Bengaluru Rain: ಬೆಂಗಳೂರಿನ ಕೆಲವೆಡೆ ವ್ಯಾಪಕ ಮಳೆ; ವಾಹನ ಸವಾರರ ಪರದಾಟ
ರಾಜಕಾಲುವೆ ಕಾಮಗಾರಿ ಅಪೂರ್ಣವಾಗಿದ್ದರಿಂದ ರಾಮಮೂರ್ತಿನಗರದ ಹೊಯ್ಸಳನಗರದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು, ತಗ್ಗು ಪ್ರದೇಶಗಳತ್ತ ನೀರು ನುಗ್ಗುತ್ತಿದೆ.
ಬೆಂಗಳೂರು: ನಗರದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು ಶಿವಾನಂದ ಸರ್ಕಲ್, ಮಂತ್ರಿ ಮಾಲ್ ಬಳಿ ರಸ್ತೆ ಜಲಾವೃತಗೊಂಡಿದೆ. ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಮೆಜೆಸ್ಟಿಕ್, ಲಾಲ್ಬಾಗ್, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ರಿಚ್ಮಂಡ್ ಟೌನ್ ಸುತ್ತಮುತ್ತ ಮಳೆ ಸುರಿಯುತ್ತಿದೆ. ದಿಢೀರ್ ಮಳೆಯಿಂದ ಪಾದಚಾರಿಗಳು, ಸವಾರರು ಪರದಾಟ ಪಡುತ್ತಿದ್ದಾರೆ. ಬಸ್ ನಿಲ್ದಾಣ, ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದಾರೆ.
ಮೈಸೂರು ರಸ್ತೆ ಮಾರ್ಕೆಟ್ ಫ್ಲೈಓವರ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಫ್ಲೈಓವರ್ ಬಳಿ ಮ್ಯಾನ್ಹೋಲ್ನಿಂದ ನೀರು ಉಕ್ಕಿ ಹರಿಯುತ್ತಿದೆ.ಮೈಸೂರು ರಸ್ತೆ ಮಾರ್ಕೆಟ್ ಫ್ಲೈಓವರ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಫ್ಲೈಓವರ್ ಬಳಿ ಮ್ಯಾನ್ಹೋಲ್ನಿಂದ ನೀರು ಉಕ್ಕಿ ಹರಿಯುತ್ತಿದೆ. ರಾಜಕಾಲುವೆ ಕಾಮಗಾರಿ ಅಪೂರ್ಣವಾಗಿದ್ದರಿಂದ ರಾಮಮೂರ್ತಿನಗರದ ಹೊಯ್ಸಳನಗರದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು, ತಗ್ಗು ಪ್ರದೇಶಗಳತ್ತ ನೀರು ನುಗ್ಗುತ್ತಿದೆ.
ಇದನ್ನೂ ಓದಿ:
Uttara Kannada Flood: ಉತ್ತರ ಕನ್ನಡ ಪ್ರವಾಹ; ಭೂಕುಸಿತಕ್ಕೆ ತತ್ತರಿಸಿದ ಯಲ್ಲಾಪುರದ ಗ್ರಾಮಗಳು
ಕಾರವಾರ: ಮಳೆಗೆ ಮನೆ ಕುಸಿತ; ನೆಲಸಮವಾದ ಸೂರು ನೋಡಿ ಭಾವುಕರಾದ ದಂಪತಿ
(Bengaluru Rain Heavy rains experienced in some parts of city )