
ಬೆಂಗಳೂರು, ಜೂನ್ 25: ಬೆಂಗಳೂರಿನ (Bengaluru) ಸಾರ್ವಜನಿಕರಿಗೆ ಹಾಗೂ ಗೃಹಿಣಿಯರಿಗೆ ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ಸಿಹಿ ಹಾಗೂ ಕಹಿ ಸುದ್ದಿ ಎದುರಾಗಿದೆ. ರಾಜ್ಯದಲ್ಲಿ ಎದುರಾಗಿರುವ ಅನಾವೃಷ್ಟಿ ಮತ್ತು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿನ ಹವಾಮಾನ ಏರಿಳಿತದ ನೇರ ಎಫೆಕ್ಟ್ ತರಕಾರಿ ಮಾರುಕಟ್ಟೆಯ ಮೇಲೆ ಬೀರಿದೆ. ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಹೋಲ್‌ಸೇಲ್ ಬಜಾರ್‌ಗಳಲ್ಲೇ ತರಕಾರಿ ಮತ್ತು ಸೊಪ್ಪುಗಳ ದರ ಸೆಂಚುರಿ ಬಾರಿಸಿದ್ದು, ನಿತ್ಯದ ಅಡುಗೆಗೆ ತರಕಾರಿ ಕೊಳ್ಳಲು ಜನಸಾಮಾನ್ಯರು ಪರದಾಡುವಂತಾಗಿದೆ.
ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಮುಖ ತರಕಾರಿಗಳ ದರ ವಿವರ ಹೀಗಿದೆ;
ಇಷ್ಟೆಲ್ಲಾ ತರಕಾರಿಗಳ ಬೆಲೆ ಏರಿಕೆಯ ನಡುವೆ ಸಮಾಧಾನಕರ ಸಂಗತಿಯೆಂದರೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಟೊಮೆಟೊ ದರ 10 ರಿಂದ 15 ರೂಪಾಯಿ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 15-20 ರೂಪಾಯಿಗೆ ಸಿಗುತ್ತಿದೆ. ಹಾಗೆಯೇ ಈರುಳ್ಳಿ ಕೂಡ ಕೆಜಿಗೆ 20 ರಿಂದ 25 ರೂಪಾಯಿಗೆ ಲಭ್ಯವಿದೆ. ಇತ್ತ ತರಕಾರಿ ಬೆಲೆ ಏರಿಕೆಯ ಬೆನ್ನಲ್ಲೇ ಈ ಹಿಂದೆ 6.50 ರೂಪಾಯಿ ಇದ್ದ ಒಂದು ಕೋಳಿ ಮೊಟ್ಟೆಯ ಬೆಲೆ ಈಗ ದಿಢೀರನೆ 8 ರೂಪಾಯಿಗೆ ಏರಿಕೆಯಾಗಿದೆ.
ಕಳೆದ ಕೆಲವು ವಾರಗಳಿಂದ ದೇಶದ ವಿವಿಧೆಡೆ ಕೆಲವೆಡೆ ಅತಿವೃಷ್ಟಿಯಾಗಿ ಬೆಳೆ ಕೊಳೆತಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗಿ ನಿಂತಿವೆ. ಬಿಳಿ ಬದನೆಕಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ 100ರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ತರಕಾರಿ ದರ ದುಬಾರಿಯಾದ ಹಿನ್ನೆಲೆಯಲ್ಲಿ ಈ ಹಿಂದೆ ಕೆಜಿಗಟ್ಟಲೆ ಕೊಳ್ಳುತ್ತಿದ್ದ ಗ್ರಾಹಕರು ಈಗ ಕಾಲು ಕೆಜಿ, ಅರ್ಧ ಕೆಜಿಗೆ ಸೀಮಿತವಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಹವಾಮಾನ ವೈಪರೀತ್ಯದ ಈ ಆಟ ಸಿಲಿಕಾನ್ ಸಿಟಿಯ ಜನಸಾಮಾನ್ಯರ ಮಾಸಿಕ ಬಜೆಟ್‌ಅನ್ನು ಸಂಪೂರ್ಣವಾಗಿ ಏರುಪೇರು ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ