
ಬೆಂಗಳೂರು, ಸೆಪ್ಟೆಂಬರ್ 23: ಪೂರ್ವ ಬೆಂಗಳೂರಿನ ಸಾರಿಗೆ ದಟ್ಟಣೆ ನಿಯಂತ್ರಿಸಲು ಮತ್ತು ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸರು ಪ್ರಮುಖ ತೀರ್ಮಾನ ಒಂದನ್ನು ಕೈಗೊಂಡಿದ್ದಾರೆ. ಅತ್ಯಂತ ಜನನಿಬಿಡ ವರ್ತೂರು-ಗುಂಜೂರು (ರಾಜ್ಯ ಹೆದ್ದಾರಿ-35) ಮಾರ್ಗದಲ್ಲಿ ಶಾಲಾ ವೇಳೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಿಂದೆ ಬೆಳಿಗ್ಗೆ 7 ರಿಂದ 11 ರವರೆಗೆ ಮಾತ್ರ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಸಂಚಾರ ದಟ್ಟಣೆ ವಿಪರೀತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನೂತನ ವೇಳಾಪಟ್ಟಿ ಜಾರಿಗೆ ತಂದಿದ್ದಾರೆ
ಬೆಳಿಗ್ಗೆ 7:00 ರಿಂದ 11:00 ಗಂಟೆಯವರೆಗೆ
ಮಧ್ಯಾಹ್ನ 1:00 ರಿಂದ 3:00 ಗಂಟೆಯವರೆಗೆ
ಸಂಜೆ4:00 ರಿಂದ 9:00 ಗಂಟೆಯವರೆಗೆ
ಈ ಅವಧಿಯಲ್ಲಿ ಯಾವುದೇ ಭಾರಿ ಸರಕು ಸಾಗಣೆ ವಾಹನಗಳು ಅಥವಾ ಟ್ರಕ್‌ಗಳು ವರ್ತೂರು-ಗುಂಜೂರು ಕ್ಯಾರಿಡಾರ್ ಪ್ರವೇಶಿಸುವಂತಿಲ್ಲ. ಈ ವೇಳಾಪಟ್ಟಿಯು ಶಾಲಾ ಬಸ್‌ಗಳ ಸಂಚಾರದ ಸಮಯ ಮತ್ತು ಪೀಕ್ ಹವರ್‌ಗಳನ್ನು ಸಂಪೂರ್ಣವಾಗಿ ಒಳಗೊಳ್ಳುತ್ತದೆ.
ವರ್ತೂರು-ಗುಂಜೂರು ಭಾಗದಲ್ಲಿ ರಸ್ತೆಗಳು ಕಿರಿದಾಗಿದ್ದು, ಹಲವು ಟಿ-ಜಂಕ್ಷನ್‌ಗಳನ್ನು ಹೊಂದಿವೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ನಿರಂತರವಾಗಿ ಭಾರಿ ವಾಹನಗಳ ಓಡಾಟ ಹೆಚ್ಚಿದ್ದು, ಜಂಕ್ಷನ್‌ಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಶಾಲಾ ಮಕ್ಕಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವಂತಾಗಿತ್ತು.
ಇದನ್ನೂ ಓದಿ ಬೆಂಗಳೂರು: 4 ಕಿ.ಮೀ ಸಂಚಾರಕ್ಕೆ ಎರಡೂವರೆ ಗಂಟೆ! ವರ್ತೂರು ಟ್ರಾಫಿಕ್‌ನಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ
ಸಾರ್ವಜನಿಕರು ಹಾಗೂ ಪೋಷಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಪೂರ್ಣಗೊಂಡು ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರುವವರೆಗೆ ಈ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 am, Wed, 23 September 26