ಬೆಂಗಳೂರು ಪವರ್ ಕಟ್: ಗ್ರಾಹಕರೇ ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು ವಿದ್ಯುತ್ ವ್ಯತ್ಯಯ: ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಹೆಬ್ಬಾಳ ಉಪವಿಭಾಗದ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 18ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ. ಎಲ್ಲೆಲ್ಲಿ ಪವರ್ ಕಟ್ ಇದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಪವರ್ ಕಟ್: ಗ್ರಾಹಕರೇ ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ಸಾಂದರ್ಭಿಕ ಚಿತ್ರ
Image Credit source: BESCOM

Updated on: Sep 18, 2026 | 9:57 AM

ಮುಖ್ಯಾಂಶಗಳು

  • ಹೆಬ್ಬಾಳ ಉಪವಿಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ
  • ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಪೂರೈಕೆ ಸ್ಥಗಿತ
  • ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ

ಬೆಂಗಳೂರು, ಸೆಪ್ಟೆಂಬರ್ 18: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಸ್ಕಾಂನ ಬೆಂಗಳೂರು ಹೆಬ್ಬಾಳ ಉಪವಿಭಾಗ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹಾಗೂ ಎಕ್ಸ್​ ತಾಣದಲ್ಲಿ ಸಂದೇಶ ಪ್ರಕಟಿಸುವ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಎಲ್ಲೆಲ್ಲಿ ಪವರ್ ಕಟ್?

ಕೆಎಂಎಫ್, ಯಲಹಂಕ ನ್ಯೂ ಟೌನ್ 208, 407, ಬಿ ಸೆಕ್ಟರ್, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದಾನಗರ, ಜನಪ್ರಿಯ, ಅದ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ, ಬಾಗಲೂರು ಕ್ರಾಸ್, ವೆಂಕಟಾಲ, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ಅಸ್ಟ್ರಾಜೆನೆಕಾ, ಪಿಎಡಿಎಂಎಸ್ ಕಾಲೇಜು, ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್, ಕಟ್ಟಿಗೇನಹಳ್ಳಿ, ಪಾಲನಹಳ್ಳಿ, ದ್ವಾರಕಾನಗರ, ಪುರವಂಕರ ಆರ್‌ಎಂಝಡ್ ಗ್ಯಾಲೇರಿಯಾ ಹಾಗೂ ಎಎಂಎಸ್ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದರೊಂದಿಗೆ ಡಿಫೆನ್ಸ್ ಲೇಔಟ್, ಜೆಲ್ಲಿ ಮೆಷಿನ್ ಸರ್ಕಲ್, ಟೀಚರ್ಸ್ ಲೇಔಟ್, ರಾಘವೇಂದ್ರ ಲೇಔಟ್, ಎಚ್‌ಎಂಟಿ ಲೇಔಟ್, ಬಾಲಾಜಿ ಲೇಔಟ್, ಸ್ವಾಗತ್ ಲೇಔಟ್, ದುರ್ಗಾ ಲೇಔಟ್, ಬಿಇಎಲ್ 6ನೇ ಬ್ಲಾಕ್, ನರಸೀಪುರ ಲೇಔಟ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್, ಎಚ್‌ಎಂಟಿ ಸಪೂರು ಬ್ಲಾಕ್, ಎಸ್ಕಾರ್ಟ್ ಲೇಔಟ್, ತಿರುಮಲನಗರ, ಅಕ್ಷಯನಗರ, ಅರವಿಂದ್ ಅಪಾರ್ಟ್‌ಮೆಂಟ್ ಹಾಗೂ ಕಾವೇರಿ ಲೇಔಟ್‌ಗಳಲ್ಲೂ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ಎಕ್ಸ್ ಸಂದೇಶ


ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಆದಿತ್ಯನಗರ, ಅಟ್ಟೂರು ಲೇಔಟ್, ಸಂತೋಷ್ ನಗರ, ಮುನೇಶ್ವರ ಲೇಔಟ್, ವೀರನು ಸಾಗರಯ್ಯ ಮುಖ್ಯರಸ್ತೆ, ದಿನ್ನೆ ಮುನೇಶ್ವರ ಲೇಔಟ್, ಮಹಾತ್ಮಗಾಂಧಿ ಲೇಔಟ್, ಎಂ.ಎಸ್. ಪಾಳ್ಯ, ಬೆಸ್ಟ್ ಕೌಂಟಿ 1, 2 ಮತ್ತು 3, ವಿಜಯಲಕ್ಷ್ಮಿ ಲೇಔಟ್, ಸಾಯಿನಗರ 1 ಮತ್ತು 2, ಹವ್ಯಕನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us