ಬೆಂಗಳೂರು, ಮಾ.29: ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿಕೆ ಸುರೇಶ್ (D.K. Suresh) ಅವರು ಸಹೋದರ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯರ ಆಶೀರ್ವಾದ ಪಡೆದು ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (S.M. Krishna) ಅವರನ್ನು ಡಿಕೆ ಸುರೇಶ್ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಭೇಟಿ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ ಡಿಕೆ ಸುರೇಶ್, ಇಂದು ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ದಂಪತಿಗಳ ಆಶೀರ್ವಾದ ಪಡೆದೆ. ಈ ವೇಳೆ ಅವರ ಸುದೀರ್ಘವಾದ ರಾಜಕೀಯ ಅನುಭವ ಮತ್ತು ಹಂಚಿಕೊಂಡ ಸಲಹೆಗಳು ಮತ್ತಷ್ಟು ನನಗೆ ಸ್ಫೂರ್ತಿಯನ್ನು ನೀಡಿವೆ ಎಂದಿದ್ದಾರೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್ 593.04 ಕೋಟಿ ರೂ. ಒಡೆಯ, ಆದ್ರೂ ಒಂದು ಸ್ವಂತ ಕಾರು ಇಲ್ಲ!
ಬೆಂಗಳೂರು ಗ್ರಾಮಾಂತರ ಲೋಕಸಭಾ ರಣಕಣ ರಂಗೇರಿದೆ. ಕ್ಷೇತ್ರದ ಹಾಲಿ ಸಂಸದ ಡಿಕೆ ಸುರೇಶ್ ಅವರು ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ನಿನ್ನೆ (ಮಾರ್ಚ್ 28) ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮೀನಶನ್ಗೂ ಮುನ್ನಾ ಟೆಂಪಲ್ ರನ್ ಮಾಡಿದ್ದ ಅವರು, ಮನೆದೇವತೆ ಕೆಂಕೇರಮ್ಮ, ಕಬ್ಬಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಇಂದು ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ದಂಪತಿಗಳ ಆಶೀರ್ವಾದ ಪಡೆದೆ.
ಈ ವೇಳೆ ಅವರ ಸುದೀರ್ಘವಾದ ರಾಜಕೀಯ ಅನುಭವ ಮತ್ತು ಹಂಚಿಕೊಂಡ ಸಲಹೆಗಳು ಮತ್ತಷ್ಟು ನನಗೆ ಸ್ಫೂರ್ತಿಯನ್ನು ನೀಡಿವೆ.#DKSuresh #BangaloreRural #LokSabhaElection2024 pic.twitter.com/c21wKkHWA7
— DK Suresh (@DKSureshINC) March 29, 2024
ಬಳಿಕ ಉಪಮುಖ್ಯಮಂತ್ರಿಯೂ ಆಗಿರುವ ಸಹೋದರ ಡಿಕೆ ಶಿವಕುಮಾರ್ ಸೇರಿದಂತೆ ಕುಟುಂಬದ ಹಿರಿಯರ ಆಶೀರ್ವಾದ ಪಡೆದ ಡಿಕೆ ಸುರೇಶ್, ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.
ಇದನ್ನೂ ಓದಿ: ಬಿಜೆಪಿಗೆ ಆಘಾತ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಹೆಸರಿನ ಮತ್ತೋರ್ವ ವ್ಯಕ್ತಿ ಸ್ಪರ್ಧೆ
ಇನ್ನೊಂದೆಡೆ, ಡಿಕೆ ಸುರೇಶ್ ಅವರ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಕಣದಲ್ಲಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಮಾಡಿದ ಸಮಾಜ ಸೇವೆಯೇ ಮಂಜುನಾಥ್ ಅವರಿಗೆ ಶ್ರೀರಕ್ಷೆಯಾಗಿದೆ. ಹೀಗಾಗಿ ಈ ಬಾರಿ ಬೆಂಗಳೂರು ಗ್ರಾಮಾಂತರವು ಹೈವೋಲ್ಟೇಜ್ ಲೋಕಸಭಾ ಕ್ಷೇತ್ರವಾಗಿ ಹೊರಹೊಮ್ಮಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ