ಕಂದಾಯ ಇಲಾಖೆ ಬಿತ್ತಿ ಪತ್ರದಲ್ಲಿ ಹಸ್ತದ ಚಿಹ್ನೆ: ಜೆಡಿಎಸ್ ಶಾಸಕ ಆಕ್ಷೇಪ..!
ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಕಂದಾಯ ಇಲಾಖೆಯ ಬಿತ್ತಿ ಪತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಹಸ್ತ ಚಿಹ್ನೆಯನ್ನು ಬಳಸಿರುವುದನ್ನು ವಿರೋಧಿಸಿದ್ದಾರೆ. ಈ ಚಿಹ್ನೆಯು ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಬಳಸಲ್ಪಟ್ಟಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಈ ಚಿಹ್ನೆಯನ್ನು ತೆಗೆದುಹಾಕಿ ಬೇರೆ ಲೋಗೋವನ್ನು ಬಳಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಯಾದಗಿರಿ, ಜನವರಿ 10: ಕಂದಾಯ ಇಲಾಖೆಯ ಡಿಜಿಟಿಲೀಕರಣ ಬಿತ್ತಿ ಪತ್ರದಲ್ಲಿ ಕಾಂಗ್ರೆಸ್ (Congress) ಹಸ್ತದ ಚಿಹ್ನೆ ಬಳಕೆಗೆ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿತ್ತಿಪತ್ರದಲ್ಲಿರುವ ಹಸ್ತದ ಚಿಹ್ನೆ ರದ್ದುಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕಂದಾಯ ಇಲಾಖೆಯ ಬಿತ್ತಿ ಪತ್ರಗಳಲ್ಲಿ ಕಾಂಗ್ರೆಸ್ನ ಹಸ್ತದ ಚಿಹ್ನೆಯಿದೆ. ಸದರಿ ಚಿಹ್ನೆ ಬೆರಳುಗಳ ಮೇಲೆ 5 ಸೌಲಭ್ಯಗಳನ್ನು ನಮೂದಿಸಲಾಗಿದೆ. ಇದು ಒಂದು ಪಕ್ಷಕ್ಕೆ ಸೀಮಿತವಾದ ಪ್ರಚಾರ ಪತ್ರ ಎಂಬಂತೆ ಕಂಡುಬರುತ್ತೆ. ಇದು ಜನರಲ್ಲಿ ಒಂದು ಪಕ್ಷದ ಪ್ರಚಾರವೆಂಬಂತೆ ಭಾಸವಾಗುತ್ತೆ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳು ಸಪ್ಲೈ: ಬೇಟೆಯಾಡುತ್ತಿದ್ದ ಮೂವರ ಬಂಧನ
ಸರ್ಕಾರದ ಕಾರ್ಯಕ್ರಮ ಒಂದು ಪಕ್ಷಕ್ಕೆ ಸೀಮಿತವಾಗಬಾರದು. ಹೀಗಾಗಿ ಇಲಾಖೆಯ ಬಿತ್ತಿ ಪತ್ರಗಳಲ್ಲಿ ಬೇರೆ ಲೋಗೋ ಬಳಸಿ. ಈಗ ಇರುವ ಹಸ್ತದ ಗುರುತಿನ ಚಿಹ್ನೆ ರದ್ದು ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕ ಶರಣಗೌಡ ಮನವಿ ಮಾಡಿದ್ದಾರೆ.
ಶಾಸಕ ಶರಣಗೌಡ ಬರೆದ ಪತ್ರದಲ್ಲೇನಿದೆ?
ನಾನು ಜನವರಿ 09 ರಂದು ಗುರುಮಠಕಲ್ ತಹಸೀಲ್ ಕಾರ್ಯಾಲಯದಲ್ಲಿ ಜರುಗುತ್ತಿರುವ ಕಂದಾಯ ಇಲಾಖೆಗಳ ದಾಖಲೆಗಳನ್ನು ಡಿಜಿಟಿಲೀಕರಣ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದಾಗ, ಸರ್ಕಾರದ ಬಿತ್ತಿ ಪತ್ರಗಳಲ್ಲಿ ಹಸ್ತ ಚಿಹ್ನೆ ಇದ್ದು, ಸದರಿ ಹಸ್ತ ಚಿಹ್ನದ ಬೆರಳುಗಳ ಮೇಲೆ 5 ಸೌಲಭ್ಯಗಳನ್ನು ನಮೂದಿಸಿರುವುದರಿಂದ ಇದು ಒಂದು ಪಕ್ಷಕ್ಕೆ ಸೀಮಿತವಾದ ಪ್ರಚಾರ ಪತ್ರ ಎಂದು ಕಂಡುಬಂದಿದೆ.
ಇದು ಜನ ಸಾಮಾನ್ಯರಲ್ಲಿ ಪಕ್ಷದ ಪ್ರಚಾರವೆಂದು ಬಾಸವಾಗುತ್ತದೆ. ಇದಕ್ಕೆ ನನ್ನ ಆಕ್ಷೇಪಣೆ ಇದೆ. ಯಾವುದೇ ಸರ್ಕಾರದ ಕಾರ್ಯಕ್ರಮಗಳು ಒಂದು ಪಕ್ಷಕ್ಕೆ ಸೀಮಿತವಾಗಬಾರದು ಕಾರ್ಯಕ್ರಮಗಳಾಗಿರುಬೇಕು. ಆದರೆ ಜನಸಾಮಾನ್ಯರಿಗೆ ಉಪಯೋಗವಾಗುವಂತ ಕಾರ್ಯಕ್ರಮಗಳಾಗಿರಬೇಕು.
ಇದನ್ನೂ ಓದಿ: ಐದು ವರ್ಷದ ಈ ಪುಟ್ಟ ಪೋರನಿಗೆ ಎಲ್ಲಿಲ್ಲದ ಟ್ಯಾಲೆಂಟ್: ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ
ಆದಕಾರಣ ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಿಲೀಕರಣ ಕಾರ್ಯಕ್ರಮದ ಪ್ರಚಾರ ಪತ್ರಗಳಲ್ಲಿ (ಬಿತ್ತಿ ಪತ್ರಗಳಲ್ಲಿ) ಬೇರೆ ತರಹದ ಲೋಗೋವನ್ನು ಉಪಯೋಗಿಸಿ, ಈಗ ಇರುವ ಹಸ್ತ ಗುರುತಿನ ಚಿಹ್ನೆಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.