ವಾರಂತ್ಯದಲ್ಲಿ ಬೆಂಗಳೂರಿಗರಿಗೆ ಡಬಲ್ ಶಾಕ್: ಈ ದಿನಗಳಂದು ನೀರು, ವಿದ್ಯುತ್ ಇರಲ್ಲ
ಬೆಂಗಳೂರಿನಲ್ಲಿ ವಿದ್ಯುತ್ ಕಟ್: ಬೆಂಗಳೂರು ನಗರದ ಜನರಿಗೆ ಈ ವಾರಾಂತ್ಯದಲ್ಲಿ ಎರಡೆರಡು ಸಮಸ್ಯೆಗಳನ್ನು ಎದುರಿಸಬೇಕಿದೆ. ಒಂದೆಡೆ ಕಾವೇರಿ ನೀರು ಪೂರೈಕೆ ಸ್ಥಗಿತವಾಗುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದ್ರೆ, ಯಾವೆಲ್ಲಾ ಏರಿಯಾಗಳಲ್ಲಿ ಯಾವಾಗಿನಿಂದ ಕರೆಂಟ್, ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 12): ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17 ರಂದು ಬೆಂಗಳೂರಿನಲ್ಲಿ (Bengaluru) ಕಾವೇರಿ ನೀರು (Cauvery water) ಪೂರೈಕೆ ಸ್ಥಗಿತವಾಗಲಿದೆ. ಇದರ ಬೆನ್ನಲ್ಲೇ ಇದೀಗ ನಗರದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಹೌದು…ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ ಅಂದರೆ ಶನಿವಾರ ಹಾಗೂ ನಾಡಿದ್ದು ಭಾನುವಾರ (ಸೆಪ್ಟೆಂಬರ್ 14, 15) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಡಿತವಾಗುವ ಪ್ರಮುಖ ಪ್ರದೇಶಗಳು
ಶನಿವಾರ (ಸೆಪ್ಟೆಂಬರ್ 13) ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಮಾರತಹಳ್ಳಿ, ದೊಡ್ಡನೆಕುಂದಿ, ಇಸ್ರೋ ಕ್ಯಾಂಪಸ್, ಬಾಗ್ಮನೆ ಟೆಕ್ ಪಾರ್ಕ್, ಜಿಟಿಆರ್‌ಇ, ಡಬ್ಲ್ಯುಟಿಸಿ ಇಂದಿರಾನಗರ ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, ಇಂದಿರಾನಗರ 1 ಮತ್ತು 2ನೇ ಹಂತ, 80 ಅಡಿ ರಸ್ತೆ, ಸಿಎಂಎಚ್ ರಸ್ತೆ, ಜೀವನ್‌ಭೀಮಾನಗರ, ಗೀತಾಂಜಲಿ ಲೇಔಟ್, ಬಿಡಿಎ ಲೇಔಟ್, ಎಲ್‌ಐಸಿ ಕಾಲೋನಿ, ತಿಪ್ಪಸಂದ್ರ, ರಮೇಶ್‌ನಗರ, ಟಾಟಾ ಹೌಸಿಂಗ್, ಬಿಇಎಂಎಲ್, ಕಾಡಾ ಹೌಸಿಂಗ್, ಮಲ್ಲೇಶ್‌ಪಾಲ್, ಎಡಿಎ ಲೇಔಟ್, ಬಸವನಗರ, ಅನ್ನಸಂದ್ರಪಾಳ್ಯ, ವಿಭೂತಿಪುರ, ಜೈನ್ ಹೈಟ್ಸ್, ವಿಶ್ವಜಿತ್ ಲೇಔಟ್, ಆದರ್ಶ ವಿಲ್ಲಾ, ಕುವೆಂಪು ರಸ್ತೆ, ಕೃಷ್ಣಪ್ಪ ಗಾರ್ಡನ್, ಏರ್‌ಪೋರ್ಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಇದನ್ನೂ ಓದಿ: ಬೆಂಗಳೂರಿಗರ ಗಮನಕ್ಕೆ: ಸಿಲಿಕಾನ್ ಸಿಟಿಯಲ್ಲಿ ಈ 3 ದಿನ ಕಾವೇರಿ ನೀರು ಸಿಗಲ್ಲ, ಯಾವಾಗಿಂದ?
ಭಾನುವಾರ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಟ್
220/66/11 ಕೆವಿ ಎಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4 ನೇ ಬ್ಲಾಕ್, 2 ನೇ ಬ್ಲಾಕ್, ಎಂಇಐ ಫ್ಯಾಕ್ಟರಿ, ರಾಜಗೋಪಾಲ ನಗರ, ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 10 ನೇ ಕ್ರಾಸ್, 1 ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, 3 ನೇ ಕ್ರಾಸ್, 4 ನೇ ಕ್ರಾಸ್, 1 ನೇ ಸ್ಟೇಟ್ಜ್ ಪೀಣ್ಯ ಕೈಗಾರಿಕಾ ಪ್ರದೇಶ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ಚೈರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಜನರಲ್ ಮೆಟಲ್ ರಸ್ತೆ, ಮೈಸೂರು ಎಂಜಿನಿಯರ್, ರಸ್ತೆ, ಸನ್ರೈಸ್ ಕಾಸ್ಟಿಂಗ್ ರಸ್ತೆ, 3 ನೇ ಹಂತ, ವೈಷ್ಣವಿ ಮಾಲ್, ಕಾವೇರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
3 ದಿನ ಬೆಂಗಳೂರಿನಲ್ಲಿ ಕಾವೇರಿ ನೀರು ಸಿಗಲ್ಲ
ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17 ರಂದು ಬೆಂಗಳೂರಿನಲ್ಲಿ (Bengaluru) ಕಾವೇರಿ ನೀರು (Cauvery water) ಪೂರೈಕೆ ಸ್ಥಗಿತವಾಗಲಿದೆ. ಒಟ್ಟು 5 ಹಂತಗಳಲ್ಲಿ ಸುಮಾರು 60 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತವಾಗಲಿದೆ. ಹೀಗಾಗಿ ಸಾರ್ವಜನಿಕರು ಮುಂಚಿತವಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಮನವಿ ಮಾಡಿದೆ. ಈ ಕುರಿತು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮೋಹನ್ ಮಾಹಿತಿ ನೀಡಿದ್ದಾರೆ.
ಒಂದೇ ವಾರದಲ್ಲಿ ವಿದ್ಯುತ್ ಮತ್ತು ನೀರು ಎರಡೂ ಕಡಿತವಾಗುತ್ತಿರುವುದರಿಂದ ಬೆಂಗಳೂರಿನ ನಾಗರಿಕರಿಗೆ ಸಮಸ್ಯೆಯಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




