AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rians: ಬೆಂಗಳೂರಿನಲ್ಲಿ ಮಟ ಮಟ ಮಧ್ಯಾಹ್ನವೇ ಮಳೆ ಶುರು

ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಮಧ್ಯಾಹ್ನವೇ ಮಳೆ ಆರಂಭವಾಗಿದ್ದು, ನಗರದ ಕೆ.ಆರ್ ಮಾರ್ಕೆಟ್, ಚಾಮರಾಜಪೇಟೆ, ಜಯನಗರ, ಶಾಂತಿನಗರ ಹಾಗೂ ಕಾರ್ಪೋರೇಶನ್ ಸುತ್ತಾಮುತ್ತ ಮಳೆ ಶುರುವಾಗಿದೆ. ಇತ್ತ ಕೆಲವೇ ಕ್ಷಣದ ಮಳೆಗೆ ಕೆ.ಆರ್.ಸರ್ಕಲ್ ಬಳಿ ನೀರು ನಿಂತು ರಸ್ತೆ ಹೊಳೆಯಂತಾಗಿದೆ.

Bengaluru Rians: ಬೆಂಗಳೂರಿನಲ್ಲಿ ಮಟ ಮಟ ಮಧ್ಯಾಹ್ನವೇ ಮಳೆ ಶುರು
ಬೆಂಗಳೂರಿನಲ್ಲಿ ಮಟ ಮಟ ಮಧ್ಯಾಹ್ನವೇ ಮಳೆ ಶುರು
Follow us
Vinay Kashappanavar
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 03, 2024 | 3:27 PM

ಬೆಂಗಳೂರು, ಅ.03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಧ್ಯಾಹ್ನವೇ ಮಳೆ(Rain)ಯ ಆಗಮನವಾಗಿದೆ. ದಿಢೀರ್​ ತುಂತುರು ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದ್ದು, ನಗರದ ಕೆ.ಆರ್ ಮಾರ್ಕೆಟ್, ಚಾಮರಾಜಪೇಟೆ, ಜಯನಗರ, ಶಾಂತಿನಗರ ಹಾಗೂ ಕಾರ್ಪೋರೇಶನ್ ಸುತ್ತಾಮುತ್ತ ಮಳೆ ಆರಂಭವಾಗಿದೆ. ಇನ್ನು ಕೆಲವೇ ಕ್ಷಣದ ಮಳೆಗೆ ಕೆ.ಆರ್.ಸರ್ಕಲ್ ಬಳಿ ನೀರು ನಿಂತು ರಸ್ತೆ ಹೊಳೆಯಂತಾಗಿದೆ. ರಸ್ತೆಯಲ್ಲಿ ನಿಂತ ನೀರಲ್ಲೇ ವಾಹನಗಳ ಸಂಚಾರ ಮಾಡುತ್ತಿದ್ದು, ಸಂಚಾರ ವ್ಯತ್ಯಯವಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆ

ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:Karnataka Rains: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆ

ವಿವಿಧ ಜಿಲ್ಲೆಗಳಲ್ಲಿ ಮಳೆಯ ಅವಾಂತರ

ಇನ್ನು ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಕೆರೆ ತುಂಬಿದ್ದು, ಪರಿಣಾಮ ನೀರು ಮನೆಗಳಿಗೆ ನುಗ್ಗಿ ಕೆರೆ ಸುತ್ತಲಿನ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಕಳೆದ ಮೂರು ದಶಕಗಳಿಂದ ಜನರು ಇಲ್ಲಿಯೇ ವಾಸವಿದ್ದು, ಕೆರೆ ಸ್ವಲ್ಪ ನೀರು ಹೆಚ್ಚಾದರೂ ಮನೆಗಳಿಗೆ ನೀರು ನುಗ್ಗುತ್ತದೆ. ಈ ಹಿನ್ನಲೆ ಕೆರೆಗೆ ತಡೆ ಗೋಡೆ ನಿರ್ಮಿಸಿ,  ಮೂಲ ಭೂತ ಸೌಲಭ್ಯ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇತ್ತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ತಡತಾತ್ರಿ ಸುರಿದ ಧಾರಾಕಾರ ಮಳೆಗೆ ಗಾಣಗಾಪುರದ ದೇವಸ್ಥಾನದವೊಂದರ ಮುಂದೆಯೇ ನೀರು ನಿಂತಿದ್ದು, ಮಳೆಯಿಂದ ಚರಂಡಿ ನೀರೆಲ್ಲಾ ದೇವಸ್ಥಾನದ‌ ಮುಂದೆ‌ ನಿಂತ ಹಿನ್ನಲೆ‌ ಜನರ‌ ಪರದಾಡುವಂತಾಗಿದೆ. ಕೇವಲ ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Thu, 3 October 24

ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್