ಬೆಂಗಳೂರಿನ ಕೃಷಿ ಮೇಳದಲ್ಲಿ ಜನರ ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಐಸ್‌ಕ್ರೀಂ

ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ, ತಂಜಾವೂರು (NIFTEM-T) ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳ-2023ರಲ್ಲಿ ಡೈರಿ ಅಲ್ಲದ ಸಿರಿಧಾನ್ಯ ಐಸ್‌ಕ್ರೀಂ ಅನ್ನು ಬಿಡುಗಡೆ ಮಾಡಿದೆ. ಮೇಳಕ್ಕೆ ಭೇಟಿ ನೀಡಿದ್ದ ರೈತರಿಗೆ ಉಚಿತವಾಗಿ ಐಸ್‌ ಕ್ರೀಂ ವಿತರಣೆ ಮಾಡಲಾಯಿತು.

ಬೆಂಗಳೂರಿನ ಕೃಷಿ ಮೇಳದಲ್ಲಿ ಜನರ ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಐಸ್‌ಕ್ರೀಂ
ಕೃಷಿ ಮೇಳ
Follow us
| Edited By: Ayesha Banu

Updated on: Nov 20, 2023 | 7:43 AM

ಬೆಂಗಳೂರು, ನ.20: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದಲ್ಲಿ (Bengaluru Krishi Mela 2023) ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯು (NIFTEM-T) ಡೈರಿ ಅಲ್ಲದ ಸಿರಿಧಾನ್ಯದ (Millet Ice Cream) ಮೂಲಕ ಐಸ್‌ ಕ್ರೀಂ ತಯಾರಿಸುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಕೃಷಿ ಮೇಳದಲ್ಲಿಯೇ ಬಿಡುಗಡೆ ಮಾಡಿದೆ. ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ವಾಣಿಜ್ಯೋದ್ಯಮ ಮತ್ತು ನಿರ್ವಹಣೆಯ ನಿರ್ದೇಶಕರಾದ ವಿ.ಪಳನಿಮುತ್ತು ಅವರು ಭಾನುವಾರ ಕೃಷಿ ಮೇಳದಲ್ಲಿ ಸಿರಿಧಾನ್ಯದ ಐಸ್‌ಕ್ರೀಂ ಅನ್ನು ಬಿಡುಗಡೆ ಮಾಡಿದರು. ಮೇಳಕ್ಕೆ ಭೇಟಿ ನೀಡಿದ್ದ ರೈತರಿಗೆ ಉಚಿತವಾಗಿ ಐಸ್‌ ಕ್ರೀಂ ವಿತರಣೆ ಮಾಡಲಾಯಿತು.

ಸಿರಿಧಾನ್ಯ ಐಸ್‌ಕ್ರೀಂ ಲ್ಯಾಕ್ಟೋಸ್ ಅಸಹಿಷ್ಣುತೆ ಮತ್ತು ಸಸ್ಯಾಹಾರಿ ಜನರಿಗೆ ಸೂಕ್ತವಾಗಿದೆ. ಯುಎಎಸ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ರಾಗಿ ಐಸ್‌ಕ್ರೀಮ್​ನಲ್ಲಿ ಹೆಚ್ಚು ಪೌಷ್ಟಿಕಾಂಶ, ಕಬ್ಬಿಣ ಮತ್ತು ವಿಟಮಿನ್ ಬಿ 1 ಸಮೃದ್ಧವಾಗಿದೆ. ಇದು ಫೈಟೊ-ಪೋಷಕಾಂಶಗಳೊಂದಿಗೆ ಆರೋಗ್ಯ ಸ್ನೇಹಿಯಾಗಿದೆ. ರಾಗಿ ಐಸ್ ಕ್ರೀಮ್​ನಲ್ಲಿ 35.7 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 3.1 ಗ್ರಾಂ ಪ್ರೋಟೀನ್, 9.1 ಗ್ರಾಂ ಕೊಬ್ಬು, 0.6 ಕಚ್ಚಾ ಫೈಬರ್ ಮತ್ತು 183 ಕೆ.ಕೆ.ಎಲ್ ಶಕ್ತಿ ಇದೆ.

ಹಾಲು ಉಪಯೋಗಿಸದೇ ಈ ಐಸ್‌ಕ್ರೀಂ ತಯಾರಿಸಲಾಗುತ್ತಿದೆ. ಇದು ಕಬ್ಬಿಣಾಂಶ ಮತ್ತು ವಿಟಿಮಿನ್‌ ಬಿನಿಂದ ಸಮೃದ್ಧವಾಗಿದೆ. ನವಣೆ, ರಾಗಿ, ಜೋಳ ಮುಂತಾದ ಸಿರಿಧಾನ್ಯಗಳನ್ನು ನೀರಲ್ಲಿ ನೆನೆಸಿಟ್ಟು, ನಿಗದಿತ ಪ್ರಮಾಣದಲ್ಲಿ ಪುಡಿಮಾಡಿ ಅದರ ಹಾಲು ತೆಗೆಯಲಾಗುತ್ತದೆ. ಶೇ 7ರಷ್ಟು ಹಾಲು ರಹಿತ ಕ್ರೀಂ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಯಾವುದೇ ಕೃತಕ ಫ್ಲೇವರ್‌, ಬಣ್ಣ ಬಳಸುವುದಿಲ್ಲ. ಸಕ್ಕರೆ ಕೂಡ ಸೇರಿಸುವುದಿಲ್ಲ. ಸಿರಿಧಾನ್ಯಗಳಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣದ ಅಂಶ, ವಿಟಮಿನ್‌ಗಳು ಐಸ್‌ಕ್ರೀಂನಲ್ಲಿರಲಿವೆ ಎಂದು ವಿ. ಪಳನಿಮುತ್ತು ವಿವರಿಸಿದರು.

ಸಿಲಿಕಾನ್ ಸಿಟಿಯ ಬ್ಯೂಸಿ ಲೈಫ್, ವೇಗವಾಗಿ ಓಡ್ತಿರೋ ಜಗತ್ತಿನ ಮಧ್ಯೆ ಕೃಷಿ, ಕೃಷಿ ಸಂಬಂಧಿತ ಚಟುವಟಿಕೆಗಳನ್ನ ತಲುಪಿಸೋ ಕೆಲಸವನ್ನ ಕೃಷಿ ವಿಶ್ವವಿದ್ಯಾಲಯ ಮಾಡಿದೆ. ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯ ಅನ್ನೋ ಘೋಷಣೆ ಜೊತೆ ಈ ವರ್ಷದ ಕೃಷಿಮೇಳ ನಡೆಸಲಾಗಿದೆ. ಕೃಷಿಮೇಳದ ಎರಡನೇ ದಿನ ಕೃಷಿ ಮೇಳದಲ್ಲಿ ಆಹಾರ ಮೇಳ ಏರ್ಪಡಿಸಲಾಗಿತ್ತು. ಮಿಲೆಟ್ ಆಹಾರ ಮೇಳದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಐಸ್‌ಕ್ರೀಂ, ಬಿಸ್ಕೆಟ್, ಸೇರಿದಂತೆ ವೈರಾಯಿಟಿ ವೈರಾಯಿಟಿ ಆಹಾರ ಪ್ರದರ್ಶನಕ್ಕೆ ಇಡಲಾಗಿತ್ತು. ವಿಶೇಷವಾಗಿ ರೈತರೇ ತಯಾರಿಸಿದ ಸಿರಿಧಾನ್ಯಗಳ ಆಹಾರಗಳನ್ನ ಪ್ರದರ್ಶನ ಮಾಡಲಾಯಿತು.

ಇದನ್ನೂ ಓದಿ: ಧಾರವಾಡ ಕೃಷಿ ಮೇಳದಲ್ಲಿ ಗಮನ ಸೆಳೆದ ಚಿಟ್ಟೆಗಳ ಪ್ರದರ್ಶನ, ಕೀಟಗಳಿಂದ ತಯಾರಿಸಿದ ಆಹಾರ

ಇನ್ನು ಈ ಬಾರೀ ಕೃಷಿಮೇಳದಲ್ಲಿ ಸುಮಾರು 625 ಮಳಿಗೆಗಳನ್ನ ತೆರೆಯಲಾಗಿದ್ದು, ರಾಗಿ, ಸೂರ್ಯಕಾಂತಿ, ಸೇರಿದಂತೆ ಕೆಲ ಸಿರಿಧಾನ್ಯಗಳ ತಳಿಗಳನ್ನ ಅಭಿವೃದ್ಧಿಪಡಿಸಿದ್ದು ಇಲ್ಲಿ ಅನಾವರಣ ಮಾಡಲಾಗಿತ್ತು. ಸಾಕಷ್ಟು ಮಳಿಗೆ ಹಾಗೂ ತಂತ್ರಜ್ಞಾನದ ವೇದಿಕೆ ಅವಕಾಶ ಒದಗಿಸಲಾಗಿದ್ದು ಮಿಲೆಟ್ ಅಹಾರ ಮೇಳದಲ್ಲಿ ಹೊಸ ಬಗೆಯ ಆಹಾರದ ಜೊತೆ ಅನೇಕ ಮಾಹಿತಿಗಳನ್ನ ಜನರು ಪಡೆದು ಕೊಂಡ್ರು.

ರೈತರ ಆವಿಷ್ಕಾರ ಹಾಗೂ ಕೃಷಿ ನವೋದ್ಯಮ, ಕೃಷಿಯಲ್ಲಿ ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಹನಿ ಹಾಗೂ ತುಂತುರು ನೀರಾವರಿ ಪದ್ಧತಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿ, ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ, ಸೇರಿ ಕೃಷಿಲೋಕವೇ ಕೃಷಿ ಮೇಳದಲ್ಲಿಅನಾವರಣವಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ