
ಬೆಂಗಳೂರು, ಏಪ್ರಿಲ್ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಂದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ (Bengaluru Traffic) ನಿಂತು ಪರದಾಡಬೇಕು. ಅದರಲ್ಲೂ ತುರ್ತು ಕೆಲಸವಿದ್ದಾಗ ವೇಗವಾಗಿ ಹೋಗಲು ಆಗುವುದಿಲ್ಲ. ಅಷ್ಟರಮಟ್ಟಿಗೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಆದರೆ ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ. ಹೇಗೆ ಅಂತಿರಾ ಈ ಸುದ್ದಿ ಓದಿ..
ದೇಶದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಆರಂಭಿಸಲು ಇಂಡಿಗೊ ಕಂಪನಿಯ ಮಾತೃಸಂಸ್ಥೆಯಾದ ಇಂಟರ್‌ಗ್ಲೋಬಲ್ ಎಂಟರ್ ಪ್ರೈಸಸ್ ಮತ್ತು ಅಮೆರಿಕದ ಆರ್ಚರ್ ಏವಿಯೇಷನ್ ಜಂಟಿಯಾಗಿ ಸಿದ್ಧತೆ ನಡೆಸಿವೆ. ಪ್ರಥಮ ಬಾರಿಗೆ ನವದೆಹಲಿಯ ಕನೌಟ್‌ನಿಂದ ಹರಿಯಾಣದ ಗುರುಗ್ರಾಮಕ್ಕೆ ಈ ಸೇವೆ ಆರಂಭವಾಗಲಿದೆ. ಏಳು ನಿಮಿಷಗಳಲ್ಲಿ ಪ್ರಯಾಣಿಕರನ್ನು ತಲುಪಿಸಲಾಗುತ್ತದೆ. ನವದೆಹಲಿ ಬಳಿಕ ಮುಂಬೈ ಮತ್ತು ಬೆಂಗಳೂರಿನಲ್ಲಿಯೂ ಈ ಸೇವೆ ವಿಸ್ತರಿಸಲು ಈ ಕಂಪನಿಗಳು ನಿರ್ಧರಿಸಿವೆ. ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಕುರಿತು ಈಗಾಗಲೇ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಜೊತೆಗೆ ಮಾತುಕತೆ ನಡೆಯುತ್ತಿದೆ. ಏರ್‌ಕ್ರಾಫ್ಟ್‌ಗೆ ಮುಂದಿನ ವರ್ಷ ಅನುಮತಿ ಸಿಗುವ ನಿರೀಕ್ಷೆಯಿದೆ.
ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ
ಈ ಬಗ್ಗೆ ಮಾತಾನಾಡಿದ ಏರ್ ಆ್ಯಂಬುಲೆನ್ಸ್ ತಜ್ಞೆ ಡಾ. ಶಾಲಿನಿ, ಇದರಿಂದ ಬೆಂಗಳೂರಿಗರಿಗೆ ತುಂಬಾ ಸಹಾಯ ಆಗುತ್ತದೆ. ಏರ್ ಆ್ಯಂಬುಲೆನ್ಸ್ ಗೂ ಉಪಯೋಗ ಆಗುತ್ತದೆ. ರೋಗಿಗಳಿಗೆ ವ್ಯಾಕ್ಸಿನ್ ಮತ್ತು ಮೆಡಿಸಿನ್ಗಳನ್ನು ಏರ್ ಟ್ಯಾಕ್ಸಿ ಮೂಲಕ ಸುಲಭವಾಗಿ ತಲುಪಿಸಬಹುದು. ಏರ್ ಟ್ಯಾಕ್ಸಿಗೆ ಒಳ್ಳೆಯ ಪ್ಲಾಂಟ್ ಫಾರಂ ಸಿಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ವಂಚನೆ
ಇನ್ನು ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಆರಂಭಿಸಲು ಮೊದಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು. ಏರ್ ಟ್ಯಾಕ್ಸಿಯಲ್ಲಿ ಕನೌಟ್‌ನಿಂದ ಗುರುಗ್ರಾಮಕ್ಕೆ ತಲುಪಲು 2 ಸಾವಿರದಿಂದ 3 ಸಾವಿರ ಪ್ರಯಾಣ ವೆಚ್ಚವಾಗಲಿದ್ದು, ಈ ಎರಡು ಸ್ಥಳಗಳ ನಡುವೆ 27 ಕಿ.ಮೀ. ದೂರವಿದೆ. ರಸ್ತೆ ಮಾರ್ಗದಲ್ಲಿ ಕಾರಿನಲ್ಲಿ ಕ್ರಮಿಸಲು 90 ನಿಮಿಷ ಬೇಕಿದ್ದು, 1,500 ವೆಚ್ಚವಾಗಲಿದೆ ಎಂದು ಹೇಳಿಲಾಗುತ್ತಿದೆ. ಐದು ಆಸನಗಳ ಸಾಮರ್ಥ್ಯದ 200 ಮಿಡ್‌ನೈಟ್ ಏರ್‌ಕ್ರಾಫ್ಟ್‌ಗಳನ್ನು ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಪೈಲಟ್ ಸೇರಿ ನಾಲ್ವರು ಪ್ರಯಾಣಿಸಲು ಅವಕಾಶ ಸಿಗಲಿದೆ.
ಒಟ್ಟಿನಲ್ಲಿ ಏರ್ ಟ್ಯಾಕ್ಸಿ ಆರಂಭದಿಂದ ಪ್ರತಿದಿನ ಟ್ರಾಫಿಕ್ ಸಮಸ್ಯೆಯಲ್ಲಿ ಪರದಾಡುವ ಸಿಲಿಕಾನ್ ಸಿಟಿ ಜನರಿಗೆ ದೊಡ್ಡ ಮಟ್ಟದಲ್ಲಿ ಲಾಭವಾಗೋದರಲ್ಲಿ ಯಾವುದೆ ಸಂಶಯವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 am, Mon, 22 April 24