ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ಅಪಸ್ವರ: ಏಕೆ? ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2025 | 7:18 PM

ಬೆಂಗಳೂರಿನ 18 ಕಿಮೀ. ಸುರಂಗ ರಸ್ತೆ ಯೋಜನೆಗೆ ಸಂಸದ ಪಿಸಿ ಮೋಹನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆಯ ತಾಂತ್ರಿಕ ದೋಷಗಳು, 3 ತಿಂಗಳ ಕಡಿಮೆ ಅವಧಿ, ಬೆಂಗಳೂರು ಮೊಬಿಲಿಟಿ ಯೋಜನೆಗೆ ವಿರುದ್ಧವಾಗಿರುವುದು ಮತ್ತು ಪಾರದರ್ಶಕತೆಯ ಕೊರತೆಯನ್ನು ಅವರು ಪ್ರಶ್ನಿಸಿದ್ದಾರೆ. ಯೋಜನೆಯನ್ನು ಮರುಪರಿಶೀಲಿಸಲು ಸಲಹೆ ನೀಡಿದ್ದಾರೆ.

ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ಅಪಸ್ವರ: ಏಕೆ? ಇಲ್ಲಿದೆ ಮಾಹಿತಿ
ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ಅಪಸ್ವರ: ಏಕೆ? ಇಲ್ಲಿದೆ ಮಾಹಿತಿ
Follow us on

ಬೆಂಗಳೂರು, ಜನವರಿ 10: ನಗರದಲ್ಲಿ ಟ್ರಾಫಿಕ್​ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್​​ ಬೋರ್ಡ್​ ಜಂಕ್ಷನ್​​ವರೆಗೆ 18 ಕಿಮೀ ಟನಲ್ ರಸ್ತೆಗೆ (tunnel road project) ಬಿಬಿಎಂಪಿ ಮುಂದಾಗಿದೆ. ಆದರೆ ಈ ಬೆಂಗಳೂರಿನ ಟನಲ್ ರಸ್ತೆ ಪ್ರಾಜೆಕ್ಟ್​​ ಬಗ್ಗೆ ಅಪಸ್ವರ ಕೇಳಿಬಂದಿದ್ದು, ಟನಲ್ ರಸ್ತೆ ಯೋಜನೆಯ ನ್ಯೂನ್ಯತೆಗಳ ಬಗ್ಗೆ ಬಿಬಿಎಂಪಿ ಕಮಿಷನರ್​​ಗೆ ಸಂಸದ ಪಿಸಿ ಮೋಹನ್​ ಪತ್ರ ಬರೆದಿದ್ದಾರೆ.

18 ಕಿಮೀ ಟನಲ್ ರಸ್ತೆಗೆ ಸರ್ಕಾರ 8,043 ಕೋಟಿ ರೂ. ಮೀಸಲಿಟ್ಟಿದೆ. ಇತ್ತ ಟನಲ್ ರಸ್ತೆ ಪ್ರಾಜೆಕ್ಟ್​ನ ದೋಷಗಳ ಬಗ್ಗೆ ಪಟ್ಟಿ ಮತ್ತು ಸಮಸ್ಯೆ ಬಗೆಹರಿಸುವುದಕ್ಕೆ ಕೆಲ ಸಲಹೆಗಳನ್ನು ಸಂಸದ ಪಿಸಿ ಮೋಹನ್ ನೀಡಿದ್ದಾರೆ.

ಸಂಸದ ಪಿಸಿ ಮೋಹನ್ ಟ್ವೀಟ್​

ಸಮಸ್ಯೆಗಳ ಪಟ್ಟಿಯೇನು?

  • ತಾಂತ್ರಿಕವಾಗಿ ಹಲವು ರೀತಿಯ ಅಡೆತಡೆಗಳಿವೆ.
  • 3 ತಿಂಗಳು ಮಾತ್ರ ಸಮಯಾವಕಾಶ ಕೊಟ್ಟಿರೋದು ಗುಣಮಟ್ಟದ ಮೇಲೆ ಸಂಶಯ ಮೂಡಿಸುತ್ತಿದೆ.
  • ವಿವರವಾದ ಯೋಜನಾ ವರದಿ (ಡಿಪಿಆರ್) ಕೇವಲ ಮೂರು ತಿಂಗಳಲ್ಲಿ ಪೂರ್ಣಗೊಂಡಿದೆ, ಇದು ಅವಾಸ್ತವಿಕವಾಗಿದೆ. ಒಂದು ಸಮಗ್ರ DPR 12-18 ತಿಂಗಳುಗಳನ್ನು ತೆಗೆದುಕೊಳ್ಳಬೇಕು ಮತ್ತು ಸಂಪೂರ್ಣ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿರಬೇಕು.
  • 30 ಮೀಟರ್ ಆಳದಲ್ಲಿ ಸುರಂಗ ಮಾರ್ಗಕ್ಕಾಗಿ, ಪ್ರತಿ ಕಿಲೋಮೀಟರ್‌ಗೆ 20 ಮಣ್ಣಿನ ಮಾದರಿ ಬೇಕಾಗುತ್ತವೆ. ಇದು 18-ಕಿಮೀ ವಿಸ್ತರಣೆಗೆ ಕನಿಷ್ಠ 400 ಮಾದರಿಗಳಿಗೆ ಸಮನಾಗಿರುತ್ತದೆ. ಯೋಜನೆಯ ಸುರಕ್ಷತೆ ಮತ್ತು ಕಾರ್ಯಸಾಧ್ಯತೆಗೆ ಧಕ್ಕೆ ತರುವಂತಹ ಯಾವುದೇ ತನಿಖೆಗಳು ನಡೆದಿಲ್ಲ.

ಇದನ್ನೂ ಓದಿ: ಕಂದಾಯ ಇಲಾಖೆ ಬಿತ್ತಿ ಪತ್ರದಲ್ಲಿ ಹಸ್ತದ ಚಿಹ್ನೆ: ಜೆಡಿಎಸ್ ಶಾಸಕ ಆಕ್ಷೇಪ..!

  • ಸಾಕಷ್ಟು ಜಿಯೋಟೆಕ್ನಿಕಲ್ ಅಧ್ಯಯನಗಳು ತಪ್ಪಾದ ಟನಲ್ ಬೋರಿಂಗ್ ಮೆಷಿನ್ (TBM) ಆಯ್ಕೆ, ಅನಿರೀಕ್ಷಿತ ನೆಲದ ಪರಿಸ್ಥಿತಿಗಳು ಮತ್ತು ಸುರಂಗ ಕುಸಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಬೆಂಗಳೂರು ಮೆಟ್ರೋ ಹಂತ 1 ರಲ್ಲಿ ಕಂಡುಬರುವಂತೆ, ತಪ್ಪು TBM ಆಯ್ಕೆಯಿಂದಾಗಿ ಸುಮಾರು ಎರಡು ವರ್ಷಗಳ ವಿಳಂಬವನ್ನು ಎದುರಿಸಿತು.
  • ಟನಲ್ ರಸ್ತೆ ಪ್ಲಾನ್ ಬೆಂಗಳೂರು ಮೊಬಿಲಿಟಿ ಪ್ಲಾನ್​​ಗೆ ವಿರುದ್ಧವಾಗಿದೆ.
  • ಪಾಲಿಕೆಯ ಡಿಪಿಆರ್​ನಲ್ಲಿ ಹಲವು ಲೋಪದೋಷ ಪತ್ತೆಯಾಗಿದೆ.
  • ಕಾಪಿ ಪೇಸ್ಟ್ ಮಾಡಿ ಡೇಟಾ ನೀಡಿರೋದು ಹಲವು ಶಂಕೆ ಮೂಡಿಸಿದೆ.

ಸಲಹೆಗಳೇನು?

  • ಟನಲ್ ರಸ್ತೆ ಯೋಜನೆಯನ್ನ ಮರುಪರಿಶೀಲಿಸಿ
  • ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿರೋ ಮಾರ್ಗಗಳ ಪ್ರಾಮುಖ್ಯತೆ ಪರಿಶೀಲಿಸಿ
  • ಪಾರದರ್ಶಕತ್ವ, ಗುಣಮಟ್ಟ ಇರುವಂತೆ ಎಚ್ಚರಿಕೆವಹಿಸಿ
  • ಸಾರ್ವಜನಿಕರನ್ನ ಗಮನದಲ್ಲಿಟ್ಟುಕೊಂಡು ಯೋಜನೆ ಬಗ್ಗೆ ಚಿಂತಿಸಿ
  • ಜನರಿಗೆ ಏನು ಬೇಕು ಅನ್ನೋದರ ಬಗ್ಗೆ ಗಮನಹರಿಸಿ ಪ್ಲಾನ್ ಮಾಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.