ಆರೋಗ್ಯ ಇಲಾಖೆ, ಬಿಬಿಎಂಪಿ ಉದ್ಧಟತನ; ಬೆಂಗಳೂರಿನ ಈ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ ಡಂಪಿಂಗ್ ಯಾರ್ಡ್

ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ಆದರೆ ಇಲ್ಲಿ ನೋಡಿದ್ಮೇಲೆ ಇದು ತುಂಬಾ ಓವರ್ ಆಯ್ತು ಅಂತ ಅನ್ನಿಸ್ದೇ ಇರಲ್ಲ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯನ್ನ ಹೇಳೋರ್ ಇಲ್ಲ ಕೇಳೋರ್ ಇಲ್ಲ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ ಡಂಪಿಂಗ್ ಯಾರ್ಡ್.

ಆರೋಗ್ಯ ಇಲಾಖೆ, ಬಿಬಿಎಂಪಿ ಉದ್ಧಟತನ; ಬೆಂಗಳೂರಿನ ಈ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ ಡಂಪಿಂಗ್ ಯಾರ್ಡ್
ಬೆಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಡಂಪಿಂಗ್ ಯಾರ್ಡ್
Follow us
Kiran Surya
| Updated By: ಆಯೇಷಾ ಬಾನು

Updated on:Jul 01, 2024 | 7:37 AM

ಬೆಂಗಳೂರು, ಜುಲೈ.01: ಜಯನಗರ ಅಶೋಕ ಪಿಲ್ಲರ್ ಬಳಿ ಇರುವ ಹಳೆಯ ಹೆರಿಗೆ ಆಸ್ಪತ್ರೆಯನ್ನ ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಆದ್ರೆ, ಇದೇ ಆವರಣದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಮಾತ್ರ ಇಲ್ಲೇ ಇರಿಸಲಾಗಿದೆ. ಈ ಕಟ್ಟಡದ ಪರಿಸ್ಥಿತಿ‌ ನೋಡಿದ್ರೆ ರೋಗ ವಾಸಿ ಆಗೋಕ್ಕಿಂತ ಯಾವಾಗ ತಲೆ ಮೇಲೆ ಈ ಕಟ್ಟಡದ ಸಿಮೆಂಟ್ ಬೀಳುತ್ತದೆಯೋ ಅಂತ ಅನಿಸುತ್ತಿದೆ. ಇನ್ನು ಪ್ರಮುಖವಾಗಿ ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸುಮಾರು ನಾಲ್ಕೈದು ಬಿಬಿಎಂಪಿ (BBMP) ವಾಹನಗಳು ನಿಂತಿದ್ದಾವೆ. ಜೊತೆಗೆ ಕಟ್ಟಡದ ಸುತ್ತ ಕಸದ ರಾಶಿಯನ್ನ ಸುರಿಯಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ದೂರುದಾರರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇನ್ನೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿಜಕ್ಕೂ ಕಣ್ಣು ಮುಚ್ಚಿ ಕುಳಿತಿದ್ದೀರಾ? ಅಥವಾ ನಿಮ್ಮ ಕುಮ್ಮಕ್ಕಿನಲ್ಲೇ ಈ ರೀತಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಮೂಡದೇ ಇರದು. ಸಂಪೂರ್ಣ ಗಬ್ಬೇದ್ದು ನಾರುತ್ತಿವೆ ಅಶೋಕ ಪಿಲ್ಲರ್ ಬಳಿಯಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ. ಇಲ್ಲಿ ಬಂದ್ರೆ ರೋಗ ವಾಸಿಯಾಗೋದ್ ಇರಲಿ, ಹೊಸ ರೋಗ ಬರದಿದ್ದರೆ ಸಾಕು ಎನ್ನುವಷ್ಟು ಹೀನ ಪರಿಸ್ಥಿತಿ‌ಯಿದೆ.

bengaluru primary health centre become dumping yard public express anger on bbmp kannada news ಇದನ್ನೂ ಓದಿ: ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಗ್ಯೂ ಲಕ್ಷಣ ಪತ್ತೆ; ಬೆಂಗಳೂರಿನಲ್ಲಿ 2457 ಪ್ರಕರಣ

ಆರೋಗ್ಯ ಕೇಂದ್ರದ ಸುತ್ತ ಕಸ ತಂದು ಸುರಿದಿರುವ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಇಲ್ಲಿ ಸುರಿಯಬೇಡಿ ಎಂದು ಹೇಳಿದ್ರೂ ಕ್ಯಾರೆ ಅಂದಿಲ್ಲ. ಇದರಿಂದ ಪ್ರತಿದಿನ ಜೀವನ ಮಾಡುವುದಕ್ಕೆ ಕಷ್ಟ ಆಗಿದೆ. ಉಸಿರಾಡಲು ಆಗ್ತಿಲ್ಲ. ಮನೆ ತುಂಬಾ ಇಲಿ ಹೆಗ್ಗಣ್ಣಗಳ ಕಾಟ ಆಗಿದೆ. ಡೆಂಗ್ಯೂ ಕಾಯಿಲೆ ಹೆಚ್ಚಾಗ್ತಿದೆ. ನಮಗೆ ತುಂಬಾ ಭಯ ಆಗ್ತಿದೆ ಎಂದು ಪಕ್ಕದ ಮನೆಯ ನಿವಾಸಿ ಸುಮ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಬಿಬಿಎಂಪಿಯ ಕೆಲ ಅಧಿಕಾರಿಗಳು ಸಿಬ್ಬಂದಿಗಳಿಂದ ಜನರು ನರಕ ಯಾತನೆ ಅನುಭವಿಸುವಂತಾಗಿದೆ. ಆಸ್ಪತ್ರೆ ಇರೋ‌ ಜಾಗದಲ್ಲಿ ಡಂಪಿಂಗ್ ಯಾರ್ಡ್ ರೀತಿ ಕಸ ಹಾಕಿದ್ರೆ ಎಷ್ಟು ಸರಿ. ಇನ್ನಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎನ್ನುವುದೇ ನಮ್ಮ ಒತ್ತಾಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:36 am, Mon, 1 July 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ