ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ, ಆಶು ರೈ ರಿಪೋರ್ಟ್ ಪಾಸಿಟಿವ್

| Updated By: ಆಯೇಷಾ ಬಾನು

Updated on: May 23, 2024 | 12:55 PM

ತೆಲುಗು ನಟಿ ಹೇಮಾ ಹಾಗೂ ಆಶು ರೈ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಈ ಮೂಲಕ ತೆಲುಗು ನಟಿ ಹೇಮಾ ಹಾಗೂ ಆಶು ಸಹ ಡ್ರಗ್ಸ್​ ಸೇವಿಸಿರುವುದ ದೃಢಪಟ್ಟಿದೆ. ಸಿಸಿಬಿ ತಂಡ 98 ಜನರ ಬ್ಲಡ್ ಸ್ಯಾಂಪಲ್ ಪಡೆದಿತ್ತು. ಅದರಲ್ಲಿ 84 ಜನರ ರಿಪೋರ್ಟ್​​ ಪಾಸಿಟಿವ್ ಬಂದಿದೆ.

ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ, ಆಶು ರೈ ರಿಪೋರ್ಟ್ ಪಾಸಿಟಿವ್
ನಟಿ ಹೇಮಾ
Follow us on

ಬೆಂಗಳೂರು, ಮೇ.23: ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ರೇವ್​ ಪಾರ್ಟಿ (Rave Party) ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬರ್ತ್​ಡೇ ಹೆಸರಲ್ಲಿ ಮತ್ತೇರಿಸಿಕೊಂಡವರಿಗೆ ಕಾನೂನು ಕುಣಿಕೆ ಬಿಗಿ ಮಾಡಲು ಖಾಕಿ ಮುಂದಾಗಿದ್ದು, ಮುಖಕ್ಕೆ ಬಟ್ಟೆ ಕಟ್ಕೊಂಡು ಪರಾರಿಯಾಗಿದ್ದ ಎಲ್ಲರನ್ನ ಕರೆಸಿ ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಇನ್ನು ಈ ಘಟನೆ ಸಂಬಂಧ ಮುಖ್ಯ ಬೆಳವಣಿಗೆಗೊಂದು ನಡೆದಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಬ್ಲಡ್​​ ಟೆಸ್ಟ್ (Blood Test) ವರದಿ ಹೊರಬಿದ್ದಿದೆ.

ಮುಖ್ಯವಾಗಿ ತೆಲುಗು ನಟಿ ಹೇಮಾ ಹಾಗೂ ಆಶು ರೈ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಈ ಮೂಲಕ ತೆಲುಗು ನಟಿ ಹೇಮಾ ಹಾಗೂ ಆಶು ಸಹ ಡ್ರಗ್ಸ್​ ಸೇವಿಸಿರುವುದ ದೃಢಪಟ್ಟಿದೆ. 103 ಜನರ ಪೈಕಿ 86 ಜನರು ಡ್ರಗ್ಸ್​ ಸೇವಿಸಿರುವುದು ದೃಢಪಟ್ಟಿದೆ. ಸಿಸಿಬಿ ತಂಡ 98 ಜನರ ಬ್ಲಡ್ ಸ್ಯಾಂಪಲ್ ಪಡೆದಿತ್ತು. ಅದರಲ್ಲಿ 84 ಜನರ ರಿಪೋರ್ಟ್​​ ಪಾಸಿಟಿವ್ ಬಂದಿದೆ. 73 ಪುರುಷರ ಪೈಕಿ 59 ಮತ್ತು 30 ಯುವತಿಯರ ಪೈಕಿ 27 ಜನರ ವರದಿ ಪಾಸಿಟಿವ್ ಬಂದಿದೆ.

ಇದನ್ನೂ ಓದಿ: ನಟಿ ಹೇಮಾ ರೇವ್ ಪಾರ್ಟಿಯಲ್ಲಿದ್ದಿದ್ದು ನಿಜ, ಖಚಿತಪಡಿಸಿದ ಪೊಲೀಸ್ ಆಯುಕ್ತ, ಹಾಗಿದ್ದರೆ ವಿಡಿಯೋ ಮಾಡಿದ್ದು ಹೇಗೆ?

ಐಟಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದ್ದ ರೇವ್ ಪಾರ್ಟಿ ಕೇಸ್​ ತನಿಖೆಯನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಡಿಜಿ ಅಂಡ್ ಐಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸದ್ಯ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇನ್ಸ್‌ಪೆಕ್ಟರ್ ಲಕ್ಷ್ಮೀ ಪ್ರಸಾದ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ರೇವ್ ಪಾರ್ಟಿ ಕೇಸ್​ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಬರ್ತ್​ಡೇ ಹೆಸರಿನಲ್ಲಿ ನಡೆದಿದ್ದ ಈ ಪಾರ್ಟಿ ನಡೆದಿದ್ದು ಭಾನುವಾರ ಮಾತ್ರ ಅಲ್ಲ. ಬದಲಿಗೆ ಶನಿವಾರ ಸಂಜೆ ಐದು ಗಂಟೆಯಿಂದಲೇ ಮತ್ತಿನ ಗಮ್ಮತ್ತು ಶುರುವಾಗಿತ್ತು ಎಂಬುದು ಬಯಲಾಗಿದೆ. ಅಲ್ದೇ ಪಾರ್ಟಿಯಲ್ಲಿ ನೂರೂ ಅಲ್ಲ, ನೂರೈವತ್ತು ಅಲ್ಲ. ಬದಲಿಗೆ 250 ಕ್ಕೂ ಹೆಚ್ಚು ಜನರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹಲವರು ಶನಿವಾರವೇ ಬಂದು ಹೋಗಿದ್ದು, ಇನ್ನು ಕೆಲವರು ಭಾನುವಾರ ಪಾರ್ಟಿಗೆ ಜಾಯಿನ್​ ಆಗಿದ್ರಂತೆ.. ಅಲ್ದೇ ದಾಳಿ ವೇಳೆಯೂ ಕೆಲವರು ಎಸ್ಕೇಪ್ ಆಗಿದ್ದು, ಎಸ್ಕೇಪ್ ಆಗಿದ್ದ ಎಲ್ಲರನ್ನ ಕರೆಸಿ ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:40 pm, Thu, 23 May 24