AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ: ಹಲವು ರಸ್ತೆಗಳು ಜಲಾವೃತ, ನಿಧಾನಗತಿಯ ಸಂಚಾರ

ವಿಧಾನಸೌಧ, ಕಬ್ಬನ್​ಪಾರ್ಕ್, ಮೆಜೆಸ್ಟಿಕ್, ವಿಜಯನಗರ ಸೇರಿದಂತೆ ಬೆಂಗಳೂರು ನಗರದ ಹಲವೆಡೆ ಮಳೆ ಆರಂಭವಾಗಿದ್ದು, ದಿಢೀರ್ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಸಂಜೆ ವೇಳೆಗೆ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಮಳೆಗೆ ಸಿಲುಕಿ ಪರದಾಟ ಅನುಭವಿಸುವಂತಾಗಿದೆ.

Bengaluru Rains: ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ: ಹಲವು ರಸ್ತೆಗಳು ಜಲಾವೃತ, ನಿಧಾನಗತಿಯ ಸಂಚಾರ
ಬೆಂಗಳೂರು ಮಳೆ
ಕಿರಣ್ ಹನುಮಂತ್​ ಮಾದಾರ್
|

Updated on:Jul 12, 2024 | 7:38 PM

Share

ಬೆಂಗಳೂರು, ಜು.12: ರಾಜ್ಯದಲ್ಲಿ ವರುಣ ಅಬ್ಬರ ಮುಂದುವರೆದಿದ್ದು, ಇಂದು(ಶುಕ್ರವಾರ) ಸಂಜೆ ಆಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ. ನಗರದ ಕೋರಮಂಗಲ, ಶಾಂತಿನಗರ, ಕೆ.ಹೆಚ್​ ರಸ್ತೆ, ವಿಧಾನಸೌಧ, ಕಬ್ಬನ್​ಪಾರ್ಕ್, ಮೆಜೆಸ್ಟಿಕ್, ವಿಜಯನಗರ, ರಾಜಾಜಿನಗರ, ಬನಶಂಕರಿ ಹಾಗೂ ಜಯನಗರದ ಸುತ್ತಮುತ್ತ ಮಳೆ ಶುರುವಾಗಿದೆ. ಗಾಳಿ ಸಹಿತ ಮಳೆಯಿಂದ ವಾಹನ ಸವಾರರ ಪರದಾಟ ನಡೆಸಿದ್ದು, ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸಂಚಾರ ವ್ಯತ್ಯಯವಾಗಿದೆ.

ಸಂಚಾರ ವ್ಯತ್ಯಯ

ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿಯೇ ಮಳೆ‌ ನೀರು ಹೆಚ್ಚಾಗಿದೆ. ಈ ಹಿನ್ನಲೆ ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದು, ಟ್ರಾಫಿಕ್​ ಜಾಮ್​ ಉಂಟಾಗಿದೆ. ಎಲೆಕ್ಟ್ರಾನಿಕ್ ಸಿಟಿ ಹಂತ-2 ವೀರಸಂದ್ರ ವೃತ್ತದಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯಲ್ಲಿ ವಾಹನ ಸಂಚಾರವಿದೆ. ಜೊತೆಗೆ ಕಸ್ತೂರಿನಗರ ಡೌನ್ ರ‍್ಯಾಂಪ್‌, ಕ್ವೀನ್ಸ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಅನಿಲ್ ಕುಂಬ್ಳೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ.

ಎಲೆಕ್ಟ್ರಾನಿಕ್ ಸಿಟಿ

ಇದನ್ನೂ ಓದಿ: ಇಂದಿನಿಂದ ಕರ್ನಾಟಕದ ಈ 15 ಜಿಲ್ಲೆಗಳಲ್ಲಿ ಮಳೆ ಜೋರು, ಆರೆಂಜ್ ಅಲರ್ಟ್​

ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸುತ್ತಮುತ್ತ ಕೂಡ ಧಾರಾಕಾರ ಮಳೆಯಾಗುತ್ತಿದ್ದು, ಭಾರಿ ಮಳೆಯಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ನೆಲಮಂಗಲ ಮಳೆ

ಇನ್ನು ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Fri, 12 July 24