ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಕೊರತೆ: ಉಚಿತ ಚಿಕಿತ್ಸೆಗೆಂದು ಬಂದರೂ ಸಾವಿರಾರು ರೂ. ಖರ್ಚು!

ಉಚಿತ ಸೇವೆ ದೊರೆಯಲಿದೆ ಎಂಬ ಕಾರಣಕ್ಕೆ ರೋಗಿಗಳು, ಅದರಲ್ಲೂ ಬಡ ರೋಗಿಗಳು ಸರಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಕೊರತೆ ಇರುವುದು ಬಡವರ, ಬಡ ಗರ್ಭಿಣಿಯರಿಗೆ ಸಮಸ್ಯೆ ತಂದೊಡ್ಡಿದೆ. ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಹೋದರೂ ಸಾವಿರಾರು ರೂಪಾಯಿ ಸ್ಕ್ಯಾನಿಂಗ್​ಗೆ ಖರ್ಚು ಮಾಡಬೇಕಾಗಿ ಬರುತ್ತದೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಕೊರತೆ: ಉಚಿತ ಚಿಕಿತ್ಸೆಗೆಂದು ಬಂದರೂ ಸಾವಿರಾರು ರೂ. ಖರ್ಚು!
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: Ganapathi Sharma

Updated on:Apr 23, 2024 | 7:55 AM

ಬೆಂಗಳೂರು, ಏಪ್ರಿಲ್ 23: ಬೆಂಗಳೂರಿನ (Bengaluru) ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗೆ (Government Hospitals) ನಿತ್ಯ ನೂರಾರು ಜನರು ಚಿಕಿತ್ಸೆಗೆ ಬರುತ್ತಾರೆ. ಅದರಲ್ಲೂ ನಿತ್ಯ ಬಡ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗೆ ಉಚಿತ ಚಿಕಿತ್ಸೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಆದರೆ, ಸಣ್ಣಪುಟ್ಟ ಸ್ಕ್ಯಾನಿಂಗ್​ಗೂ (Scanning) ಸಾವಿರಾರು ರೂಪಾಯಿ ಖರ್ಚ ಮಾಡಬೇಕಾದ ಪರಿಸ್ಥಿತಿ ಅವರಿಗೆ ಬಂದೊದಗಿದೆ. ಬೆಂಗಳೂರಿನ ದೊಡ್ಡ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ (Radiologist) ಇಲ್ಲದೇ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಉಚಿತ ಅಥವಾ ಕಡಿಮೆ ದರದಲ್ಲಿ ಮಾಡಿಸಬಹುದಾದ ಸ್ಕ್ಯಾನಿಂಗ್‌ಗೆ ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ಹಣ ತೆತ್ತು ರೋಗಿಗಳು ಸುಸ್ತಾಗಿದ್ದಾರೆ. ಇಂದಿಗೂ ಖಾಸಗಿ ಲ್ಯಾಬ್‌ಗಳಿಗೆ ರೋಗಿಗಳ ಅಲೆದಾಟ ನಿಂತಿಲ್ಲ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್ ಇಲ್ಲ. ಹೀಗಾಗಿ ಬಡ ರೋಗಿಗಳು ಪರದಾಡುವಂತಾಗಿದೆ.

ಉಚಿತ ಸೇವೆ ದೊರೆಯಲಿದೆ ಎಂಬ ಕಾರಣಕ್ಕೆ ರೋಗಿಗಳು, ಅದರಲ್ಲೂ ಬಡ ರೋಗಿಗಳು ಸರಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಸದ್ಯ ರಾಜಧಾನಿ ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಯಲ್ಲಿ ರೆಡಿಯಾಲಜಿಸ್ಟ್ ಇಲ್ಲದೇ ಇರುವುದರಿಂದ ಗರ್ಭಿಣಿಯರಿಗೆ ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿದಂತೆ ಬೇರೆ ಎಲ್ಲ ರೀತಿಯ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಲ್ಯಾಬ್‌ ಮೊರೆ ಹೋಗಬೇಕಾಗಿದೆ. ಇದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ. ಇದು ಬಡ ರೋಗಿಗಳಿಗೆ ದೊಡ್ಡ ಹೊರೆಯಾಗಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿಲ್ಲ ರೆಡಿಯಾಲಜಿಸ್ಟ್​ಗಳು

ಇನ್ನು ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಂ ರೆಡಿಯಾಲಜಿಸ್ಟ್ ಇಲ್ಲ. ವಾರದಲ್ಲಿ ಮೂರು ದಿನ ರೆಡಿಯಾಲಜಿಸ್ಟ್​​ಗೆ ಅವಕಾಶ ನೀಡಿದ್ದಾರೆ. ಅಷ್ಟಕ್ಕೂ ರೆಡಿಯಾಲಜಿಸ್ಟ್, ವೈದ್ಯರಿಗೆ ತುಂಬಾ ಬೇಡಿಕೆಯಿದೆ. ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಸಂಬಳ ನೀಡುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ತುಂಬಾ ಕಡಿಮೆ ವೇತನ ಹಿನ್ನಲೆ ರೆಡಿಯಾಲಜಿಸ್ಟ್​​ಗಳು ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳ ಮೊರೆ ಹೋಗ್ತೀರುವುದು ಇಷ್ಟಕೆಲ್ಲ ಕಾರಣವಾಗಿದೆ.

ಇದನ್ನೂ ಓದಿ: ಕೇರಳದ ಆಲಪ್ಪುಳದಲ್ಲಿ ಹಕ್ಕಿ ಜ್ವರ: ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ, ಗಡಿಗಳಲ್ಲಿ ವಿಶೇಷ ಚೆಕ್ ಪೋಸ್ಟ್​

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲದೆ, ಖಾಸಗಿ ಲ್ಯಾಬ್‌ಗೆ ಹೋಗಬೇಕಾದ ಸ್ಥಿತಿ ಬಡ ರೋಗಿಗಳಿಗೆ ಎದುರಾಗಿದ್ದು ಪರದಾಡುವಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಕಾಯಂ ಸಿಬ್ಬಂದಿಯನ್ನು ಒದಗಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 am, Tue, 23 April 24

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್