AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಸೆಟ್​ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ

ಬೆಂಗಳೂರಿನಲ್ಲಿ ಗೃಹ ನಿರ್ಮಾಣ ಮಾಡುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ನಗರಾಭಿವೃದ್ಧಿ ಇಲಾಖೆ ಸೆಟ್ ಬ್ಯಾಕ್ ನಿಯಮಗಳನ್ನು ಸಡಿಲಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಸೆಟ್ ಬ್ಯಾಕ್ ಬಿಡದೆ ಸಮಸ್ಯೆ ಎದುರಿಸುತ್ತಿರುವ ಮನೆ ಮಾಲೀಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ಮುಂದೆ ಸೆಟ್​ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jan 06, 2026 | 3:09 PM

Share

ಬೆಂಗಳೂರು, ಜನವರಿ 06: ಗೃಹ ನಿರ್ಮಾಣ ಮಾಡುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸೆಟ್​​ ಬ್ಯಾಕ್ (ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ)​​ ಬಿಡದೆ ಮನೆ ನಿರ್ಮಿಸಲು ಅವಕಾಶ ನೀಡಲಾಗಿದೆ. ಸೆಟ್ ಬ್ಯಾಕ್​​ನಲ್ಲಿ (Setback) ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಮಹತ್ವದ‌ ಆದೇಶ ಹೊರಡಿಸಿದೆ. ಆ ಮೂಲಕ ಸಿಲಿಕಾನ್ ಸಿಟಿಯ (bangaluru) ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ಗಿಫ್ಟ್ ನೀಡಿದೆ. ಇನ್ನು ಸೆಟ್​​ ಬ್ಯಾಕ್​​ ಬಿಡದೆ ಸಮಸ್ಯೆ ಎದುರಿಸುತ್ತಿರುವ ಮನೆ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸೆಟ್ ​ಬ್ಯಾಕ್​ ನಿಯಮಗಳಲ್ಲಿ ಬದಲಾವಣೆ

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೆಟ್ ​ಬ್ಯಾಕ್​ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಮೊದಲು ಮನೆಗಳಿಗೆ 12ಮೀ ವರೆಗೆ ಅಂದರೆ 8 ಅಡಿಯಿಂದ 40 ಅಡಿ ವರೆಗೆ ಸೆಟ್ ಬ್ಯಾಕ್ ಬಿಡುವ ಅವಶ್ಯಕತೆ ಇತ್ತು. ಆದರೆ ಇದೀಗ ಸರ್ಕಾರ ಸೆಟ್​​ ಬ್ಯಾಕ್ ಕಡಿತ ಹಾಗೂ ವಿನಾಯಿತಿ ನೀಡಿದ್ದು, ಕಟ್ಟಡದ ಯಾವುದಾದರೂ ಒಂದು ಬದಿಯಲ್ಲಿ ಸೆಟ್ ಬ್ಯಾಕ್ ಬಿಟ್ಟರೆ ಸಾಕು. ಉಳಿದ ಮೂರು ಕಡೆಗಳಲ್ಲಿ ಯಾವುದೇ ಸೆಟ್ ಬ್ಯಾಕ್ ಬಿಡುವ ಅನಿವಾರ್ಯ ಇಲ್ಲ.

ಯಾವ ಜಾಗಕ್ಕೆ ಎಷ್ಟು ಸೆಟ್ ಬ್ಯಾಕ್ ಬಿಡಬೇಕು?

  • 600 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಕೇವಲ 0.60ಮೀ ಅಂದರೆ 2 ಅಡಿಗೆ ಇಳಿಕೆ ಮಾಡಲಾಗಿದೆ.
  • 600 ಚದರ ಅಡಿ ಇಂದು 1,500 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 0.70ಮೀ, ಅಂದರೆ 2.5 ಅಡಿಗೆ ಇಳಿಕೆ ಮಾಡಲಾಗಿದೆ.
  • 1,500 ಚದರ ಅಡಿ ಇಂದ 2,500 ಚದರ ಅಡಿ ವರೆಗಿನ ಜಾಗದ ಮನೆಗಳಿಗೆ ಎಲ್ಲಾ ಬದಿಯಲ್ಲೂ ಕನಿಷ್ಠ 0.80ಮೀ ಅಂದರೆ 3 ಅಡಿ ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.
  • 2,500 ಚದರ ಅಡಿಯಿಂದ 40 ಸಾವಿರ ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.

ಇದನ್ನೂ ಓದಿ: ಕಟ್ಟಡಗಳ ಸೆಟ್​​ಬ್ಯಾಕ್ ನಿಯಮದಲ್ಲಿ ಬದಲಾವಣೆ: ಹೊಸ ಅಧಿಸೂಚನೆ ಮಾಹಿತಿ ಇಲ್ಲಿದೆ

ಈ ಮೊದಲು 40 ಸಾವಿರ ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 12% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯವಿತ್ತು. ಆದರೆ ಇದೀಗ 4% ನಷ್ಟು ಸೆಟ್ ಬ್ಯಾಕ್ ಏರಿಯಾ ಕಡಿತಗೊಳಿಸಲಾಗಿದೆ. ಇದು ಸದ್ಯಕ್ಕೆ ನಗರಲ್ಲಿರುವ ಎಲ್ಲಾ ಮನೆಗಳು ಮತ್ತು ಕಟ್ಟಡಗಳಿಗೂ ಅನ್ವಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.