ಇನ್ಮುಂದೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಕಡ್ಡಾಯ: ಬಿಬಿಎಂಪಿ
ನಗರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಲು ಹೊಸದಾಗಿ ಅಧಿಸೂಚಿತ ನಿಯಮಗಳನ್ನು ಜಾರಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಈ ನಿಯಮ ಜಾರಿಗೆ ಬಂದರೇ ಎಲ್ಲಾ ತಂಬಾಕು ಮಾರಾಟಗಾರರು ಮಾರಾಟ ಮಾಡಲು ಪ್ರತ್ಯೇಕ ಪರವಾನಗಿಯನ್ನು ಪಡೆಯಬೇಕು.
ಬೆಂಗಳೂರು: ನಗರದಲ್ಲಿ ತಂಬಾಕು ಉತ್ಪನ್ನಗಳ (Tobacco Products) ಮಾರಾಟವನ್ನು ನಿಯಂತ್ರಿಸಲು ಹೊಸದಾಗಿ ಅಧಿಸೂಚಿತ ನಿಯಮಗಳನ್ನು ಜಾರಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಧರಿಸಿದೆ. ಈ ನಿಯಮ ಜಾರಿಗೆ ಬಂದರೇ ಎಲ್ಲಾ ತಂಬಾಕು ಮಾರಾಟಗಾರರು ಮಾರಾಟ ಮಾಡಲು ಪ್ರತ್ಯೇಕ ಪರವಾನಗಿಯನ್ನು ಪಡೆಯಬೇಕು. ಮೇ ಅಂತ್ಯದಿಂದ ಪರವಾನಗಿ ನೀಡಲು ಆರಂಭಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ನಾವು ಮೇ ಅಂತ್ಯದಿಂದ ತಂಬಾಕು ಪರವಾನಗಿ ನೀಡಲು ಪ್ರಾರಂಭಿಸುತ್ತೇವೆ. ನಂತರ ಪರವಾನಗಿ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ದಂಡ ವಿಧಿಸಲಾಗುವುದು ಅಥವಾ ಅವರ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಕೆ.ವಿ.ತ್ರಿಲೋಕಚಂದ್ರ ಹೇಳಿದರು.
ಐದು ವರ್ಷಗಳ ಅವಧಿಗೆ ಪರವಾನಗಿ ಶುಲ್ಕ 500 ರೂ. ಇದೆ. ನಿಯಮ ಉಲ್ಲಂಘಿಸಿದರವರಿಗೆ 5,000 ರೂ ಮತ್ತು ನಂತರ ಹೀಗೆ ಮುಂದುವರೆದರೇ ದಿನಕ್ಕೆ 100 ರೂ. ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರಾಟಗಾರರು ಅಂಗಡಿಯಲ್ಲಿ ಪರವಾನಗಿಯನ್ನು ಕಾಣುವಂತೆ ಹಾಕಬೇಕು ಮತ್ತು ಅಂಗಡಿಯ ಸುತ್ತಲೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು.
ಇದನ್ನೂ ಓದಿ: ಕಾಮಗಾರಿ ಹೆಸರಲ್ಲಿ ಗುಂಡಿ ತೋಡಿ ಮಣ್ಣನ್ನು ಅಲ್ಲೇ ಗುಡ್ಡೆ ಹಾಕುತ್ತಿರುವ ಬಿಬಿಎಂಪಿ, ಧೂಳಿನಿಂದ ಸವಾರರು ಪರದಾಟ
ತಂಬಾಕು ಪರವಾನಗಿಯು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್‌ಗಳ ಭಾಗವಾಗಿದೆ. ಈ ವರ್ಷದ ಆರಂಭದಲ್ಲಿ ಎಲ್ಲಾ ಪುರಸಭೆಯ ಸಂಸ್ಥೆಗಳು ಇದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಮೇ ಅಂತ್ಯದಿಂದ ಇದು ಅನುಷ್ಠಾನಗೊಳ್ಳುತ್ತದೆ. ಈ ಮಧ್ಯೆ, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ತಡೆಗಟ್ಟಲು ಬಿಬಿಎಂಪಿ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿದೆ. ಕಾರ್ಯಪಡೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದು ತ್ರಿಲೋಕಚಂದ್ರ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ