ಬೆಂಗಳೂರು: ಬೈಕ್‌ನಲ್ಲಿ ಬಂದು ಚಾಕು ತೋರಿಸಿ ಹಾಡಗಲೇ ದರೋಡೆ
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಊಟವನ್ನು ಕೊಟ್ಟು ಮನೆಯಿಂದ ಹೊರಗೆ ಬರುತ್ತಿದ್ದ. ಇದೇ ಸಮಯಕ್ಕೆ ಬೈಕ್‌ನಲ್ಲಿ ಬಂದ ಮೂವರು ಮನೆ ಮುಂದೆ ಬೈಕ್ ನಿಲ್ಲಿಸಿ ಸ್ವಿಗ್ಗಿ ನೌಕರನನ್ನು ಹಿಡಿದು ಚಾಕು ತೋರಿಸಿ ದರೋಡೆ ಮಾಡಿದ್ದಾರೆ.
ಬೆಂಗಳೂರು, ಆ.15: ಬೈಕ್‌ನಲ್ಲಿ ಬಂದು ಮೂವರು ಯುವಕರು ಸ್ವಿಗ್ಗಿ ಡೆಲಿವರಿ ಬಾಯ್ಗೆ(Swiggy Delivery Boy) ಚಾಕು ತೋರಿಸಿ ದರೋಡೆ(Robbery) ಮಾಡಿದ ಘಟನೆ ವಿವೇಕನಂದ ನಗರದಲ್ಲಿ(Vivekananda Nagar) ನಡೆದಿದೆ. ಸ್ವಿಗ್ಗಿ ಡೆಲಿವರಿ ಬಾಯ್ ವಿವೇಕನಂದನಗರದಲ್ಲಿ ಆರ್ಡರ್ ಕೊಟ್ಟು ನಿವಾಸದಿಂದ ಹೊರಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಊಟವನ್ನು ಕೊಟ್ಟು ಮನೆಯಿಂದ ಹೊರಗೆ ಬರುತ್ತಿದ್ದ. ಇದೇ ಸಮಯಕ್ಕೆ ಬೈಕ್‌ನಲ್ಲಿ ಬಂದ ಮೂವರು ಮನೆ ಮುಂದೆ ಬೈಕ್ ನಿಲ್ಲಿಸಿ ಸ್ವಿಗ್ಗಿ ನೌಕರನನ್ನು ಹಿಡಿದು ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಇನ್ನೂ ಖದೀಮರು 1,000 ರೂ. ಮತ್ತು ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪುಲಕೇಶಿನಗರ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನು ಓದಿ: ಪ್ರತ್ಯೇಕ ಘಟನೆ: ಉಡುಪಿ, ಯಾದಗರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಸಿದು ಬಿದ್ದ ವಿದ್ಯಾರ್ಥಿಗಳು
ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಭೀಕರ ಅಪಘಾತ
ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರಂತದ ವೇಳೆ ಕಾರಿನಡಿ ಸಿಕ್ಕ ಬೈಕನ್ನ ಕಾರು ಎಳೆದುಕೊಂಡು ಹೋಗಿದೆ. ಸುಮಾರು 100 ಅಡಿಯಷ್ಟು ದೂರ ಎಳೆದೊಯ್ದಿದೆ. ಇನ್ನು ಗುದ್ದಿದ ರಭಸಕ್ಕೆ ಬೈಕಿನಲ್ಲಿ ಬೆಂಕಿ ಹತ್ತಿದರೂ, ಬೈಕ್ ಸವಾರ ರಸ್ತೆಯಲ್ಲಿ ಉಜ್ಜಿಕೊಂಡು ಹೋದರು ಕಾರು ಚಾಲಕ ಕಾರು ನಿಲ್ಲಿಸದೆ ತೆರಳಿದ್ದಾನೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಜನರ ಕಣ್ಣೆದುರೇ ಅವಘಡ ಸಂಭವಿಸಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




