AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಗಗನಕ್ಕೇರಿದ ಈರುಳ್ಳಿ, ಬೆಳ್ಳುಳ್ಳಿ ಬೆಲೆ: ದರ ಏರಿಕೆ ಕಂಡು ಗೃಹಿಣಿಯರು ಕಂಗಾಲು

ಬೆಂಗಳೂರಿನಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಗಳು ಭಾರಿ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಕೆಜಿಗೆ 500-550 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, ಈರುಳ್ಳಿ 70-80 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಂದ ಆಮದು ಕಡಿಮೆಯಾಗಿರುವುದು ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವೇ ಇದಕ್ಕೆ ಕಾರಣ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಭವಿಷ್ಯದಲ್ಲಿ ಬೆಲೆಗಳು ಇನ್ನಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿದೆ.

ಮತ್ತೆ ಗಗನಕ್ಕೇರಿದ ಈರುಳ್ಳಿ, ಬೆಳ್ಳುಳ್ಳಿ ಬೆಲೆ: ದರ ಏರಿಕೆ ಕಂಡು ಗೃಹಿಣಿಯರು ಕಂಗಾಲು
ಈರುಳ್ಳಿ, ಬೆಳ್ಳುಳ್ಳಿ
ಕಿರಣ್​ ಸೂರ್ಯ
| Edited By: ವಿವೇಕ ಬಿರಾದಾರ|

Updated on:Dec 07, 2024 | 10:12 AM

Share

ಬೆಂಗಳೂರು, ಡಿಸೆಂಬರ್​ 07: ಬೆಂಗಳೂರಿನಲ್ಲಿ (Bengaluru) ಈರುಳ್ಳಿ (Onion), ಬೆಳ್ಳುಳ್ಳಿ (Garlic) ಬೆಲೆ ಮತ್ತೆ ಗಗನಕ್ಕೇರಿದೆ. ರಿಟೇಲ್​​ನಲ್ಲಿ ಬೆಳ್ಳುಳ್ಳಿ ಕೆಜಿಗೆ 500 ರಿಂದ 550 ರೂಪಾಯಿ ಇದ್ದರೆ, ಎಪಿಎಂಸಿ ಮಾರುಕಟ್ಟೆಯಲ್ಲಿ 400 ರಿಂದ 450 ರೂಪಾಯಿಗೆ ಮಾರಾಟವಾಗುತ್ತಿದೆ. ಈರುಳ್ಳಿ ರಿಟೇಲ್​ನಲ್ಲಿ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಎಪಿಎಂಸಿಯಲ್ಲಿ ಹೋಲ್​ಸೇಲ್ ನಲ್ಲಿ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ.

ಈರುಳ್ಳಿ ಬೆಲೆ ನೂರರ ಗಡಿ ತಲುಪುವ ಸಾಧ್ಯತೆ ಇದೆ. ಈಗಾಗಲೇ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಧಾರಣ ಈರುಳ್ಳಿ ಕೆಜಿಗೆ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಇತ್ತ ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 60 ರಿಂದ 70 ರೂಪಾಯಿಗೆ ಮಾರಾಟವಾಗುತ್ತದೆ. ಸಣ್ಣಪುಟ್ಟ ಮಾರುಕಟ್ಟೆಯಲ್ಲಿ, ರಸ್ತೆಬದಿಯಲ್ಲಿ ಸಾಮಾನ್ಯ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 70 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಬೆಳ್ಳುಳ್ಳಿ ದರ ಈಗಾಗಲೇ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದೆ. ಎಪಿಎಂಸಿಯಲ್ಲಿ ಸಾಮಾನ್ಯ ಬೆಳ್ಳುಳ್ಳಿಗೆ 400 ರಿಂದ 450 ರುಪಾಯಿಗೆ ಮಾರಾಟವಾಗುತ್ತಿದೆ. ಫಸ್ಟ್​​ಕ್ವಾಲಿಟಿ 450 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಇತ್ತ ರಿಟೇಲ್ ಮಾರುಕಟ್ಟೆಯಲ್ಲಿ, ಅಂದರೆ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣಪುಟ್ಟ ಮಾರುಕಟ್ಟೆಗಳಲ್ಲಿ ಸಾಮಾನ್ಯ ಬೆಳ್ಳುಳ್ಳಿ ಕೆಜಿಗೆ 450 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದೆ. ಫಸ್ಟ್‌ ಕ್ವಾಲಿಟಿ ಬೆಳ್ಳುಳ್ಳಿ ಕೆಜಿಗೆ 550 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೂ ಬಂತಾ ಚೀನಾ ಬೆಳ್ಳುಳ್ಳಿ? ಈರುಳ್ಳಿ, ಟೊಮ್ಯಾಟೋ ಗಾತ್ರದ ಬೆಳ್ಳುಳ್ಳಿ ನೋಡಿ ಜನ ಶಾಕ್

ಹೊರ ರಾಜ್ಯಗಳಿಂದ, ರಾಜ್ಯಕ್ಕೆ ಬರಬೇಕಿದ್ದ ಈರುಳ್ಳಿ, ಬೆಳ್ಳುಳ್ಳಿ ಆಮದು ಆಗದಿರುವುದೇ ದರ ಏರಿಕೆಗೆ ಕಾರಣ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಈರುಳ್ಳಿ ಬೆಲೆ ನೂರರ ಗಡಿ ದಾಟುವ ಸಾಧ್ಯತೆ ಇದೆ.

ಬೆಳ್ಳುಳ್ಳಿ 600 ರೂಪಾಯಿ ಆಗಲಿದೆ. ಇತ್ತ ಮಹಾರಾಷ್ಟ್ರದಿಂದ ಜನವರಿ ತಿಂಗಳಿನಲ್ಲಿ ಮಾಲ್ ಬರುತ್ತದೆ ಅಲ್ಲಿಯವರೆಗೆ ದರ ಏರಿಕೆ ಆಗುತ್ತಿರುತ್ತದೆ. ಮಹಾರಾಷ್ಟ್ರದಿಂದ ಈರುಳ್ಳಿ, ಬೆಳ್ಳುಳ್ಳಿ ಬರಲು ಆರಂಭವಾದರೆ, ದರ ಇಳಿಕೆಯಾಗುತ್ತೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳಲು ಮಹಿಳೆಯರಿಗೆ ಸಾಧ್ಯವೆ ಇಲ್ಲ. ಇಂತಹದರಲ್ಲಿ ಅಡುಗೆ ಮನೆಯ ಹಾಟ್ ಫೇವರಿಟ್ ಈರುಳ್ಳಿ, ಬೆಳ್ಳುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು ನಿಜವಾಗಿಯೂ ಗೃಹಿಣಿಯರ ನಿದ್ದೆ ಗೆಡಿಸಿರುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:29 am, Sat, 7 December 24

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು