ಮೆಟ್ರೋ ನಿಲ್ದಾಣದಲ್ಲಿ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ: ಜಸ್ಟ್​​ ಎರಡು ಹಂತದಲ್ಲಿ ಟಿಕೆಟ್​​ ಕೈಗೆ

ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಹೊಸ ಕ್ಯೂ.ಆರ್​ ಟಿಕೆಟ್ ಯಂತ್ರಗಳನ್ನು ಪರಿಚಯಿಸಿದೆ. ಈ ಸ್ವಯಂ ಸೇವಾ ಯಂತ್ರಗಳು 30 ಸೆಕೆಂಡುಗಳಲ್ಲಿ ಟಿಕೆಟ್​ಗಳನ್ನು ಒದಗಿಸುತ್ತವೆ. ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 10 ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದು ಬಿಎಂಆರ್​ಸಿಎಲ್​​ ತಿಳಿಸಿದೆ.

ಮೆಟ್ರೋ ನಿಲ್ದಾಣದಲ್ಲಿ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ: ಜಸ್ಟ್​​ ಎರಡು ಹಂತದಲ್ಲಿ ಟಿಕೆಟ್​​ ಕೈಗೆ
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಸೇವಾ ಟಿಕೆಟ್ ಯಂತ್ರಗಳ ವ್ಯವಸ್ಥೆ

Updated on: May 08, 2025 | 8:00 AM

ಬೆಂಗಳೂರು, ಮೇ 08: ಸಿಲಿಕಾನ್​ ಸಿಟಿ ಜನರು ನಿತ್ಯ ಓಡಾಟಕ್ಕೆ ಹೆಚ್ಚಾಗಿ ನಮ್ಮ ಮೆಟ್ರೋವನ್ನು (Namma Metro) ಅವಲಂಬಿಸಿದ್ದಾರೆ. ಹೀಗಾಗಿ ಸಾಮಾನ್ಯವಾಗಿ ಜನದಟ್ಟಣೆ ಉಂಟಾಗುತ್ತದೆ. ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಇನ್ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಏಕೆಂದರೆ ವೇಗವಾಗಿ ಮತ್ತು ಸುಲಭವಾಗಿ ಟಿಕೆಟ್ ಪಡೆಯಲು ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಸೇವಾ ಕ್ಯೂ.ಆರ್ ಟಿಕೆಟ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಪ್ರಯಾಣಿಕರು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದಾಗಿ ಎಂದು ಬಿಎಂಆರ್​ಸಿಎಲ್ (BMRCL)​ ತಿಳಿಸಿದೆ.

10 ನೂತನ ಸ್ವಯಂ ಸೇವಾ ಟಿಕೆಟ್ ಯಂತ್ರಗಳು

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರು ಬೆಂಗಳೂರು ಮೆಟ್ರೋ ರೈಲು ನಿಗಮ, ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಡಿಜಿಟಲ್ ನವೀನತೆಗಳನ್ನು ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ನೂತನ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ
ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ
ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್​ಡೇಟ್, ಬೆಂಗಳೂರಿನತ್ತ 3ನೇ ಚಾಲಕರಹಿತ ರೈಲು
ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಮೂರು ಹೆಚ್ಚುವರಿ ಹೊಸ ಬೋಗಿಗಳ ರವಾನೆ
ಪ್ರಯಾಣಿಕರ ಗಮನಕ್ಕೆ: ಭಾನುವಾರದಂದು ನಮ್ಮ ಮೆಟ್ರೋ ನಸುಕಿನಿಂದಲೇ ಆರಂಭ

ಬಿಎಂಆರ್​ಸಿಎಲ್ ಟ್ವೀಟ್​


ಈ ಯಂತ್ರಗಳು QR-ಆಧಾರಿತ ಟಿಕೆಟ್‌ಗಳನ್ನು ತ್ವರಿತವಾಗಿ ಮತ್ತು ಸಂಪರ್ಕರಹಿತವಾಗಿ ವಿತರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಸಾಂಪ್ರದಾಯಿಕ ಏಕ ಪ್ರಯಾಣ ಟೋಕನ್‌ಗಳನ್ನು ಕ್ರಮೇಣ ಬದಲಾಯಿಸುತ್ತದೆ ಎಂದು ಮಾಹಿತಿ ನೀಡಿದೆ.

ಸರಳವಾದ ಎರಡು-ಹಂತದ ಪ್ರಕ್ರಿಯೆ, 30 ಸೆಕೆಂಡನಲ್ಲೇ  ಟಿಕೆಟ್

  • ನಿಮ್ಮ ಗಮ್ಯಸ್ಥಾನ ಆಯ್ಕೆಮಾಡಿ: ಪ್ರಯಾಣಿಕರು ಡ್ರಾಪ್-ಡೌನ್ ಮೆನು ಅಥವಾ ನಕ್ಷೆಯನ್ನು ಉಪಯೋಗಿಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಬಹುದು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಫೇರ್ ಪರಿಶೀಲಿಸಬಹುದು.
  • ಪಾವತಿ ಮಾಡಿ: ಯಾವುದೇ ಯುಪಿಐ ಆಧಾರಿತ ಮೊಬೈಲ್ ಆ್ಯಪ್​ಗಳ ಮೂಲಕ ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ನಂತರ ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಪ್ರಕಟವಾಗುತ್ತದೆ.

ಈ ಕ್ಯೂಆರ್ ಟಿಕೆಟ್‌ಗಳನ್ನು ನಿಲ್ಯಾಣದ ಎಂಟ್ರಿ ಮತ್ತು ಎಕ್ಸಿಟ್ ಗೇಟ್‌ಗಳಲ್ಲಿ ಬಳಸಬಹುದಾಗಿದೆ. ಪ್ರಯಾಣ ಮುಗಿಸಿದ ನಂತರ, ಪ್ರಯಾಣಿಕರು ಟಿಕೆಟ್‌ಗಳನ್ನು ನಿಗದಿತ ಕಸದ ಬಾಕ್ಸುಗಳಲ್ಲಿ ಹಾಕುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಇದು ಸ್ವಚ್ಛತೆ ಮತ್ತು ಪರಿಸರಸ್ನೇಹಿ ಕ್ರಮಗಳ ಭಾಗವಾಗಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕ: ದಂಡ ವಿಧಿಸಿದ ಬಿಎಂಆರ್​ಸಿಎಲ್​​

‘ಪ್ರಯಾಣಿಕರ ಅನುಭವವನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ಸ್ವಯಂ ಸೇವಾ ಟಿಕೆಟ್ ಯಂತ್ರಗಳ ಪರಿಚಯವು ನಮ್ಮ ಮೆಟ್ರೋ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಸುಗಮವಾಗಿ ಮತ್ತು ಆಧುನಿಕ ಪಾವತಿ ವಿಧಾನಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. ಪ್ರಯಾಣಿಕರ ಅನುಕೂಲತೆ ಮತ್ತು ಸುಲಭ ಪ್ರವೇಶದತ್ತ ಇದು ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ’ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:57 am, Thu, 8 May 25