Bengaluru: ನಾಗರಬಾವಿಯಲ್ಲಿ ಕಟ್ಟಡ ವಾಲಲು ಕಾರಣವೇನು? ಪ್ರಕರಣದ ಬಗ್ಗೆ ಮನೆ ಮಾಲೀಕರ ಪ್ರತಿಕ್ರಿಯೆ ಇಲ್ಲಿದೆ

TV9 Digital Desk

| Edited By: ganapathi bhat

Updated on: Oct 04, 2021 | 2:48 PM

Bengaluru News: ಕಟ್ಟಿರುವ ಮನೆಯನ್ನು ನಾವು ತೆಗೆದುಕೊಂಡಿದ್ದೇವೆ. ನಾವು ಮನೆ ಕಟ್ಟಿಲ್ಲ, ಈ ಮನೆ ನಮಗೆ ಗಿಫ್ಟ್ ಆಗಿ ಸಿಕ್ಕಿರೋದು. ನಾವು ದುಡ್ಡು ಕೊಟ್ಟು ತೆಗೆದುಕೊಡಿಲ್ಲ. ಬಿಬಿಎಂಪಿ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಒಂದು ಮನೆ ಬಾಡಿಗೆ ನೀಡಿದ್ದೇವೆ ಎಂದು ಮನೆ ಮಾಲೀಕರು ಮಾಹಿತಿ ನೀಡಿದ್ದಾರೆ.

Bengaluru: ನಾಗರಬಾವಿಯಲ್ಲಿ ಕಟ್ಟಡ ವಾಲಲು ಕಾರಣವೇನು? ಪ್ರಕರಣದ ಬಗ್ಗೆ ಮನೆ ಮಾಲೀಕರ ಪ್ರತಿಕ್ರಿಯೆ ಇಲ್ಲಿದೆ
ನಾಗರಬಾವಿಯಲ್ಲಿ ವಾಲಿದ ಕಟ್ಟಡ

Follow us on

ಬೆಂಗಳೂರು: ನಗರದ ನಾಗರಬಾವಿಯಲ್ಲಿ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ವಲಯ ಆಯುಕ್ತ ರೆಡ್ಡಿ ಶಂಕರ್‌ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಮೇಲ್ನೋಟಕ್ಕೆ ಅನುಮತಿ ಪಡೆದಿರುವಂತೆ ಕಾಣುತ್ತಿಲ್ಲ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಾಲೀಕರಿಗೆ ಕಟ್ಟಡ ತೆರವು ಮಾಡಲು ಸೂಚನೆ ನೀಡ್ತೇವೆ. ಮಾಲೀಕರು ಕಟ್ಟಡ ತೆರವು ಮಾಡದಿದ್ದರೆ ನಾವೇ ಮಾಡ್ತೇವೆ. ರಾಜಕಾಲುವೆ ಬಳಿ ಮನೆ ನಿರ್ಮಿಸಿರುವವರಿಗೆ ಎಲ್ಲರಿಗೂ ನೋಟಿಸ್​ ಕೊಡುತ್ತೇವೆ ಎಂದು ಶಂಕರ್ ಬಾಬು ಹೇಳಿದ್ದಾರೆ. ಇಲ್ಲಿ ಯಾರು ಪರ್ಮಿಷನ್ ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತನಿಖೆ ಮಾಡಬೇಕಿದೆ. ಈಗ ಪಕ್ಕದಲ್ಲಿ ಗಾರ್ಡನ್ ಇದೆ. ಪಕ್ಕ ರಾಜಕಾಲುವೆ ಇದೆ. ಇದರ ನಡುವೆ ಮನೆ ಕಟ್ಟಿದ್ದಾರೆ ಎಂಬ ಬಗ್ಗೆ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಮನೆ ವಾಲಿದ ಪ್ರಕರಣಕ್ಕೆ ಸಂಬಂಧಿಸಿ ಮನೆ ಮಾಲೀಕ ರಾಜೇಶ್ ರಾಮಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಿಬಿಎಂಪಿ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಮಗೆ ಈ ಮನೆಯನ್ನು ನನ್ನ ಪತ್ನಿ ಅಣ್ಣ ಗಿಫ್ಟ್ ಆಗಿ ನೀಡಿದ್ದಾರೆ. ಈ ಮನೆಯನ್ನು 4 ವರ್ಷದ ಹಿಂದೆ ಕಟ್ಟಿದ್ದಾರೆ. ಈ ಮನೆ ನೆಲಸಮ ಮಾಡಲು ಹೇಳಿದರೂ ಮಾಡ್ತೇವೆ. ಮನೆ ನೆಲಸಮ ಮಾಡಿ ಹೊಸದಾಗಿ ಕಟ್ಟಿಕೊಳ್ತೇವೆ ಎಂದು ಮನೆ ಮಾಲೀಕ ರಾಜೇಶ್ ರಾಮಕೃಷ್ಣ ಹೇಳಿಕೆ ನೀಡಿದ್ದಾರೆ.

ಕಟ್ಟಿರುವ ಮನೆಯನ್ನು ನಾವು ತೆಗೆದುಕೊಂಡಿದ್ದೇವೆ. ನಾವು ಮನೆ ಕಟ್ಟಿಲ್ಲ, ಈ ಮನೆ ನಮಗೆ ಗಿಫ್ಟ್ ಆಗಿ ಸಿಕ್ಕಿರೋದು. ನಾವು ದುಡ್ಡು ಕೊಟ್ಟು ತೆಗೆದುಕೊಡಿಲ್ಲ. ಬಿಬಿಎಂಪಿ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಒಂದು ಮನೆ ಬಾಡಿಗೆ ನೀಡಿದ್ದೇವೆ ಎಂದು ಮನೆ ಮಾಲೀಕರು ಮಾಹಿತಿ ನೀಡಿದ್ದಾರೆ.

ಕಟ್ಟಡ ವಾಲಲು ಕಾರಣವೇನು? 30*15 ಅಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗ ಹೆಡ್ ವೇಟ್ ಜಾಸ್ತಿಯಾಗಿ ಕಟ್ಟಡ ಹಿಂದಕ್ಕೆ ವಾಲಿದೆ. ರಾಜಕಾಲುವೆಗೆ ಅಂಟಿಕೊಂಡಿರುವಂತೆ ಮನೆ ಕಟ್ಟಲಾಗಿದೆ. ಅವೈಜ್ಞಾನಿಕವಾಗಿ ಮನೆ ನಿರ್ಮಾಣ ಸಾಧ್ಯತೆ ಕಂಡುಬಂದಿದೆ. ರಾಜಕಾಲುವೆಯ ನೀರು ಫೌಂಡೇಷನ್​ಗೆ ಹರಿಯುತ್ತಿರುವುದರಿಂದ ತೊಂದರೆ ಆಗಿರಬಹುದು. ಕಟ್ಟಡದ ಎತ್ತರ ಜಾಸ್ತಿ ಇರುವ ಹಿನ್ನೆಲೆ ವಾಲಿರುವ ಸಾಧ್ಯತೆ ಇದೆ. ಸರಿಯಾಗಿ ಫಿಲ್ಲರ್ ಹಾಕಿಲ್ಲ ಎನ್ನುವ ಅನುಮಾನ ಉಂಟಾಗಿದೆ. ಪಿಲ್ಲರ್ ಹಾಕದೆ ಮನೆ ಕಟ್ಟಿದ್ರೆ ಬಿಲ್ಡಿಂಗ್ ಕುಸಿಯುವ ಸಾದ್ಯತೆ ಹೆಚ್ಚು ಎಂದು ಹೇಳಲಾಗಿದೆ. ಬಿಲ್ಡಿಂಗ್ ವಾಲಲು ಮುಖ್ಯ ಕಾರಣ ಏನು ಎಂಬ ಬಗ್ಗೆ ಜ್ಞಾನಭಾರತಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಏಳಂತಸ್ತಿನ ಕಟ್ಟಡ ಅನಾಮತ್ತಾಗಿ ಕುಸಿದರೂ ಪ್ರಾಣಹಾನಿ ಸಂಭವಿಸದಿರುವುದು ಪವಾಡವೇ ಸರಿ

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ 185 ಶಿಥಿಲ ಕಟ್ಟಡಗಳು: ಕಂದಾಯ ಸಚಿವ ಆರ್.ಅಶೋಕ್

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada