Bengaluru Rain: ಒಂದೇ ದಿನದಲ್ಲಿ 133 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ
ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಒಂದೇ ದಿನ ದಾಖಲೆ ಮಟ್ಟದಲ್ಲಿ ಮಳೆಯಾಗಿದೆ. 133 ವರ್ಷಗಳ ಹಿಂದೆ ಸುರಿದಿದ್ದ ಮಳೆ ಪ್ರಮಾಣ ಕೇವಲ ಒಂದು ದಿನದಲ್ಲಿ ಸುರಿದಿದ್ದು ಹೊಸ ದಾಖಲೆ ಬರೆದಿದೆ. ಮಳೆ ತಿಂಗಳ ಸರಾಸರಿ 110.3ಮಿಮೀ ಮೀರಿದ್ದು, ನಗರದಲ್ಲಿ ಕಳೆದ ಎರಡು ದಿನಗಳಿಂದ 140.7ಮಿಮೀ ಮಳೆಯಾಗಿದೆ.
ಬೆಂಗಳೂರು, ಜೂನ್.03: ನಗರದಲ್ಲಿ ಭಾನುವಾರ ಸಂಜೆ ಸುರಿದ ಮಹಾಮಳೆ ಅವಾಂತರಗಳಿಗೆ ಸಾಕ್ಷಿಯಾಗಿದೆ. ಒಂದೇ ದಿನದಲ್ಲಿ 206 ಮರಗಳು ಧರೆಗುರುಳಿವೆ (Bengaluru Rain). ರಸ್ತೆಗಳಲ್ಲಿ ಮರ ಬಿದ್ದಿದ್ದರಿಂದ ಕಂಬಗಳೂ ಬಿದ್ದು ವಿದ್ಯುತ್ ಸಂಪರ್ಕವಿಲ್ಲದೇ ಹಲವು ಪ್ರದೇಶಗಳಲ್ಲಿ ಕಗ್ಗತ್ತಲು ಆವರಿಸಿದೆ. ರಸ್ತೆ ಸಂಚಾರ ಬಂದ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಇಡೀ ತಿಂಗಳ ವಾಡಿಕೆ ಮಳೆ ಒಂದೇ ಸಂಜೆ ಸುರಿದಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ. 133 ವರ್ಷಗಳ ಹಿಂದೆ ಸುರಿದಿದ್ದ ಮಳೆ ಪ್ರಮಾಣವನ್ನು ಮೀರಿಸಿ ಹೊಸ ದಾಖಲೆ ಬರೆದಿದೆ.
ನೈಋತ್ಯ ಮಾನ್ಸೂನ್ ಕರ್ನಾಟಕಕ್ಕೆ ಅಪ್ಪಳಿಸುತ್ತಿರುವುದರಿಂದ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು (IMD) ಬೆಂಗಳೂರಿಗೆ ಹಳದಿ ಅಲರ್ಟ್ ನೀಡಿದೆ. ಸೋಮವಾರ ಮೋಡ ಕವಿದ ವಾತಾವರಣದೊಂದಿಗೆ ಕೆಲವು ಕಡೆ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಜೂನ್ 5 ರವರೆಗೆ ಮಳೆ ಮುಂದುವರೆಯುವ ನಿರೀಕ್ಷೆಯಿದೆ.
ಇನ್ನು @Bnglrweatherman ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಒಂದೇ ದಿನ ದಾಖಲೆ ಮಟ್ಟದಲ್ಲಿ ಮಳೆಯಾಗಿದೆ. 133 ವರ್ಷಗಳ ಹಿಂದೆ ಸುರಿದಿದ್ದ ಮಳೆ ಪ್ರಮಾಣ ಕೇವಲ ಒಂದು ದಿನದಲ್ಲಿ ಸುರಿದಿದ್ದು ಹೊಸ ದಾಖಲೆ ಬರೆದಿದೆ. ಮಳೆ ತಿಂಗಳ ಸರಾಸರಿ 110.3ಮಿಮೀ ಮೀರಿದ್ದು, ನಗರದಲ್ಲಿ ಕಳೆದ ಎರಡು ದಿನಗಳಿಂದ 140.7ಮಿಮೀ ಮಳೆಯಾಗಿದೆ.
Rainfall stats for BENGALURU city via @metcentre_bng & @KarnatakaSNDMC ending at 11:30 PM #BengaluruRains #BangaloreRains
City IMD: 111mm HAL IMD: 47mm
City IMD breaks the 133 year old record of the highest ever rainfall in a single day in June & crossed the June month average… https://t.co/LJHYeOXgyV pic.twitter.com/k6FRAQFEdX
— Karnataka Weather (@Bnglrweatherman) June 2, 2024
ಇದನ್ನೂ ಓದಿ: Bangalore Rains: ಬೆಂಗಳೂರು ಮಳೆ; ವರುಣನಿಂದ ಸೃಷ್ಟಿಯಾದ ಅವಾಂತರಗಳು ಒಂದಾ ಎರಡಾ, 206 ಮರಗಳು ಧರಾಶಾಹಿ
ಬೆಂಗಳೂರಿನಲ್ಲಿ ಜೂನ್ 2ರಿಂದ 5ರ ವರೆಗೆ ಗುಡುಗು ಸಹಿತ ಮಳೆ ಹಾಗೂ ಮೋಡ ಕವಿದ ವಾತಾವರಣ ಇರಲಿದೆ. ಬಳಿಕ ಜೂನ್ 8 ಮತ್ತು 9 ರಂದು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಮಳೆಗೆ ಭಾರೀ ಅವಾಂತರ
ಭಾನುವಾರ ಸುರಿದ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ರಾತ್ರಿ ಹೆಬ್ಬಾಳ ಅಂಡರ್‌ಪಾಸ್, ಕೆಎಫ್‌ಸಿ ರಸ್ತೆಯಿಂದ ಗುಂಜೂರು ರಸ್ತೆ, ಚಿಕ್ಕಜಾಲ ಕೋಟೆ ಕ್ರಾಸ್, ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆ, ಹೆಬ್ಬಾಳ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ