ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು ಬಂಧನ!
ಗ್ರಾನೈಟ್ ಬ್ಯುಸಿನೆಸ್ ಮಾಡಿಕೊಂಡಿದ್ದ ಉದ್ಯಮಿ ವಿಜಯವಾಣಿ, ಅಮೇರಿಕದಲ್ಲಿರುವ ತನ್ನ ಮಗನಿಗೆ ಕಳುಹಿಸಿಕೊಡಲು ಡಾಲರ್ ಇಟ್ಟಿದ್ದರು. ಈ ವಿಷಯ ಆರೋಪಿಗಳಿಗೆ ತಿಳಿದಿತ್ತು. ಮನೆಯಲ್ಲಿ ಯಾರು ಇಲ್ಲದೇ ಇರುವಾಗ ಅಮೇರಿಕ ಡಾಲರ್ ಮತ್ತು 17 ಲಕ್ಷ ನಗದನ್ನು ಖದೀಮರು ದೋಚಿದ್ದಾರೆ.
ಬೆಂಗಳೂರು: ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಖದೀಮರು ಅದೇ ಮನೆಗೆ ಕನ್ನ ಹಾಕುವ ಕೆಲಸ ಮಾಡಿದ್ದಾರೆ. ಉದ್ಯಮಿ ವಿಜಯವಾಣಿ ಎಂಬುವರ ಮನೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ದೀಪಕ್ ತಗುರ್ನಾ, ಸುರೇಶ್ ಬಹದ್ದೂರ್, ಕಮಲ್ ಬಹದ್ದೂರ್ ಮತ್ತು ರಮೇಶ್ ಎಂಬುವವರು ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿದ್ದ ಡಾಲರ್ನ ಗಮನಿಸಿದ್ದ ಈ ನಾಲ್ವರು ಎಗರಿಸಿದ್ದಾರೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಗ್ರಾನೈಟ್ ಬ್ಯುಸಿನೆಸ್ ಮಾಡಿಕೊಂಡಿದ್ದ ಉದ್ಯಮಿ ವಿಜಯವಾಣಿ, ಅಮೇರಿಕದಲ್ಲಿರುವ ತನ್ನ ಮಗನಿಗೆ ಕಳುಹಿಸಿಕೊಡಲು ಡಾಲರ್ ಇಟ್ಟಿದ್ದರು. ಈ ವಿಷಯ ಆರೋಪಿಗಳಿಗೆ ತಿಳಿದಿತ್ತು. ಮನೆಯಲ್ಲಿ ಯಾರು ಇಲ್ಲದೇ ಇರುವಾಗ ಅಮೇರಿಕ ಡಾಲರ್ ಮತ್ತು 17 ಲಕ್ಷ ನಗದನ್ನು ಖದೀಮರು ದೋಚಿದ್ದಾರೆ. ಮಗನನ್ನು ಅಮೇರಿಕಾಗೆ ಕಳುಹಿಸಿಕೊಡಲು ಡಾಲರ್ ಎಕ್ಸ್ ಚೇಂಜ್ ಮಾಡಿಟ್ಟುಕೊಳ್ಳಲಾಗಿತ್ತು. ಆದರೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನಗದು ಜೊತೆ ಕೂಡಿಟ್ಟಿದ್ದ ಡಾಲರ್ ಅನ್ನು ಕದ್ದು ಪರಾರಿಯಾಗಿದ್ದರು.
90 ಸಾವಿರ ಬೆಲೆಬಾಳುವ ಜರ್ಸಿ ತಳಿಯ ಹಸುಗಳು ಕಳ್ಳತನ ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬೈರಪುರ ಗ್ರಾಮದಲ್ಲಿ ಜರ್ಸಿ ತಳಿಯ 2 ಹಸುಗಳ ಕಳ್ಳತನವಾಗಿದೆ. ಸುಮಾರು 90 ಸಾವಿರ ಬೆಲೆಬಾಳುವ ಹಸುಗಳು ಕಳುವಾಗಿದೆ. ರೈತ ರಾಮಚಂದ್ರಯ್ಯಗೆ ಸೇರಿದ 2 ಜರ್ಸಿ ಹಸುಗಳ ಕಳ್ಳತವಾಗಿದ್ದು, ರೈತ ಕಂಗಾಲಾಗಿದ್ದಾರೆ.
ಇದನ್ನೂ ಓದಿ
ಕುತ್ತಿಗೆಗೆ ಬಾಯಿ ಹಾಕಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ! ದಾವಣಗೆರೆ ರೈತರ ಮಾಸ್ಟರ್ ಪ್ಲ್ಯಾನ್
ಈ ಬಾರಿ 7 ದಿನದ ಲಾಕ್ಡೌನ್; ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬೀಗ ಬೀಳುವ ಸಾಧ್ಯತೆ
(Bengaluru Police have arrested a four members who stole money and dollars from a businessmans home)