ಬೆಂಗಳೂರಿನ 3 ಲಕ್ಷ ವಾಹನಗಳ ಮೇಲಿದೆ ₹19 ಕೋಟಿ ದಂಡ!

| Updated By: ವಿವೇಕ ಬಿರಾದಾರ

Updated on: Apr 23, 2024 | 8:34 AM

ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದವರಿಗೆ ಟ್ರಾಫಿಕ್​ ಪೊಲೀಸರು ಶಾಕ್​ ನೀಡಲಿದ್ದಾರೆ. ಹೌದು ಬೆಂಗಳೂರಿನಲ್ಲಿ ಲಕ್ಷಾಂತರ ವಾಹನ ಸವಾರರು ಸಂಚಾರ ನಿಯಮ ಮೀರಿ ತಿರುಗಾಡಿದ್ದು, ಬರೊಬ್ಬರಿ 19 ದಂಡ ಬಾಕಿ ಉಳಿದಿದೆ. ಇದನ್ನು ವಸೂಲಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ.

ಬೆಂಗಳೂರಿನ 3 ಲಕ್ಷ ವಾಹನಗಳ ಮೇಲಿದೆ ₹19 ಕೋಟಿ ದಂಡ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್​ 23: ಬೆಂಗಳೂರು ನಗರ ಸಂಚಾರಿ ಪೊಲೀಸರು (Bengaluru Traffic Police) ಇದೀಗ ನಗರದಲ್ಲಿ ಮತ್ತೊಂದು ಸುತ್ತಿನ ಸಮರ ಸಾರಲು ತಯಾರಾಗಿದ್ದಾರೆ. ತಮ್ಮ ಇಲಾಖೆ​ಗೆ ಬರಬೇಕಿದ್ದ 19 ಕೋಟಿ ಹಣಕ್ಕಾಗಿ ಮೆಗಾ ಆಪರೇಷನ್ ಕೈಗೊಳ್ಳಲು ಮುಂದಾಗಿದ್ದಾರೆ. ಇದರಿಂದ ಇಷ್ಟು ದಿನ ತಾವು ಹೋಗಿದ್ದೆ ದಾರಿ ಎಂದು ತಮ್ಮಿಷ್ಟದಂತೆ ವಾಹನ ಚಾಲನೆ ಮಾಡಿದವರಿಗೆ ನಡುಕ ಶುರುವಾಗಿದೆ.

ನಗರದಲ್ಲಿರುವ 3,71,516 ವಾಹನಗಳ‌ ಮೇಲೆ ಬರೋಬ್ಬರಿ 19,54,16,400 ರೂಪಾಯಿ ದಂಡ ಇದೆ. ಈ 19 ಕೋಟಿ ರೂಪಾಯಿ ದಂಡವನ್ನ ವಸೂಲಿ ಮಾಡಲು ಮುಂದಾಗಿರುವ ಸಂಚಾರಿ ಪೊಲೀಸರು 1 ಲಕ್ಷ ರೂಪಾಯಿಗೂ ಅಧಿಕ ದಂಡ ಇರುವ 123 ವಾಹನಗಳ ಪಟ್ಟಿ ತಯಾರಿಸಿ, ವಾಹನಗಳ ಮಾಲೀಕರಿಗೆ ನೋಟಿಸ್ ಕೊಟ್ಟು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ. ಇದರ ಹೊರತಾಗಿಯೂ ದಂಡ ಕಟ್ಟದಿದ್ದರೆ, ಅಂತವರ ವಿರುದ್ಧ ಕೋರ್ಟ್​ನಲ್ಲಿ ಚಾರ್ಜ್​ ಶೀಟ್ ಹಾಕಲು ಸಿದ್ದವಾಗಿದ್ದಾರೆ. ಈ ಬಗ್ಗೆ ಮಾತಾನಾಡಿದ ಟ್ರಾಫಿಕ್ ತಜ್ಞ ಚಂದ್ರಶೇಖರ್ “ಇಂತಹ ವಾಹನ ಮಾಲೀಕರ ಡಿಎಲ್ ರದ್ದುಗೊಳಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಡಿಜಿಟಲ್ ಪಾವತಿ​ ಮೂಲಕ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸುತ್ತಿರುವ ಬೆಂಗಳೂರು ಟ್ರಾಫಿಕ್​ ಪೊಲೀಸ್

ಯಾವ್ಯಾವ ವಾಹನದ ಮೇಲೆ ಎಷ್ಟು ದಂಡ
ವಾಹನ ಉಲ್ಲಂಘನೆ ದಂಡದ ಹಣ (ರೂ.)
2742 ಬೈಕ್ 3,61,294 18,76,34,300
100 ಕಾರು 8603 69,00,900
09 ವ್ಯಾನ್ 848 4,67,500
2 ಸ್ಕೂಲ್ ಬಸ್ 156 88,000
01 ಮ್ಯಾಕ್ಸಿ ಕ್ಯಾಬ್ 82 56,000
ಇತರೆ 04 433 2,43,100

2742 ಬೈಕ್​ಗಳು ​3,61,294 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಇದರ ಮೇಲೆ 18,76,34,300 ರೂ. ದಂಡ ಇದೆ. 100 ಕಾರುಗಳು 8603 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ 69,00,900 ರೂ. ದಂಡ ಕಟ್ಟಬೇಕಾಗಿದೆ. 09 ವ್ಯಾನ್ 848 ಬಾರಿ ಟ್ರಾಫಿಕ್ಸ್​ ರೂಲ್ಸ್ ಬ್ರೇಕ್ ಮಾಡಿದ್ದರಿಂದ 4,67,500 ದಂಡ ಕಟ್ಟಬೇಕಾಗಿದೆ. 2 ಸ್ಕೂಲ್ ಬಸ್ ಗಳು 156 ಸಂಚಾರಿ ನಿಯಮ ಗಾಳಿಗೆ ತೂರಿದ್ದರಿಂದ 88,000, ರೂ. 01 ಮ್ಯಾಕ್ಸಿ ಕ್ಯಾಬ್ 82 ಬಾರಿ ಟ್ರಾಫಿಕ್ ರೂಲ್ಸ್​ ಬ್ರೇಕ್ ಮಾಡಿದ್ದರಿಂದ 56,000 ರೂ. ದಂಡ ಕಟ್ಟಬೇಕಾಗಿದೆ. ಅಲ್ಲದೆ ಇತರೆ 04 ವಾಹನಗಳು 433 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದು, 2,43,100 ರೂಪಾಯಿ ದಂಡ ಕಟ್ಟಬೇಕಿವೆ.

ಒಟ್ಟಿನಲ್ಲಿ ಪದೇ ಪದೇ ಟ್ರಾಫಿಕ್ಸ್​ ರೂಲ್ಸ್ ಬ್ರೇಕ್ ಮಾಡಿ, ದಂಡವೂ ಕಟ್ಟದೆ ಯಾಮಾರಿಸುತ್ತಿದ್ದ ಕಿಲಾಡಿ ಚಾಲಕರಿಗೆ ಖೆಡ್ಡಾ ತೋಡಲು ಟ್ರಾಫಿಕ್ ಪೊಲೀಸರು ಕೂಡ ಮೆಗಾ ಪ್ಲಾನ್ ಮಾಡಿದ್ದಾರೆ. ಅದ್ಹೇನೆ ಹೇಳಿ ಇಷ್ಟೆಲ್ಲ ದಂಡ ಕಟ್ಟಿದ ನಂತರವಾದರೂ ಇವರು ಸಂಚಾರಿ ನಿಯಮ ಪಾಲನೆ ಮಾಡುತ್ತಾರಾ ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 am, Tue, 23 April 24