Bengaluru Stampede: RCB ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

Bengaluru RCB Victory Celebrations Stampede: ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ.

Bengaluru Stampede: RCB ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ
ಕಾಲ್ತುಳಿತ, ನಿಖಿಲ್ ಸೋಸಲೆ
Updated By: ವಿವೇಕ ಬಿರಾದಾರ

Updated on: Jun 06, 2025 | 6:57 PM

ಬೆಂಗಳೂರು, ಜೂನ್​ 06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy stampede) ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರ್​ಸಿಬಿ (RCB) ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರು ಕಾರ್ಯಕ್ರಮ ಆಯೋಜಕರನ್ನು ಪೊಲೀಸರು ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಜೂನ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ, ಸುಮಂತ್​, ಡಿಎನ್​ಎ ಮ್ಯಾನೇಜರ್​​ ಕಿರಣ್​, ಸಿಬ್ಬಂದಿ ಸುನೀಲ್ ಮ್ಯಾಥ್ಯೂ  ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ವಾದ-ಪ್ರತಿವಾದವೇನು?

ಕೋರ್ಟ್​: ಆರೋಪಿಗಳ ಹೆಸರು ಮತ್ತು ವಿಳಾಸದ ಮಾಹಿತಿ ಪಡೆದು, ಯಾವಾಗ ಬಂಧಿಸಿದರು? ಪೊಲೀಸರು ತೊಂದರೆ ಕೊಟ್ಟಿದ್ದಾರಾ? ಮನೆಯವರಿಗೆ ತಿಳಿಸಿದ್ದಾರಾ? ಎಂದು ನ್ಯಾಯಾಲಯ ಪ್ರಶ್ನಿಸಿತು.

ಇದನ್ನೂ ಓದಿ
Stamped: RCB ವಿರುದ್ಧ ಕಬ್ಬನ್​ ಪಾರ್ಕ್ ಠಾಣೆಯಲ್ಲಿ​ ಮತ್ತೆರಡು ಕೇಸ್​
ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಕರ್ನಾಟಕ ಪೊಲೀಸರು ದಾಖಲಿಸಿದ FIR!
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು

ಆರೋಪಿಗಳು: ಇಲ್ಲ ಸರ್​

ಪೊಲೀಸ್​: ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ.

ಆರೋಪಿ ಪರ ವಕೀಲ ಸುನಿಲ್ ಸಬ್ಮಿಶನ್: ಸಿಎಂ ತನಿಖಾ ಅಧಿಕಾರಿಗಳಿಗೆ ಬಂಧಿಸುವಂತೆ ಹೇಳಿದ್ದಾರೆ. ಅದರಂತೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿ ಎಂದು ಹೇಳುವುದೇ ಕಾನೂನು ಬಾಹಿರ‌. ಸರ್ಕಾರದ ಚರ್ಮವನ್ನು ಕಾಪಾಡಲು ಹೀಗೆ ಮಾಡಿದ್ದಾರೆ. ಆರ್​ಸಿಬಿ ಉಪಾಧ್ಯಕ್ಷ ಆಗಿದ್ದರಿಂದ ನೀವು ಸರಿಯಾಗಿ ಮಾಹಿತಿ ನೀಡದೆ. ಲೈಟಿಂಗ್ ಮಾಡಿಲ್ಲ. ಬ್ಯಾರಿಗೇಡ್​ ಹಾಕಿರಲಿಲ್ಲ. ಹೀಗಾಗಿ ಸಾವಾಗಿದೆ ಎಂದು ಹೇಳಿ ಅರೆಸ್ಟ್ ಮಾಡಲಾಗಿದೆ. ಸಂಪೂರ್ಣವಾಗಿ ಕಾರ್ಯಕ್ರಮವನ್ನು ಸುರಕ್ಷತೆಯಿಂದ ನಡೆಸಿಲ್ಲ ಎಂದು ಹೇಳಿ ಬಂಧಿಸಿದ್ದಾರೆ ಎಂದು ವಾದ ಮಂಡಿಸಿದರು.

ಈಗಾಗಲೇ ಇದೇ ಕೇಸ್​ನಲ್ಲಿ ಹೈ ಕೋರ್ಟ್ ಕೆಎಸ್​ಸಿಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳುವುದು ಬೇಡ ಎಂದು ಆದೇಶ ನೀಡಿದೆ. ಆ ಆದೇಶವನ್ನು ಆನ್​ಲೈನ್​ನಲ್ಲಿ ಪಡೆದ ನಂತರ ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದು ಪೀಠಕ್ಕೆ ಹೇಳಿದರು.

ನ್ಯಾಯಾಲಯ: ಒಳಗೆ ಸಂಭ್ರಮಾಚರಣೆ ಮಾಡುವಾಗ ಹೊರಗಡೆ ಜನರು ಸಾಯುತ್ತಿದ್ದಾರೆ ಎಂದು ಗೊತ್ತಿತ್ತಾ?

ವಕೀಲ ಸುನಿಲ್ ಸಬ್ಮಿಶನ್: ರಸ್ತೆಯಲ್ಲಿ ಘಟನೆ ನಡೆದಿದೆ. ಅಲ್ಲಿ ನೋಡಿಕೊಳ್ಳುವುದು ಪೊಲೀಸರ ಕೆಲಸ. ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರ ನಡೆಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಡಿಸಿಎಂ ಭಾಗಿಯಾಗಿದ್ದರು. ಹೊರಗೆ ಜನರು ಸತ್ತಿದ್ದರೂ ಸಹ ಅವರು ಭಾಗಿಯಾಗಿದ್ದರು ಎಂದು ತಿಳಿಸಿದರು.

ಡಿಎನ್​ಎ ಪರ ವಕೀಲ: ಪೊಲೀಸರು ಅನುಮತಿ ನೀಡಿಲ್ಲವಾದರೆ, ಅವರು ಭದ್ರತೆ ನೀಡಿದ್ದು ಏಕೆ? ಅದರ ಬದಲು ಕಾರ್ಯಕ್ರಮವನ್ನು ತಡೆಯಬಹುದಿತ್ತು. ಅದನ್ನು ಪೊಲೀಸರು ಮಾಡಿಲ್ಲ. ಪೊಲೀಸರು ಜನರನ್ನು ನಿಯಂತ್ರಿಸಬೇಕಿತ್ತು. ಕೆಎಸ್​ಸಿಎ ಬ್ಯಾರಿಕೇಡ್​ ಹಾಕಿತ್ತು. ಆದರೆ, ಪೊಲೀಸರು ಒಂದು ಬ್ಯಾರಿಕೇಡ್​ ಸಹ ಹಾಕಿರಲಿಲ್ಲ ಎಂದು ಪೀಠಕ್ಕೆ ಹೇಳಿದರು.

ಕೋರ್ಟ್​: ಕಾರ್ಯಕ್ರಮ ಆಯೋಜಿಸಿದ್ದು ಯಾರು?

ವಕೀಲ ಸುನಿಲ್ ಸಬ್ಮಿಶನ್: ಕಾರ್ಯಕ್ರಮ ಆಯೋಜಿಸಲು ಕೆಎಸ್​ಸಿಎ ಸರ್ಕಾರ ಮತ್ತು ಪೊಲೀಸರಿಗೆ ಮನವಿ ಮಾಡಿದೆ. ಅದಕ್ಕೆ ದಾಖಲಾತಿ ಇದೆ. ಮೆರವಣಿಗೆ ಮಾಡಲು ಅನುಮತಿ ಕೇಳಿದ್ದರು. ಅದು ಕೊಡಲಿಲ್ಲ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡಿಎನ್​ಎ ಕ್ರೀಡಾಂಗಣದ ಒಳಗೆ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾಲ್ತುಳಿತ ರಸ್ತೆಯಲ್ಲಿ ನಡೆದಿದ್ದ ಘಟನೆ.

ನಿಖಿಲ್ ಪರ ವಕೀಲ: ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಈ ಘಟನೆಗೆ ಹೊಣೆ. ಜೂನ್ 3ಕ್ಕೆ ಸರ್ಕಾರ ಭದ್ರತೆ ನೀಡುವಂತೆ ಪೊಲೀಸ್​ ಇಲಾಖೆಗೆ ಪತ್ರ ಬರೆದಿದೆ. ಅದಕ್ಕೆ ಪೊಲೀಸ್ ಇಲಾಖೆ ಭದ್ರತೆ ನೀಡಲು ಸಾದ್ಯವಿಲ್ಲ ಎಂದು ಹೇಳಿದೆ. ನಮ್ಮ ಪೊಲೀಸರು ಜೂನ್ 3ರ ರಾತ್ರಿ ಪೂರ್ತಿ ಕೆಲಸ ಮಾಡಿದ್ದಾರೆ. ಹೀಗಾಗಿ, ಭದ್ರತೆ ನೀಡಲ್ಲ ಎಂದು ಪೊಲೀಸ್​ ಇಲಾಖೆ ಹೇಳಿತ್ತು.

ಡಿಸಿಎಂ ವಿಮಾನ ನಿಲ್ದಾಣಕ್ಕೆ ತೆರಳಿ ಆಟಗಾರರನ್ನು ಸ್ವಾಗತ ಮಾಡಿ, ಕರೆದುಕೊಂಡು ಬಂದು ವಿಧಾನಸೌಧದ ಬಳಿ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಮತ್ತು ರಾಜ್ಯಪಾಲರು ಭಾಗವಹಿಸಿದ್ದರು. ಈಗ ಇವರ ಮೇಲೆ ಕೇಸ್​ ಮಾಡಿಸಿದ್ದಾರೆ. ಅದು ಸಹ ಸಿಎಂ ಹೇಳಿದ ಮೇಲೆ ಕೇಸ್​​ ದಾಖಲು ಮಾಡಿ ಅರೆಸ್ಟ್ ಮಾಡಲಾಗಿದೆ. ಲಕ್ಷಾಂತರ ಅಭಿಮಾನಿಗಳು ಸೇರುತ್ತಾರೆ ಎಂದು ಹೇಳಿದ್ದಾರೆ. ಸೇರಿದವರಿಗೆ ಭದ್ರತೆ ನೀಡುವುದು ಅದು ಪೊಲೀಸರ ಕರ್ತವ್ಯ ಎಂದರು.

ಇದನ್ನೂ ಓದಿ: ಕೆಎಸ್‌ಸಿಎ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಜಡ್ಜ್:​ ಪೊಲೀಸ್ ಸಡನ್ ಆಗಿ ಹೇಗೆ ಭದ್ರತೆ ವಕೆಲಸ ಮಾಡ್ತಾರೆ?

ವಕೀಲ ಸುನಿಲ್ ಸಬ್ಮಿಶನ್: ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಡೆಸಲು ಪೊಲೀಸ್​ ಭದ್ರತೆ ಪಡೆದುಕೊಂಡಿದ್ದಾರೆ. ಅದು ಹೇಗೆ ಸಾದ್ಯ ಆಯ್ತು ಪೊಲೀಸರಿಗೆ. ಚಿನ್ನಸ್ವಾಮಿಯಲ್ಲಿ ಇಷ್ಟೆಲ್ಲ ಆದಮೇಲೂ ಭದ್ರತೆ ಪಡೆದುಕೊಂಡು ಕ್ರೀಡಾಂಗಣಕ್ಕೆ ಬರುತ್ತಾರೆ. ನಂತರ ಡಿಸಿಎಂ ಮೀಡಿಯಾ ಮುಂದೆ ಕಣ್ಣೀರು ಹಾಕುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Fri, 6 June 25