AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲೆಸೆಯುವವರಿಗೆ ಕಲ್ಲಿನಿಂದಲೇ ಉತ್ತರ ಕೊಡಬೇಕು: ಬೆಂಗಳೂರಿನಲ್ಲಿ ವಿವಾದದ ಕಿಡಿ ಹೊತ್ತಿಸಿದ ಸಾಧ್ವಿ ಪ್ರಜ್ಞಾ ಸಿಂಗ್

ಬೆಂಗಳೂರಿನ ವಿಜಯನಗರದಲ್ಲಿ ನಡೆದ ಬೃಹತ್ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕೆಂದು ಕರೆ ನೀಡಿದ ಅವರು, ಕಲ್ಲು ಎಸೆಯುವವರಿಗೆ ಕಲ್ಲಿನಿಂದಲೇ ಪ್ರತಿಕ್ರಿಯಿಸಬೇಕು ಎಂದಿದ್ದಾರೆ. ಅಲ್ಲದೆ, ಮೋದಿ ಹೆಸರು ಹೇಳಿದರೆ ಕೆಲವರ ಪೈಜಾಮಾ ಒದ್ದೆಯಾಗತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಕಲ್ಲೆಸೆಯುವವರಿಗೆ ಕಲ್ಲಿನಿಂದಲೇ ಉತ್ತರ ಕೊಡಬೇಕು: ಬೆಂಗಳೂರಿನಲ್ಲಿ ವಿವಾದದ ಕಿಡಿ ಹೊತ್ತಿಸಿದ ಸಾಧ್ವಿ ಪ್ರಜ್ಞಾ ಸಿಂಗ್
ಬೆಂಗಳೂರಿನ ವಿಜಯನಗರದಲ್ಲಿ ನಡೆದ ಬೃಹತ್ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
ಹರೀಶ್ ಜಿ.ಆರ್​.
| Edited By: |

Updated on: Sep 15, 2025 | 7:22 AM

Share

ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕದಲ್ಲಿ (Karnataka) ಸಾಲು ಸಾಲು ಗಣೇಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಮದ್ದೂರು ಕಲ್ಲುತೂರಾಟ ಘಟನೆ ಬಳಿಕ ಬಿಜೆಪಿ ನಾಯಕರು ಇದೇ ಸಂದರ್ಭವನ್ನು ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ರಾಷ್ಟ್ರೀಯ ನಾಯಕರು ಕೂಡ ರಾಜ್ಯಕ್ಕೆ ಲಗ್ಗೆ ಇಟ್ಟು ಹಿಂದೂಪರ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಬೆಂಗಳೂರಿನ (Bengaluru) ವಿಜಯನಗರದಲ್ಲಿ ಭಾನುವಾರ ನಡೆದ ಬೃಹತ್ ಹಿಂದೂ ಮಹಾಗಣಪತಿ ಶೋಭಯಾತ್ರೆಯಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದೇನು?

ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಮುಂದೆ ಕೃಷ್ಣನ ಮಂದಿರ ನಿರ್ಮಾಣ ಮಾಡಬೇಕಿದೆ. ಈ ಸರ್ಕಾರ ಹಿಂದೂಗಳ ಸರ್ಕಾರ ಅಲ್ಲ. ಆದ್ದರಿಂದ, ಎಲ್ಲರೂ ಒಂದಾಗಿ ಮುಂದೆ ಹಿಂದೂ ಸರ್ಕಾರ ತನ್ನಿ ಎಂದು ಕರೆ ನೀಡಿದರು. ಅಲ್ಲದೆ, ಯುವಕರೇ ನಿಮ್ಮ ಸಂಖ್ಯೆ ಹೆಚ್ಚಿಸಿ, ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ‌ ಎಂದು ಕರೆ ನೀಡಿದರು.

ನಮ್ಮ ಯಾತ್ರೆ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಾರೆ. ಕಲ್ಲು ಎಸೆಯುವವರಿಗೆ ನಾವು ಕಲ್ಲಿನಿಂದಲೇ ಉತ್ತರ ನೀಡಬೇಕು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ಸರ್ಕಾರ ಅಲ್ಲ. ಇಲ್ಲಿನ ಶಿವಾಜಿನಗರದಲ್ಲಿ ಹಿಂದೂಗಳನ್ನು ಪ್ರವೇಶ ಮಾಡಲು ಬಿಡುತ್ತಿಲ್ಲ. ಹೀಗಾಗಿ, ನೀವೆಲ್ಲ ಶಿವಾಜಿ ಮಹಾರಾಜರಾಗಬೇಕು ಎಂದು ಕರೆ ನೀಡಿದರು.

ಕತ್ತಿ ಇಟ್ಟುಕೊಳ್ಳಿ, ಅವಶ್ಯಕತೆ ಬಿದ್ದಾಗ ಶಿರಚ್ಛೇದ ಮಾಡಿ: ಪ್ರಜ್ಞಾ ಸಿಂಗ್

ನಾನು ಒಮ್ಮೆ ಮಂಗಳೂರಿಗೆ ಹೋಗಿದ್ದಾಗ, ‘ನಿಮ್ಮ ರಕ್ಷಣೆಗಾಗಿ ಕತ್ತಿ ಇಟ್ಟುಕೊಳ್ಳಿ, ಅವಶ್ಯಕತೆ ಬಿದ್ದಾಗ ಶಿರಚ್ಛೇದ ಮಾಡಿ ಎಂದು ಹೇಳಿದ್ದೆ. ಅದನ್ನೇ ನಿಮಗೂ ಹೇಳುತ್ತಿದ್ದೇನೆ. ಇಲ್ಲಿನ ಹಿಂದೂಗಳು ಹುಲಿಯಾಗಿರಿ, ಸನಾತನಿಗಳನ್ನು ಯಾರೂ ಹೆದರಿಸಲು ಆಗಲ್ಲ ಎಂದರು. ನಾವು ಯಾರನ್ನೂ ಕೊಲೆ ಮಾಡಲ್ಲ, ಆದರೆ ನಮ್ಮನ್ನು ಕೊಲ್ಲಲು ಬಂದವರನ್ನು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಹೆಸರು ಹೇಳಿದರೆ ಕೆಲವರಿಗೆ ಪೈಜಾಮಾ ಒದ್ದೆ: ಪ್ರಜ್ಞಾ ಸಿಂಗ್ ವ್ಯಂಗ್ಯ

ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಜ್ಞಾ ಸಿಂಗ್, ನೀವು ತಪ್ಪು ಮಾಡಿದ್ದೀರಿ. ತಪ್ಪು ಸರ್ಕಾರವನ್ನು ಆಯ್ಕೆ ಮಾಡಿದ್ದೀರಿ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ಸರ್ಕಾರ ಅಲ್ಲ. ಅಷ್ಟೇ ಅಲ್ಲದೆ, ನಾವು ಭಾರತವನ್ನು ತಾಯಿ ಎನ್ನುತ್ತೇವೆ, ಆದರೆ ಇಟಲಿಯ ತಾಯಿ ಆಕೆಯ ಮಗನಿಗೆ ಸರಿಯಾಗಿ ಪಾಠ ಮಾಡಿಲ್ಲ. ತಾಯಿಯನ್ನು ಗೌರವಿಸುವುದನ್ನು ಇಟಲಿಯ ತಾಯಿ ಮಗನಿಗೆ ಹೇಳಿಕೊಟ್ಟಿಲ್ಲ ಎಂದು ಸೋನಿಯಾ ಗಾಂಧಿ ವಿರುದ್ಧ ಟೀಕಾಪ್ರಹಾರ ಮಾಡಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿದರೆ ಕೆಲವರಿಗೆ ಪೈಜಾಮಾ ಒದ್ದೆಯಾಗುತ್ತದೆ ಎಂದು ಕುಹಕವಾಡಿದರು.

ಇದನ್ನೂ ಓದಿ: ‘‘ನೀವು ಕಲ್ ಯಾಕ್ ಒಗೀತಿರೋ ಹಲ್ಕಟ್ ನನ್ ಮಕ್ಳ?’‘ ತುಮಕೂರಲ್ಲಿ ಮತ್ತೆ ಗುಡುಗಿದ ಯತ್ನಾಳ್

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಸ್ಥಾನದ ಯೋಗಿ ಲಕ್ಷ್ಮಣನಾಥ್ ಸ್ವಾಮೀಜಿ ಕೂಡ ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್ ವಿರುದ್ಧ ಕೆಂಡಕಾರಿದರು. ಇದು ಟಿಪ್ಪು, ಬಾಬರ್ ಭೂಮಿ ಅಲ್ಲ, ಇದು ಕೆಂಪೇಗೌಡರ ಭೂಮಿ‌ ಎಂದರು. ಅಲ್ಲದೆ, ನಿಮ್ಮ ಮಕ್ಕಳಿಗೆ ಒಂದು ಲಕ್ಷ ರೂಪಾಯಿ ಮೊಬೈಲ್ ಕೊಡಿಸುವ ಬದಲು, ಧರ್ಮ ರಕ್ಷಣೆಗಾಗಿ ಒಂದು ಒಳ್ಳೆಯ ತಲ್ವಾರ್ ಕೊಡಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಾರತ ದೇಶದ ಉಳಿವಿಗಾಗಿ ನಾವೆಲ್ಲ ಒಗ್ಗಟ್ಟಾಗಬೇಕಿದೆ‌ ಎಂದು ಕರೆ ನೀಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ