ಬೆಂಗಳೂರು: ಶ್ವಾನದ ರಕ್ಷಣೆಗೆ ಮುಂದಾಗಿದ್ದ ಯುವತಿಯ ಖಾಸಗಿ ಅಂಗ ಮುಟ್ಟಿ ಪರಾರಿ, ವ್ಯಕ್ತಿ ಬಂಧನ
ಬೆಂಗಳೂರಿನ ಅಮೃತಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ಅಪಘಾತಕ್ಕೊಳಗಾದ ಶ್ವಾನಕ್ಕೆ ಯುವತಿ ಸಹಾಯ ಮಾಡುತ್ತಿದ್ದ ವೇಳೆ ಕೃತ್ಯವೆಸಗಲಾಗಿದೆ. ಸೆಪ್ಟೆಂಬರ್ 7 ರಂದು ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 15: ನಗರದಲ್ಲಿ ಯುವತಿಯ (girl) ಮೇಲೆ ಲೈಂಗಿಕ ದೌರ್ಜನ್ಯ (Sexually Assault) ಆರೋಪಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಎಂಬಾತನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಹೀಗಾಗಿ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದದ್ದೇನು?
ಈ ಘಟನೆ ಸೆ.7ರಂದು ರಾತ್ರಿ 11.50ರ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಕ್ಕೂರು ಮುಖ್ಯರಸ್ತೆಯಲ್ಲಿ ಶ್ವಾನ ಒಂದು ಅಪಘಾತಕ್ಕೆ ಒಳಗಾಗಿತ್ತು. ಹೀಗಾಗಿ ಕಾರು ನಿಲ್ಲಿಸಿ ಶ್ವಾನದ ರಕ್ಷಣೆಗೆ ಯುವತಿ ಮುಂದಾಗಿದ್ದಳು.
ಇದನ್ನೂ ಓದಿ: ಕಿಸ್ ಕೊಟ್ರೆ ಫೋನ್: ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಚಾಲಕನಿಗೆ ಬಿತ್ತು ಗುಸಾ
ಕೈಗೆ ರಕ್ತ ಆಗಿದ್ದರಿಂದ ಪೆಟ್ರೋಲ್ ಬಂಕ್ ಬಳಿ ಯುವತಿ ತೊಳೆದು ಕೊಳ್ಳುತ್ತಿದ್ದಳು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಆರೋಪಿ, ಬ್ಯಾಡ್ ಟಚ್ ಮಾಡಿ ತೆರಳಿದ್ದ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಪರಾರಿ ಆಗಿದ್ದ.
ಲೇಡೀಸ್ ಪಿಜಿಗೆ ನುಗ್ಗಿ ಯುವತಿಗೆ ಕಿರುಕುಳ: ಆರೋಪಿ ಅರೆಸ್ಟ್
ಆಗಸ್ಟ್ 29 ರ ನಡುರಾತ್ರಿ ನಗರದ ಬಿಟಿಎಂ ಲೇಔಟ್ನ ಲೇಡೀಸ್ ಪಿಜಿಗೆ ನುಗ್ಗಿದ ಕಾಮುಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದ ಘಟನೆ ನಡೆದಿತ್ತು. ನಂತರ ಆಸಾಮಿ ನಾಪತ್ತೆಯಾಗಿದ್ದ. ಈ ಬಗ್ಗೆ ಎಸ್ಜಿ ಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗೆ ಬಲೆ ಬೀಸಿದ್ದರು.
ಇದನ್ನೂ ಓದಿ: ಬೆಂಗಳೂರು: ಮಧ್ಯರಾತ್ರಿ ಮನೆ ಬಾಗಿಲು ಬಡಿದು ನಗ್ನ ಕಾಮುಕನಿಂದ ದಾಂಧಲೆ, ಬೆಚ್ಚಿಬಿದ್ದ ತಾಯಿ-ಮಗಳು
ಯುವತಿಗೆ ಕಿರುಕುಳ ನೀಡಿದ ಆಂಧ್ರದ ಮದನಪಲ್ಲಿ ಮೂಲದ ನರೇಶ್ ಪಟ್ಯಂ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆರೋಪಿ ನರೇಶ್ ಬೈಕ್ ಟ್ಯಾಕ್ಸಿ ಮತ್ತು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಆಗಾಗ ಕಳ್ಳತನಕ್ಕೂ ಕೈ ಹಾಕುತ್ತಿದ್ದನಂತೆ. ಕಳೆದ ಭಾನುವಾರ ರಾತ್ರಿ ಕೂಡ ಲೇಡೀಸ್ ಪಿಜಿಗೆ ನುಗ್ಗಿದ ಆಸಾಮಿ, ಕಳ್ಳತನಕ್ಕೆ ಮುಂದಾಗಿದ್ದ. ಈ ವೇಳೆ ಮಲಗಿದ್ದ ಯುವತಿಗೆ ಕಿರುಕುಳ ನೀಡಿ, ಚಾಕು ತೋರಿಸಿ ಬೆದರಿಸಿದ್ದ. ನಂತರ 2500 ರೂ. ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಕೀಚಕನ ಈ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ದೃಶ್ಯಾವಳಿ ಆಧರಿಸಿ ಆರೋಪಿ ನರೇಶ್ನನ್ನ ಬಂಧಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



