ನಂಬಿದ್ದ ಗೆಳೆಯನಿಂದ ಮೋಸ: ಬೆಂಗಳೂರು ವಿವಿ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ನೇಣಿಗೆ ಶರಣು
ಬೆಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ನಿವಾಸಿ. ಡೆತ್ನೋಟ್ನಲ್ಲಿ ಗೆಳೆಯನೊಬ್ಬ ಮೋಸ ಮಾಡಿರುವುದಾಗಿ ಬರೆದುಕೊಂಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಫೆಬ್ರವರಿ 03: ನಂಬಿದ ಗೆಳೆಯನೊಬ್ಬ ಮೋಸ ಮಾಡಿದನೆಂದು ಬೆಂಗಳೂರು ವಿಶ್ವವಿದ್ಯಾಲಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ (death) ಶರಣಾಗಿರುವಂತಹ ಘಟನೆ ನಡೆದಿದೆ. ಕನ್ನಡ ವಿಭಾಗದ ದ್ವಿತೀಯ ವರ್ಷದ ಎಂಎ ಓದುತ್ತಿದ್ದ ಹೆಚ್.ಎನ್.ಪಾವನ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತ ಹೆಚ್.ಎನ್.ಪಾವನ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ನಿವಾಸಿ. ನಾನು ಗೆಳೆಯನೊಬ್ಬನನ್ನು ನಂಬಿದ್ದೆ, ಆತನಿಂದ ಮೋಸವಾಗಿದೆ. ಕ್ಷಮಿಸಿ ಅಪ್ಪ, ಅಮ್ಮ.. ಐ ಲವ್ ಯೂ ಎಂದು ಡೆತ್ನೋಟ್ ಬರೆದಿಡಲಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ವಿದ್ಯಾರ್ಥಿನಿ ಪಾವನ ಶವ ಶಿಫ್ಟ್ ಮಾಡಲಾಗಿದ್ದು, ಪೋಷಕರು ಬೆಂಗಳೂರಿಗೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಮಂಡ್ಯದಲ್ಲೊಂದು ಪೈಶಾಚಿಕ ಕೃತ್ಯ: 8 ವರ್ಷದ ಬಾಲಕಿ ಮೇಲೆ ಹಾಡಹಗಲೇ ಮೂವರಿಂದ ಗ್ಯಾಂಗ್ರೇಪ್
ಕಾರ್ಯಕ್ರಮಕ್ಕೆ ತೆರಳಿದ್ದ ಪಾವನ ಅರ್ಧಕ್ಕೆ ಬಿಟ್ಟು ಬಂದು ಹಾಸ್ಟೆಲ್ನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಹಾಸ್ಟೆಲ್‌ನಲ್ಲಿದ್ದ ಕೆಲ ಯುವತಿಯರು ಗಮನಿಸಿ ಮಾಹಿತಿ ನೀಡಿದ ಬಳಿಕ ಘಟನೆ ಗೊತ್ತಾಗಿದೆ.
ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ
ಬೆಂಗಳೂರು ನಗರ ಹೊರವಲಯದಲ್ಲಿ ಪುಂಡನಿಂದ ಕಿರಿಕ್ ಮಾಡಲಾಗಿದೆ. ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ರಾತ್ರಿ ಘಟನೆ ನಡೆದಿದೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು: ಓರ್ವ ಸಾವು, ಓರ್ವನ ರಕ್ಷಣೆ, ಇಬ್ಬರು ನಾಪತ್ತೆ
ಕುಡಿದ ನಶೆಯಲ್ಲಿ ನಿಂದಿಸಿ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಕುಡಿದು ಬಂದು ಆನಂದ್ ಎಂಬುವನಿಂದ ಆವಾಜ್ ಹಾಕಲಾಗಿದ್ದು, ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಬೇಕರಿ ಮುಂದೆ ನಿಂತು ಧಮ್ಕಿ ಹಾಕಿದ್ದಾನೆ. ಬೇಕರಿಯಲ್ಲಿರುವ ವಸ್ತುಗಳನ್ನು ಬಿಸಾಡಿ ದಾಂದಲೆ ಮಾಡಿದ್ದಾನೆ. ಅಂಗಡಿಯನ್ನು ಮುಚ್ಚಿಸುತ್ತೇನೆ ಎಂದು ಆವಾಜ್ ಹಾಕಿದ್ದ ಆನಂದ್ ವಿರುದ್ಧ ಮಾದನಾಯಕನಹಳ್ಳಿ ಠಾಣೆಗೆ ಬೇಕರಿ ಸಿಬ್ಬಂದಿ ದೂರು ನೀಡಿದ್ದಾರೆ.
ನಿರ್ಮಾಣ ಹಂತದ ಕಟ್ಟಡದ ಸಂಪ್ನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ
ನಿರ್ಮಾಣ ಹಂತದ ಕಟ್ಟಡದ ಸಂಪ್ನಲ್ಲಿ 35 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆ ಆಗಿರುವಂತಹ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೈಯಲ್ಲಿ ಚಂದ್ರಮ್ಮ ಹಚ್ಚೆ ಗುರುತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಯುವಕನ ಪುಂಡಾಟ: ಕೊಲೆ ಬೆದರಿಕೆ
ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಮನೆ ಮುಂದೆ ಯುವಕನ ಪುಂಡಾಟ ಮಾಡಿದ್ದು, ಯುವತಿ ಪೋಷಕರಿಗೆ ಕೊಲೆ ಬೆದರಿಕೆ ಹಾಕಿ ಹಲ್ಲೆ ಆರೋಪ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ವೆಂಕಟೇಶ್ವರ ನಗರದಲ್ಲಿ ನಡೆದಿದೆ. ಯುವತಿ ತಂದೆ ಹಾಗೂ ಪಾಗಲ್ ಪ್ರೇಮಿ ಗಲಾಟೆ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:23 pm, Mon, 3 February 25