ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ

ಬೆಂಗಳೂರಿನ ಯುಬಿ ಸಿಟಿಯ ಐದು ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಭಾನುವಾರ ರಾತ್ರಿ ದಾಳಿ ನಡೆಸಿದ್ದಾರೆ. 45 ಕೆಜಿ ಕೊಳೆತ ಮಾಂಸ, 15 ಲೀಟರ್ ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಅವಧಿ ಮೀರಿದ ಹಲವು ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.

ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ
ಯುಬಿ ಸಿಟಿ ಹೋಟೆಲ್‌ಗಳ ಮೇಲೆ ದಾಳಿ
Image Credit source: tv9
Edited By:

Updated on: Aug 10, 2026 | 12:36 PM

ಮುಖ್ಯಾಂಶಗಳು

  • ಯುಬಿ ಸಿಟಿಯ ಐದು ಹೋಟೆಲ್‌ಗಳ ಮೇಲೆ ದಾಳಿ
  • 45 ಕೆಜಿ ಕೊಳೆತ ಮಾಂಸ ಪತ್ತೆ
  • 15 ಲೀಟರ್ ಕರಿದ ಎಣ್ಣೆ ಜಪ್ತಿ

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ (Bengaluru) ಪ್ರತಿಷ್ಠಿತ ಯುಬಿ ಸಿಟಿಯಲ್ಲಿರುವ ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹೋಟೆಲ್‌ಗಳ ಅಡುಗೆಮನೆಗಳಲ್ಲಿನ ಅವ್ಯವಸ್ಥೆ ಬಯಲಾಗಿದೆ. ಐದು ಹೋಟೆಲ್‌ಗಳ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

45 ಕೆಜಿ ಕೊಳೆತ ಮಾಂಸ, 15 ಲೀಟರ್ ಕರಿದ ಅಡುಗೆ ಎಣ್ಣೆ ಪತ್ತೆ

Food Dept Raids Hotels In B'luru: ಪೆಗ್ & ಬಾಟಲ್ಸ್ ಪಬ್ ಮೇಲೂ ಆಹಾರ ಇಲಾಖೆ ರೇಡ್ ಮಶ್ರೂಮ್​ನಲ್ಲಿ ಫಂಗಸ್
ಬೆಂಗಳೂರಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ರಾತ್ರಿ ಯುಬಿ ಸಿಟಿಯಲ್ಲಿರುವ ಐದು ಹೋಟೆಲ್‌ಗಳ ಮೇಲೆ ಸುಮಾರು 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸ್ಕೈ ಹೋಟೆಲ್, ರಾಯಲ್ ಚೈನ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್ ಹಾಗೂ ಸೆಂಚೆಜ್ ಹೋಟೆಲ್‌ಗಳ ಅಡುಗೆಮನೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ 45 ಕೆ.ಜಿ. ಕೊಳೆತ ಕೋಳಿ ಮತ್ತು ದನದ ಮಾಂಸ, 15 ಲೀಟರ್ ಬಳಸಿದ ಅಡುಗೆ ಎಣ್ಣೆ ಹಾಗೂ 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್ ಸೇರಿದಂತೆ ಒಟ್ಟು 51 ಕೆ.ಜಿ. ಆಹಾರ ಪದಾರ್ಥಗಳನ್ನು ಸ್ಕೈ ಹೋಟೆಲ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಕೊಳೆತ ಮಾಂಸ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ನ ಅಡುಗೆಮನೆಗೆ ಅಧಿಕಾರಿಗಳು ಬೀಗ ಹಾಕಿ ಸೀಲ್ ಮಾಡಿದ್ದಾರೆ.

ರಾಯಲ್ ಚೈನ್ ಹೋಟೆಲ್​ನಲ್ಲಿ ಏನೇನು ಸಿಕ್ತು?

ಇನ್ನು ಯುಬಿ ಸಿಟಿಯ ರಾಯಲ್ ಚೈನ್ ಹೋಟೆಲ್‌ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಕ್ಕಿರುವ ಕಳಪೆ ಆಹಾರ ವಸ್ತುಗಳ ಮಾಹಿತಿ ಹೀಗಿದೆ;

  • 50 ಕೆ.ಜಿ. ಬಾತುಕೋಳಿ ಮಾಂಸ
  • 5 ಕೆ.ಜಿ. ಮೀನು ಸೇರಿದಂತೆ
  • ಒಟ್ಟು 55 ಕೆ.ಜಿ. ಮಾಂಸ ವಶಕ್ಕೆ

ಇತರ ಹೋಟೆಲ್​​ಗಳಲ್ಲಿ ಏನೇನು ಸಿಕ್ತು?

  • ಮದ್ರಾಸ್ ಕಿಚನ್​ನಲ್ಲಿ 5 ಕೆ.ಜಿ. ಹಸಿ ಬಟಾಣಿ
  • ಟೆಸ್ಕಾನ್ ಹೋಟೆಲ್‌ನಲ್ಲಿ 5 ಕೆ.ಜಿ. ಅಣಬೆ ವಶಕ್ಕೆ
  • ಸೆಂಚೆಜ್ ಹೋಟೆಲ್‌ನಲ್ಲಿ 3 ಕೆ.ಜಿ. ಮೀನು, 7 ಕೆ.ಜಿ. ಕೇಕ್, ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಜಪ್ತಿ

ವಶಪಡಿಸಿಕೊಂಡ ಕಳಪೆ ಆಹಾರದ ಒಟ್ಟು ಪ್ರಮಾಣ


  • ವಶಪಡಿಸಿಕೊಂಡ/ವಿಲೇವಾರಿ ಮಾಡಿದ ಒಟ್ಟು ಆಹಾರ ಪದಾರ್ಥಗಳು: 132 ಕೆಜಿ
  • ಬಳಸಿದ ಅಡುಗೆ ಎಣ್ಣೆ: 15 ಲೀಟರ್
  • ಆಹಾರ ಪದಾರ್ಥಗಳ ಒಟ್ಟು ಪ್ರಮಾಣ: 132 ಕೆಜಿ

ಶೀತಲೀಕರಣ ಮಾಡದೇ ಮಾಂಸ ಸಂಗ್ರಹ

ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಸುತ್ತಮುತ್ತ ನಡೆದ ಪರಿಶೀಲನೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಚಿಕನ್, ಮಟನ್ ಹಾಗೂ ಮೀನುಗಳನ್ನು ಸರಿಯಾದ ರೀತಿಯಲ್ಲಿ ಶೀತಲೀಕರಣ ಮಾಡದೇ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಆಯುಕ್ತರ ಮಾತಿನ ವಿಡಿಯೋ
Food Department Raid: ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ| #TV9D

ಹೋಟೆಲ್​ಗಳ ವಿರುದ್ಧ ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಸಿದ್ಧತೆ

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿರುವ ಹೋಟೆಲ್‌ಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆಗಳಲ್ಲೇ ಇಂತಹ ಅಕ್ರಮಗಳು ಪತ್ತೆಯಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 am, Mon, 10 August 26

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us