ಬೆಡ್ ರೂಂನಲ್ಲೇ ರಹಸ್ಯ ಕ್ಯಾಮರಾ, ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸ್ತಿದ್ದ ಪತಿ! ದೂರು ದಾಖಲಾಗ್ತಿದ್ದಂತೆಯೇ ಪರಾರಿ

ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಪತಿಯೇ ತನ್ನ ಸ್ನೇಹಿತರ ಜತೆ ಹಂಚಿಕೊಂಡ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಸಯ್ಯದ್ ಇನಾಮುಲ್ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯು ಈಗಾಗಲೇ ಮದುವೆಯಾಗಿದ್ದು, ವರದಕ್ಷಿಣೆ ಪಡೆದು ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ. ಅಲ್ಲದೆ, 19 ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದಾಗಿ ಹೆಂಡತಿ ಜತೆ ಹೇಳಿಕೊಂಡಿದ್ದಾನೆ. ಸದ್ಯ ಆರೋಪಿ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಡ್ ರೂಂನಲ್ಲೇ ರಹಸ್ಯ ಕ್ಯಾಮರಾ, ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸ್ತಿದ್ದ ಪತಿ! ದೂರು ದಾಖಲಾಗ್ತಿದ್ದಂತೆಯೇ ಪರಾರಿ
ಆರೋಪಿ ಸೈಯದ್ ಇನಾಮುಲ್ ಹಾಗೂ ಸಂತ್ರಸ್ತೆ

Updated on: Oct 03, 2025 | 10:49 AM

ಬೆಂಗಳೂರು, ಅಕ್ಟೋಬರ್ 3: ಮನೆಯ ಬೆಡ್​ ರೂಂನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರಿನ (Bengaluru) ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಸೈಯದ್ ಇನಾಮುಲ್ ಎಂಬಾತನೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಕೆಯ ಮದುವೆಯಾಗಿದೆ. ಆದರೆ, ಆತ ಈಗಾಗಲೇ ಮತ್ತೊಂದು ಮದುವೆಯಾಗಿದ್ದ. ಆ ವಿಚಾರವನ್ನು ತಿಳಿಸದೇ ಎರಡನೇ ಮದುವೆ ಮಾಡಿಕೊಂಡಿದ್ದಾನೆಂದು ಆರೋಪ ಮಾಡಲಾಗಿದೆ.

19 ಮಹಿಳೆಯರ ಜತೆ ಸಂಬಂಧವಿದೆ ಎಂದಿದ್ದ ಸಯ್ಯದ್!

ಆರೋಪಿ ಸಯ್ಯದ್ ದಿನನಿತ್ರ ಹೆಂಡತಿಗೆ ಕಿರುಕುಳ ನೀಡುತ್ತಿದ್ದುದಲ್ಲದೆ, 19 ಮಂದಿ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೆಮ್ಮೆಪಟ್ಟು ಹೇಳಿಕೊಳ್ಳುತ್ತಿದ್ದ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಹೆಂಡತಿ ಜತೆಗಿನ ಸೆಕ್ಸ್ ವಿಡಿಯೋ ದುಬೈಯಲ್ಲಿರೋ ಸ್ನೇಹಿತರಿಗೆ ಕಳುಹಿಸ್ತಿದ್ದ ಸಯ್ಯದ್

ಮನೆಯ ಬೆಡ್​ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿ ಹೆಂಡತಿ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪಿ, ಆ ಖಾಸಗಿ ವಿಡಿಯೋಗಳನ್ನು ದುಬೈಯಲ್ಲಿ ವಾಸಿಸುವ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲದೆ, ಹೊರದೇಶದಲ್ಲಿರುವ ತನ್ನ ಕೆಲವು ಮಂದಿ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಪತ್ನಿಯನ್ನು ಒತ್ತಾಯಿಸಿರುವ ಗಂಭೀರ ಆರೋಪ ಕೂಡ ದಾಖಲಾಗಿದೆ.

ಭರ್ಜರಿ ವರದಕ್ಷಿಣೆಯನ್ನೂ ಪಡೆದಿದ್ದ ಆರೋಪಿ

ಆರೋಪಿಗೆ ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ಯಮಹಾ ಏರೋಕ್ ದ್ವಿ ಚಕ್ರ ವಾಹನ, 340 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕೊಲಾಗಿತ್ತು. ಮದುವೆ ಸಮಯದಲ್ಲಿ ಆರೋಪಿಯ ದೊಡ್ಡ ತಂಗಿಯ ಗಂಡನಾದ ಅಮೀನ್ ಬೇಗ್ (ಆರೋಪಿ-2) ಎಂಬಾತನು ಕ್ಯಾಟರಿಂಗ್ ವಿಳಂಬವಾಗಿರುವ ವಿಚಾರದಲ್ಲಿ, ಹಲವಾರು ಜನರ ಎದುರು ಜಗಳ ಮಾಡಿ ಪಿರ್ಯಾದಿಯ ಕುಟುಂಬ ವರ್ಗದವರಿಗೆ ಅವಮಾನ ಮಾಡಿರುತ್ತಾನೆ. 17-12-2024 ರಂದು ಆರೋಪಿ ಸಯ್ಯದ್, ತನಗೆ ಈಗಾಗಲೇ ಮದುವೆಯಾಗಿದ್ದು, ನೀನು 2ನೇ ಹೆಂಡತಿಯಾಗಿದ್ದಿ. ಅಲ್ಲದೇ ನನಗೆ 19 ಹೆಂಗಸರೊಂದಿಗೆ ಸಂಬಂಧವಿದೆ ಎಂಬುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಹೃದಯ ಭಾಗದಲ್ಲೇ ಬಾಲ್ಯ ವಿವಾಹ? 16 ವರ್ಷದ ಬಾಲಕಿಗೆ ಬಲವಂತದ ಮದುವೆ ಆರೋಪ, ಕೇಸ್ ದಾಖಲು

ಸಂತ್ರಸ್ತೆಯು ಆಕೆಯ ತಂದೆ-ತಾಯಿಯನ್ನು ಭೇಟಿ ಮಾಡದಂತೆ ನೋಡಿಕೊಂಡಿದ್ದ ಆರೋಪಿ, ಒಂದು ವೇಳೆ ಭೇಟಿಯಾಗಿ ತನ್ನ ಬಗ್ಗೆ ದೂರಿತ್ತರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ. ಸದ್ಯ ಮಹಿಳೆಯ ದೂರಿನ ಆಧಾರದಲ್ಲಿ ಪುಟ್ಟೇನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us