Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರಕ್ಕೂ ಬಂತಾ ಚೀನಾ ಬೆಳ್ಳುಳ್ಳಿ? ಈರುಳ್ಳಿ, ಟೊಮ್ಯಾಟೋ ಗಾತ್ರದ ಬೆಳ್ಳುಳ್ಳಿ ನೋಡಿ ಜನ ಶಾಕ್

ಚಿಕ್ಕಬಳ್ಳಾಪುರದಲ್ಲಿ ಬೆಳ್ಳುಳ್ಳಿ ದರ ಭಾರೀ ಏರಿಕೆಯಾಗಿದ್ದು, ಕೆಜಿಗೆ 400-500 ರೂ. ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ದಪ್ಪನೆಯ, ವಾಸನೆ ಮತ್ತು ರುಚಿ ಕಡಿಮೆ ಇರುವ ಬೆಳ್ಳುಳ್ಳಿ ಚೀನಾದಿಂದ ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಭಾರತ ನಿಷೇಧಿಸಿರುವ ಚೈನೀಸ್ ಬೆಳ್ಳುಳ್ಳಿ ಕಳ್ಳ ಮಾರ್ಗದ ಮೂಲಕ ಪ್ರವೇಶಿಸುತ್ತಿರಬಹುದು ಎಂಬ ಆತಂಕ ಶುರುವಾಗಿದೆ.

ಚಿಕ್ಕಬಳ್ಳಾಪುರಕ್ಕೂ ಬಂತಾ ಚೀನಾ ಬೆಳ್ಳುಳ್ಳಿ? ಈರುಳ್ಳಿ, ಟೊಮ್ಯಾಟೋ ಗಾತ್ರದ ಬೆಳ್ಳುಳ್ಳಿ ನೋಡಿ ಜನ ಶಾಕ್
ಚಿಕ್ಕಬಳ್ಳಾಪುರಕ್ಕೂ ಬಂತಾ ಚೀನಾ ಬೆಳ್ಳುಳ್ಳಿ? ಈರುಳ್ಳಿ, ಟೊಮ್ಯಾಟೋ ಗಾತ್ರದ ಬೆಳ್ಳುಳ್ಳಿ ನೋಡಿ ಜನ ಶಾಕ್
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 29, 2024 | 9:57 PM

ಚಿಕ್ಕಬಳ್ಳಾಫುರ, ನವೆಂಬರ್​ 29: ನಾನ್ ವೆಜ್ ಪ್ರಿಯರಿಗಂತೂ ಚಳಿಗೆ ಚಿಕನ್, ಮಟನ್ ತಿಂದು ಬೆಚ್ಚಗೆ ಇರೋಣ ಅಂತಿದ್ದಾರೆ. ಆದರೆ ನಾನ್ ವೆಜ್ ಮಾಡಬೇಕು ಅಂದರೆ ಮಸಾಲ ಮಾಂತ್ರಿಕ ಬೆಳ್ಳುಳ್ಳಿ (Garlic) ಬೇಕೇ ಬೇಕು. ದಿನೇ ದಿನೇ ಬೆಳ್ಳುಳ್ಳಿ ದರ ದುಬಾರಿಯಾಗುತ್ತಿದೆ. ಇದರಿಂದ ಮಾರುಕಟ್ಟೆಗೆ ಭಾರತ ಬ್ಯಾನ್ ಮಾಡಿರುವ ಚೈನೀಸ್ ಬೆಳ್ಳುಳ್ಳಿ ಎಂಟ್ರಿಯಾಗಿರುವ ಅನುಮಾನ ಮೂಡಿದ್ದು, ಅದೊಂದು ನಗರದಲ್ಲಿ ಚೈನೀಸ್ ಬೆಳ್ಳುಳ್ಳಿಯ ಶಂಕೆ ಮೂಡಿದೆ.

ಮಾರುಕಟ್ಟೆಗೆ ಬಂತಾ ಚೀನಾ ಬೆಳ್ಳುಳ್ಳಿ?

ಮಾರುಕಟ್ಟೆಯಲ್ಲಿ ಸ್ಥಳಿಯ ಬೆಳ್ಳುಳ್ಳಿ ಬೆಲೆ ಕೆಜಿಗೆ 400 ರಿಂದ 500 ರೂ. ಇದೆ. ದಿನೇ ದಿನೇ ಬೆಳ್ಳುಳ್ಳಿ ದರ ಗಗನಕ್ಕೆ ಏರುತ್ತಿದೆ. ಇದ್ರಿಂದ ಈಗ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದರೂ ಕಂಡು ಕೇಳದ ದಪ್ಪನೆಯ ಬೆಳ್ಳುಳ್ಳಿಯೇ ಕಣ್ಣಿಗೆ ಕಾಣುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಸಹ ಬಂಡಿಯಲ್ಲಿ ತುಂಬ್ಕೊಂಡು ಬಂದು ಏರಿಯಾಗಳಲ್ಲಿ 200 ರೂಪಾಯಿಗೆ ಕೆಜಿ ಬೆಳ್ಳುಳ್ಳಿ ಮಾರಾಟ ಮಾಡ್ತಿದ್ದಾರೆ. ಇದ್ರಿಂದ ಸಹಜವಾಗಿ ಮಹಿಳೆಯರಿಗೆ ಅನುಮಾನ ಮೂಡಿದ್ದು, ಇದು ಚೀನಾ ಬೆಳ್ಳುಳ್ಳಿನಾ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚೀನಾ ಬೆಳ್ಳುಳ್ಳಿ: ಶಿವಮೊಗ್ಗ ಆಯ್ತು, ಈಗ ಉಡುಪಿಯಲ್ಲೂ ಹಾವಳಿ, ಎಪಿಎಂಸಿ ಮಾರುಕಟ್ಟೆಯಲ್ಲಿ 5 ಕ್ವಿಂಟಲ್ ಚೀನಾ ಬೆಳ್ಳುಳ್ಳಿ ವಶಕ್ಕೆ

ದೇಸಿ ಈರುಳ್ಳಿ ಸೈಜಿನಲ್ಲಿ ಚಿಕ್ಕದಾಗಿರುತ್ತದೆ. ರುಚಿ ಹಾಗೂ ವಾಸನೆಯಲ್ಲಿ ಬಹಳಷ್ಟು ಘಾಟು ಇರುತ್ತದೆ. ಬಿಳಿ ಬಣ್ಣದಿಂದ ಕೂಡಿದ್ರೂ ಬೆಳ್ಳುಳ್ಳಿ ಎಸಳುಗಳು ಕಾರ್ನರ್ ಗಳಲ್ಲಿ ಗುಲಾಬಿ ಕೆಂಬಣ್ಣದಿಂದ ಕೂಡಿರಲಿದೆ. ಆದರೆ ಈ ದಪ್ಪನೆಯ ಬೆಳ್ಳುಳ್ಳಿ ಶುಭ್ರ ಬಿಳಿ ಬಣ್ಣದಿಂದ ಕೂಡಿದ್ದು, ವಾಸನೆ ರುಚಿ ಇಲ್ಲ, ದೇಸಿ ಬೆಳ್ಳುಳ್ಳಿಯಂತೆ ಘಾಟು ಸಹ ಇಲ್ಲ. ಇದ್ರಿಂದ ಇದು ಭಾರತ ನಿಷೇಧ ಮಾಡಿರೋ ಚೈನೀಸ್ ಬೆಳ್ಳುಳ್ಳಿ ಅನ್ನೋ ಅನುಮಾನ ದಟ್ಟವಾಗಿದೆ. ಹಾಗಾಗಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಸತ್ಯನಾರಾಯಣ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಬೆಳ್ಳುಳ್ಳಿ ಬೆಲೆ ದುಬಾರಿಯಾಗಿದ್ದೇ ದೇಶಕ್ಕೆ ಚೈನೀಸ್ ಗಾರ್ಲಿಕ್ ಕಳ್ಳ ಮಾರ್ಗದಲ್ಲಿ ಎಂಟ್ರಿಯಾಗ್ತಿರೋ ಬಲವಾದ ಅನುಮಾನಗಳು ಮೂಡುತ್ತಿವೆ. ಸಗಟು ವ್ಯಾಪಾರಿಗಳು ಕಡಿಮೆ ಬೆಲೆ ಅಂತ ಚೈನೀಸ್ ಬೆಳ್ಳುಳ್ಳಿ ತಂದು ಮಾರಾಟ ಮಾಡ್ತಿದ್ದಾರೆ ಎನ್ನಲಾಗಿದೆ. ಇದ್ರಿಂದ ಸಂಬಂಧಪಟ್ಟ ಅಧಿಕಾರಿಗಳು ಭಾರತ ಬ್ಯಾನ್ ಮಾಡಿರೋ ರಾಸಾಯನಿಕಯುಕ್ತ ಚೈನೀಸ್ ಬೆಳ್ಳುಳ್ಳಿಯ ಮಾರಾಟಕ್ಕೆ ಬ್ರೇಕ್ ಹಾಕಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.