ಬೆಂಗಳೂರು, ಮೇ 14: ಇಂದಿನಿಂದ ಹೆಬ್ಬಾಳ ಮೇಲುಸೇತುವೆಯ ಕೆ.ಆರ್.ಪುರಂ (KR Puram) ಅಪ್-ರ್ಯಾಂಪ್ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗವಾರದಿಂದ ಹೆಬ್ಬಾಳ ಮೇಲುಸೇತುವೆ ಕಡೆಗೆ ಬರುವ ಎಲ್ಲ ವಾಹನಗಳಿಗೆ ಫ್ಲೈ ಓವರ್ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ತಿಳಿಸಿದ್ದಾರೆ.
ಕೆ.ಆರ್. ಪುರಂ ಕಡೆಯಿಂದ ಬರುವ ಲೂಪ್ ಹೆಬ್ಬಾಳ ಮೇಲುಸೇತುವೆನ ಮುಖ್ಯ ಟ್ರ್ಯಾಕ್ಗೆ ಸೇರಿಸುವ ಎರಡು ಲಿಂಕ್ ಸ್ಪ್ಯಾನ್ಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ರ್ಯಾಂಪ್ ಮತ್ತು ಮುಖ್ಯ ಟ್ರ್ಯಾಕ್ಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಯಾವುದೇ ರೀತಿಯ ವಾಹನ ಸಂಚಾರ ನಿರ್ಭಂದಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ
ಕಾಮಗಾರಿ ಮುಕ್ತಾಯವಾಗುವವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಚಾರ ವಿಭಾಗದಿಂದ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಲಾಗಿದೆ.
ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್ಗಳನ್ನು ಸೇರಿಸಲು ಬಿಡಿಎ ಕಾಮಗಾರಿಯನ್ನು ಆರಂಭಿಸುವುದರಿಂದ ಏಪ್ರಿಲ್ 17 ರಿಂದ ಕೆ.ಆರ್.ಪುರ ಲೂಪ್ ಸೇರುವ ಟ್ಯ್ರಾಕ್ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Tue, 14 May 24