ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು: ತೇಜಸ್ವಿ ಸೂರ್ಯ

|

Updated on: Jan 03, 2025 | 9:58 AM

ಬೆಂಗಳೂರಿನ ಆರ್‌ವಿ ರೋಡ್-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗದ ಕಾರ್ಯಾಚರಣೆಯಲ್ಲಿನ ವಿಳಂಬಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಕಾರಣ ನೀಡಿದ್ದಾರೆ. ಜನವರಿ 6 ರಂದು ಮೊದಲ ಮೆಟ್ರೋ ರೈಲು ಬೆಂಗಳೂರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.ಹಳದಿ ಮಾರ್ಗದ ಕಾರ್ಯಚರಣೆ ಶೀಘ್ರವಾಗಿ ಪ್ರಾರಂಭಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು: ತೇಜಸ್ವಿ ಸೂರ್ಯ
ನಮ್ಮ ಮೆಟ್ರೋ, ತೇಜಸ್ವಿ ಸೂರ್ಯ
Follow us on

ಬೆಂಗಳೂರು, ಜನವರಿ 03: ನಮ್ಮ ಮೆಟ್ರೋದ (Namma Metro ಆರ್​​ವಿ ರೋಡ್​-ಬೊಮ್ಮಸಂದ್ರ (Rv Road-Bommasandra) ಹಳದಿ ಮಾರ್ಗ (Yellow Line) ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಜನರು ನಿರಾಶೆಗೊಂಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ (Tejasvi Surya) ಹಳದಿ ಮಾರ್ಗ ಉದ್ಘಾಟನೆ ವಿಳಂಬಕ್ಕೆ ಕಾರಣ ನೀಡಿದ್ದಾರೆ. ಹಾಗೇ, ಹಳದಿ ಮಾರ್ಗ ಆರಂಭದ ವಿಚಾರವಾಗಿಯೂ ಮಾಹಿತಿ ನೀಡಿದ್ದಾರೆ. ಈ ಕುರಿತು ಸಮಾಜಿಕ ಜಾಲತಾಣದ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ ಅವರು, ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಮುಂದುವರೆದು, ರೈಲು ತಯಾರಿಕೆಯನ್ನು ತ್ವರಿತಗೊಳಿಸಲು ನಾನು ರೈಲು ತಯಾರಕರಾದ ತೀತಗಢ್​ ರೈಲ್​ ಸಿಸ್ಟಮ್ಸ್​ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಈಗ, ಜನವರಿ 6 ರಂದು ಬೆಂಗಳೂರಿಗೆ ಮೊದಲ ರೈಲು ಬರಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಮತ್ತು ಏಪ್ರಿಲ್​ನಲ್ಲಿ ಮೂರನೇ ರೈಲು ಬೆಂಗಳೂರಿಗೆ ತಲುಪಲಿದೆ ಎಂದು ಹೇಳಿದರು.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ: ಬೊಮ್ಮಸಂದ್ರ ನಿಲ್ದಾಣಕ್ಕೆ ತೈವಾನ್‌ ಕಂಪನಿಯ ಹೆಸರು! ಕಾರಣ ಇಲ್ಲಿದೆ

ಬಳಿಕ ತಿಂಗಳಿಗೆ 1 ರೈಲು, ಸೆಪ್ಟೆಂಬರ್​ ವೇಳೆಗೆ ತಿಂಗಳಿಗೆ 2 ರೈಲುಗಳು ಆಗಮಿಸಲಿವೆ. ಜನವರಿ 6 ರಂದು ತೀತಗಢ್​ ರೈಲ್​ ಸಿಸ್ಟಮ್ಸ್​ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಸಚಿವರು ಮನವಿ ಮಾಡಿದ್ದೇನೆ. ಇದೇ ವೇಳೆ ಬೆಂಗಳೂರಿಗೆ ಬರಲಿರುವ ಮೆಟ್ರೋ ರೈಲುಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಟ್ವಿಟರ್​ ಪೋಸ್ಟ್​

ಹಳದಿ ಮಾರ್ಗ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ನಾನೂ ನಿರಾಶೆಗೊಂಡಿದ್ದೇನೆ. ಈ ಮಾರ್ಗ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.

ನಿಲ್ದಾಣಗಳಿಗೆ ಐಟಿಬಿಟಿ ಕಂಪನಿಗಳ ಹೆಸರು

ಆರ್​​ವಿ ರೋಡ್​-ಬೊಮ್ಮಸಂದ್ರ 19.15 ಕಿಮೀ ಹಳದಿ ಮಾರ್ಗದ ಮೂರು ನಿಲ್ದಾಣಗಳಿಗೆ ಮೂರು ಐಟಿಬಿಟಿ ಕಂಪನಿಗಳ ಹೆಸರಿಡಲು ನಮ್ಮ ಮೆಟ್ರೋ ಮುಂದಾಗಿದೆ. ಕೊನ್ನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಇನ್ಪೋಸಿಸ್ ಕೊನ್ನಪ್ಪನ್ನ ಅಗ್ರಹಾರ ಮೆಟ್ರೋ ಎಂದು, ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಎಂದೂ, ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ಡೆಲ್ಟಾ ಬೊಮ್ಮಸಂದ್ರ ಮೆಟ್ರೊ ನಿಲ್ದಾಣ ಅಂತ ಹೆಸರಿಡಲು ಮೂವತ್ತು ವರ್ಷಕ್ಕೆ ಬರೋಬ್ಬರಿ 65 ಕೋಟಿ ರುಪಾಯಿ ಒಪ್ಪಂದ ಮಾಡಿಕೊಳ್ಳಲಾಗಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:56 am, Fri, 3 January 25