುಳಿತು ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿದ್ದರು. ಈ ವೇಳೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಎಸ್‌ಪಿ ರೋಡ್‌ನ ಕುಂಬಾರಗಲ್ಲಿ ಅಗ್ನಿ ದುರಂತವೊಂದಕ್ಕೆ ಸಾಕ್ಷಿಯಾಯ್ತು… ಮಕ್ಕಳ ಆಟದ ಸಾಮಾನು, ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟದ ಮಳಿಗೆ ಧಗಧಗಿಸಿ ಹೊತ್ತಿ ಉರಿದಿತ್ತು. ಆರಂಭದಲ್ಲಿ ಪ್ಲಾಸ್ಟಿಕ್ ಗೋದಾಮಿನ 3, 4ನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಆದ್ರೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ ಒಂದು ಗಂಟೆಯಾದರೂ ಸ್ಥಳಕ್ಕೆ ಆಗಮಿಸಲಿಲ್ಲ. ಇದರಿಂದಾಗಿ ಬೆಂಕಿಯ ಕೆನ್ನಾಲಗೆ 7 ನೇ ಮಹಡಿವರೆಗೂ ಹಬ್ಬಿದೆ. ಗೋದಾಮಿನಲ್ಲಿದ್ದ ಎಲ್ಲ ವಸ್ತುಗಳು ಸುಟ್ಟಕರಕಲಾಗಿದೆ. ಘಟನೆ ವೇಳೆ ಒಬ್ಬ ಮಹಿಳೆ ಮಾತ್ರ ಕಟ್ಟಡದಲ್ಲಿದ್ದು ಅವರನ್ನ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಬೆಂಕಿ ಕಾಣಿಸಿಕೊಂಡಿರುವ ಕಟ್ಟಡಕ್ಕೆ ಪರ್ಯಾಯ ಮಾರ್ಗ ಇಲ್ಲದೆ ಇರುವುದರಿಂದ ಇಕ್ಕಟ್ಟಿನ ಪ್ರದೇಶದಲ್ಲಿ ಫೈರ್ ಇಂಜಿನ್ ವಾಹನ ಬರಲು ಸಮಸ್ಯೆಯಾಯ್ತು. ಅಗ್ನಿಶಾಮಕ ತಡವಾಗಿ ಆಗಮಿಸಿದ್ದಲ್ಲದೆ, ಮೂರು ಮಹಡಿಗಳಿಗೆ ಚಾಚಿದ್ದ ಬೆಂಕಿ ನಂದಿಸುವಷ್ಟರಲ್ಲಿ ನೀರು ಖಾಲಿಯಾಯ್ತು. ಪರಿಣಾಮ ಬೆಂಕಿ ಆರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಅಗ್ನಿಶಾಮಕ ದಳದ 70ಸಿಬ್ಬಂದಿ ಕಟ್ಟಡದ ಮೇಲೆ ಕಿಷ್ಕಿಂಧೆಯಂತ ಸ್ಥಳದಲ್ಲಿ ಬೆಂಕಿನಂದಿಸುವಷ್ಟರಲ್ಲಿ ಹೈರಾಣಾಗಿ ಹೋದ್ರು. ಸಂಜೆ 4 ಗಂಟೆಯಿಂದ ತಡರಾತ್ರಿವರೆಗೂ ಬೆಂಕಿನಂದಿಸುವ ಕಾರ್ಯಾಚರಣೆ ನಡೆಸಲಾಯ್ತು. ಆದರೂ ಸಹ ಇಂದು ಐದನೇ ಮಹಡಿಲ್ಲಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.
ಆಗ್ನಿಶಾಮಕ ದಳದ ನಿರ್ಲಕ್ಷ್ಯದಿಂದಲೇ ಬೆಂಕಿ ಜ್ವಾಲೆ ವ್ಯಾಪಿಸಲು ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಆಗ್ನಿ ಅವಘಡಕ್ಕೆ ಅಸಲಿ ಕಾರಣವೇನು ಎನ್ನುವುದನ್ನು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ