Cyber Crime: ಬೆಂಗಳೂರಿನಲ್ಲಿ ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ವಂಚನೆ

ಪ್ರತ್ಯೇಕ ಘಟನೆ: ಸೈಬರ್​ ವಂಚಕರ ಬಲೆಗೆ ಬಿದ್ದು ಬೆಂಗಳೂರಿನ ಅಶೋಕ್ ತಿರುಪಲಪ್ಪ ಎಂಬುವರು ಬರೊಬ್ಬರಿ 5.17 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಂಜಯನಗರದ ಆರ್​ಎಮ್​ವಿ 2ನೇ ಹಂತದಲ್ಲಿರುವ ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಅವರ ಮನೆಯಲ್ಲಿನ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ.

Cyber Crime: ಬೆಂಗಳೂರಿನಲ್ಲಿ ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ವಂಚನೆ
ಸಾಂದರ್ಭಿಕ ಚಿತ್ರ
Follow us
ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on: Apr 21, 2024 | 7:52 AM

ಬೆಂಗಳೂರು, ಏಪ್ರಿಲ್​ 21: ನಗರದಲ್ಲಿ ಸೈಬರ್​ ಕ್ರೈಂ (Cyber Crime) ಪ್ರಕರಣಗಳು ದಿನದಿಂದ ದಿನಕ್ಕ ಹೆಚ್ಚಾಗುತ್ತಿವೆ. ಸೈಬರ್​ ವಂಚಕರ ಬಲೆಗೆ ಬಿದ್ದು ವ್ಯಕ್ತಿಯೊಬ್ಬರು 5.17 ಕೋಟಿ ರೂ. ಕಳೆದುಕೊಂಡಿದ್ದಾರೆ. ಅಶೋಕ್ ತಿರುಪಲಪ್ಪ ವಂಚನೆಗೊಳಗಾದ ವ್ಯಕ್ತಿ. ವಂಚಕರು ಅಶೋಕ್ ತಿರುಪಲಪ್ಪ ವಾಟ್ಸ್ ಆ್ಯಪ್​ಗೆ Www.byc-app.com ಎಂಬ ಲಿಂಕ್​ ಅನ್ನು ಕಳುಹಿಸಿ ತೆರೆಯಲು ಹೇಳಿದ್ದಾರೆ. ಬಳಿಕ ಲಿಂಕ್ ಓಪನ್ ಮಾಡಿ ಷೇರು ಖರೀದಿಸುವಂತೆ ಹೇಳಿದ್ದಾರೆ. ಇದರಿಂದ ನಿಮಗೆ ಅಧಿಕ ಲಾಭ ಬರುತ್ತೆ ಎಂದು ನಂಬಿಸಿದ್ದಾರೆ. ಅದರಂತೆ ಅಶೋಕ್ ತಿರುಪಲಪ್ಪ ಅವರು ಲಿಂಕ್​ ಓಪನ್​ ಮಾಡಿ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ.

ಬಳಿಕ ಅಶೋಕ್ ತಿರುಪಲಪ್ಪ ಅವರ ಅಕೌಂಟ್​​ನಿಂದ ವಂಚಕರು ಹಂತ ಹಂತವಾಗಿ ಹಣ ಕದ್ದಿದ್ದಾರೆ. ವಂಚಕರು ಅಶೋಕ್ ತಿರುಪಲಪ್ಪ ಅಕೌಂಟ್​​ನಿಂದ ಬರೊಬ್ಬರಿ 5.18 ಕೋಟಿ ಹಣ ದೋಚಿದ್ದಾರೆ. ಘಟನೆ ಸಂಬಂಧ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ಮೊದಲ ಬಾರಿಗೆ ಬೃಹತ್ ಮೊತ್ತದ ಹಣ ವಂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸೋದರ ಮಾವನ ಮನೆ ಲೂಟಿ ಮಾಡಿದ ಕಿಲಾಡಿ ಅಳಿಯ

ಮಾಜಿ ಮೇಯರ್ ಮನೆಯಲ್ಲಿ ಕಳ್ಳತನ, ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ

ಬೆಂಗಳೂರು: ಸಂಜಯನಗರದ ಆರ್​ಎಮ್​ವಿ 2ನೇ ಹಂತದಲ್ಲಿರುವ ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಅವರ ಮನೆಯಲ್ಲಿನ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯನ್ನು ದೋಚಿ ಪರಾರಿಯಾಗಿದ್ದಾನೆ.

99,75,000 ರೂ. ಮೌಲ್ಯದ 1,425 ಗ್ರಾಂ. ಚಿನ್ನಾಭರಣ, 18,92,000 ರೂ. ಮೌಲ್ಯದ 22 ಕೆ.ಜಿ ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್​ಗಳು, 4 ಲಕ್ಷ ರೂ. ನಗದು. ಒಟ್ಟು 1,29,17,000 ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಾಚ್​ಗಳು ಮತ್ತು ನಗದು ಕಳ್ಳತನವಾಗಿದೆ. ಮಾಜಿ ಮೇಯರ್​ ಆರ್.ನಾರಾಯಣ ಸ್ವಾಮಿ ಅವರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು