‘ಮೇಡಂ’ ಎಂದು ಕರೆದ, ಆಕೆ ತಿರುಗಿ ನೋಡುತ್ತಲೇ ಹಸ್ತಮೈಥುನ ಮಾಡಿದ! ಬೆಂಗಳೂರಿನಲ್ಲಿ ಯುವಕನಿಂದ ಅಸಹ್ಯ ಕೃತ್ಯ

ಬೆಂಗಳೂರಿನ ಇಂದಿರಾ ನಗರದಲ್ಲಿ ಯುವಕನೊಬ್ಬ ವಾಕಿಂಗ್ ಹೋಗುತ್ತಿದ್ದ ಮಹಿಳೆ ಎದುರು ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ. ಸದ್ಯ ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕೃತ್ಯವು ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಮೇಡಂ’ ಎಂದು ಕರೆದ, ಆಕೆ ತಿರುಗಿ ನೋಡುತ್ತಲೇ ಹಸ್ತಮೈಥುನ ಮಾಡಿದ! ಬೆಂಗಳೂರಿನಲ್ಲಿ ಯುವಕನಿಂದ ಅಸಹ್ಯ ಕೃತ್ಯ
ಸಾಂದರ್ಭಿಕ ಚಿತ್ರ

Updated on: Nov 04, 2025 | 11:23 AM

ಬೆಂಗಳೂರು, ನವೆಂಬರ್ 4: ಸಾಕು ನಾಯಿಯೊಂದಿಗೆ ಬೆಳಗ್ಗಿನ ವಾಕಿಂಗ್ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ‘ಮೇಡಂ’ ಎಂದು ಕರೆದ ಯುವಕನೊಬ್ಬ, ಆಕೆ ತಿರುಗಿ ನೋಡುತ್ತಿದ್ದಂತೆಯೇ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡ ಅಹಸ್ಯಕರ ಘಟನೆ ಬೆಂಗಳೂರಿನ (Bengaluru) ಇಂದಿರಾನಗರದಲ್ಲಿ ನವೆಂಬರ್ 1 ರಂದು ನಡೆದಿದೆ. ಯುವಕನ ವರ್ತನೆಯಿಂದ ಆಘಾತಗೊಂಡ ಮಹಿಳೆ ತಕ್ಷಣವೇ ಮನೆಗೆ ಓಡಿಹೋಗಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆ ನೀಡಿದ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಇಂದಿರಾ ನಗರದಲ್ಲಿ ನಡೆದಿದ್ದೇನು?

ನವೆಂಬರ್ 1ರ ಬೆಳಗ್ಗೆ ಸುಮಾರು 11 11:57 ರ ಸುಮಾರಿಗೆ ಮಹಿಳೆಯು ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಆಗ ಏಕಾಏಕಿ 30 ರ ಹರೆಯದ ವ್ಯಕ್ತಿಯೊಬ್ಬ ‘‘ಮೇಡಂ’’ ಎಂದು ಕರೆದು ಗಮನ ಸೆಳೆಯಲು ಯತ್ನಿಸಿದ್ದಾನೆ. ಮಹಿಳೆಯು ಆತನ ಕಡೆಗೆ ತಿರುಗಿದಾಗ ಆತ, ಖಾಸಗಿ ಅಂಗ ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ ಎಂದು ‘ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ನಾಯಿಯೊಂದಿಗೆ ಮನೆಗೆ ಓಡಿಹೋಗಿದ್ದಾರೆ. ನಂತರ ಸಹೋದರಿ ಮತ್ತು ಸ್ನೇಹಿತರಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪಿಟಿಐ ವರದಿ ಉಲ್ಲೇಖಿಸಿದೆ.

ಈ ಕೃತ್ಯವು ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ವ್ಯಾಪಾರಿಗೆ ಅಂತಾರಾಜ್ಯ ಆನ್​ಲೈನ್ ಚೋರರಿಂದ 1 ಕೋಟಿ ರೂ. ಪಂಗನಾಮ

ಆರೋಪಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Tue, 4 November 25