AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್​ ಕಾಮಗಾರಿ​; ಇಂದಿನಿಂದ 5 ದಿನ ವಾಹನ ಸಂಚಾರ ನಿರ್ಬಂಧ!

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಅತಿಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಜೆ.ಸಿ ರಸ್ತೆ ಕೂಡ ಒಂದು. ಆದರೆ ಕಳೆದ ಕೆಲ ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸವಾರರು ಹೈರಾಣಾಗಿದ್ದಾರೆ. ಇದೀಗ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. ಹೀಗಾಗಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗಾದರೆ ಪರ್ಯಾಯ ಮಾರ್ಗಗಳು ಯಾವವು ತಿಳಿಯಿರಿ.

ಬೆಂಗಳೂರು: ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್​ ಕಾಮಗಾರಿ​; ಇಂದಿನಿಂದ 5 ದಿನ ವಾಹನ ಸಂಚಾರ ನಿರ್ಬಂಧ!
J C Road
ಗಂಗಾಧರ​ ಬ. ಸಾಬೋಜಿ
|

Updated on:Aug 25, 2025 | 9:41 AM

Share

ಬೆಂಗಳೂರು, ಆಗಸ್ಟ್​ 25: ಸಿಲಿಕಾನ್​ ಸಿಟಿಯ ಹೃದಯ ಭಾಗದಲ್ಲಿರುವ ಜೆ.ಸಿ ರಸ್ತೆಯಲ್ಲಿ (J C road) ಕಳೆದ ಕೆಲ ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಇದೀಗ ಜೆ.ಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ (White tapping work) ನಡೆಯುತ್ತಿದ್ದು, ಇಂದಿನಿಂದ (ಆ. 25) ಆಗಸ್ಟ್​ 30ರ ವರೆಗೆ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್​ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಈ ಕುರಿತಾಗಿ ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.  ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಜೆ.ಸಿ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್​ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಜೊತೆಗೆ ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದೆ.

ಬೆಂಗಳೂರು ಪಶ್ಚಿಮ ವಲಯ ಸಂಚಾರಿ ಪೊಲೀಸರು ಟ್ವೀಟ್

ಯಾವೆಲ್ಲಾ ವಾಹನ ಸಂಚಾರ ನಿರ್ಬಂಧ 

  • ಜೆಸಿ ರಸ್ತೆ, ಮಿನರ್ವಾ ಸರ್ಕಲ್​ ಕಡೆಗೆ ಭಾರಿ ಗಾತ್ರದ ವಾಹನಗಳು ಸೇರಿದಂತೆ ಬಸ್‌ಗಳಿಗೆ ಅವಕಾಶವಿಲ್ಲ.

ಪರ್ಯಾಯ ಮಾರ್ಗಗಳು ಹೀಗಿವೆ

  • ರಾಮ ಕೃಷ್ಣ ಆಶ್ರಮ, ಬುಲ್ ಟೆಂಪಲ್ ರಸ್ತೆ, ಚಾಮರಾಜ ಪೇಟೆ, ಗೂಡ್ ಶೆಡ್ ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್​​ ಕಡೆಗೆ ಸಂಚರಿಸುವುದು.
  • ಕಲಾಸಿಪಾಳ್ಯ ಬಸ್​ ನಿಲ್ದಾಣದಿಂದ ಕೆ ಆರ್ ರಸ್ತೆ, ಲಾಲ್ ಬಾಗ್ ವೆಸ್ಟ್ ಗೇಟ್, ಅಶೋಕ ಪಿಲ್ಲ,ರ್ ಸಿದ್ಧಾರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ಸೇರುವುದು.
  • ಹೊಸೂರು ರಸ್ತೆಯಿಂದ ಡಬಲ್ ರಸ್ತೆ ರಿಚ್ಮಂಡ್​ ಸರ್ಕಲ್, ಹಡ್ನನ್ ಸರ್ಕಲ್, ಕೆ.ಜಿ. ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್​​ ಕಡೆಗೆ ಸಂಚರಿಸಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಳಂಬ ಕಾಮಗಾರಿಗಳಿಂದ ಅವಾಂತರ: ಸರ್ಕಾರಕ್ಕೆ ಹೋಟೆಲ್ ಉದ್ಯಮಿಗಳಿಂದ ಪತ್ರ, 50% ತೆರಿಗೆ ವಿನಾಯಿತಿಗೆ ಆಗ್ರಹ

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಜೆ.ಸಿ ರಸ್ತೆಯಲ್ಲಿ ಅತಿಹೆಚ್ಚು ವಾಹನಗಳ ಸಂಚಾರದಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸದ್ಯ ರಸ್ತೆಯ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಆಮೆಗತಿಯ ಈ ಕಾಮಗಾರಿಯನ್ನು ವೇಗವಾಗಿ ಮಾಡುವಂತೆ ಬಿಬಿಎಂಪಿಗೆ ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:24 am, Mon, 25 August 25