BESCOM Power Cut: ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಒಂದು ವಾರ ಪವರ್ ಕಟ್, ಇಲ್ಲಿದೆ ವಿವರ
ಬೆಸ್ಕಾಂ ಪವರ್ ಕಟ್: ನಿರ್ಮಾಣ ಕಾಮಗಾರಿಯ ಕಾರಣ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಒಂದು ವಾರದ ಮಟ್ಟಿಗೆ ವಿದ್ಯುತ್ ಕಡಿತ ಇರಲಿದೆ. ಯಾವ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ? ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಜೂನ್ 23: ‘ಅಟಲ್ ಭೂಜಲ್ ಯೋಜನೆ (Atal Bhujal Yojana)’ ನಿರ್ಮಾಣ ಕಾಮಗಾರಿಯ ಕಾರಣ ಬೆಸ್ಕಾಂ (BESCOM) ಉಪ-ವಿಭಾಗ 1 ರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Power interruption) ಎಂದು ಸಂಸ್ಥೆ ಮಾಹಿತಿ ನೀಡಿದೆ. ವಿದ್ಯುತ್ ಕಡಿತವಾಗಲಿರುವ ಪ್ರದೇಶಗಳು ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತವೆ. ಇಂದಿನಿಂದ, ಅಂದರೆ ಜೂನ್ 23 ರಿಂದ 30 ರ ವರೆಗೆ ಪವರ್ ಕಟ್ ಇರಲಿದೆ.
ಯಾವೆಲ್ಲ ಪ್ರದೇಶಗಳಲ್ಲಿ ಪವರ್ ಕಟ್?
ಹನುಮಂತಪುರ, ಅನ್ನತೋಟ, ಜಗನ್ನಾಥಪುರ, ನಿರ್ವಾಣಿ ಲೇಔಟ್, ಅಗ್ನಿಬನ್-ನಿರಾಯ ನಗರ, ಬಾಗುಡಿಪಾಳ್ಯ, ಅಂಬೇಡ್ಕರ್ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಜೂನ್ 23 ರಿಂದ 30 ರ ವರೆಗೆ ಪವರ್ ಕಟ್ ಇರಲಿದೆ.
ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ಪವರ್ ಕಟ್?
ಮೇಲೆ ತಿಳಿಸಲಾದ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸೂರ್ಯ ಘರ್ ಯೋಜನೆಗೆ ಪ್ರೋತ್ಸಾಹ
ಕೇಂದ್ರ ಸರ್ಕಾರದ ಸೂರ್ಯಘರ್ ಯೋಜನೆಯ ಮೂಲಕ ಮನೆ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸುವ ಸಂಬಂಧ ಬೆಸ್ಕಾಂ ಕೂಡ ನಿರಂತರ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅದರಂತೆ, ಹೆಚ್ಚಿನ ಮಾಹಿತಿಗೆ https://pmsuryaghar.gov.in ಈ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ‘ಎಕ್ಸ್’ ಹ್ಯಾಂಡಲ್ ಸಂದೇಶದ ಮೂಲಕ ಮನವಿ ಮಾಡಿದೆ. ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡುವಂತೆಯೂ ಸಲಹೆ ನೀಡಿದೆ.
ಬೆಸ್ಕಾಂ ಎಕ್ಸ್ ಸಂದೇಶ
ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ
ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://t.co/iALIML395s ನೋಂದಾಯಿಸಿಕೊಳ್ಳಿ ಹಾಗೂ
ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಿ.#Bescom #SuryagharScheme… pic.twitter.com/sw8NK9ZkZl
— Namma BESCOM | ನಮ್ಮ ಬೆಸ್ಕಾಂ (@NammaBESCOM) June 23, 2025
ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯುವಂತೆ ಗ್ರಾಹಕರಲ್ಲಿ ಬೆಸ್ಕಾಂ ಮನವಿ ಮಾಡಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ: ಪರ್ಯಾಯ ಬಸ್ನಿಂದ ಉಂಟಾದ ಅಪಘಾತಕ್ಕೆ ವಿಮಾ ಕಂಪನಿಯೇ ಪರಿಹಾರ ನೀಡಬೇಕೆಂದು: ಕೋರ್ಟ್
ಜೂನ್ 21ರ ಶನಿವಾರ ಮತ್ತು ಜೂನ್ 22 ರ ಭಾನುವಾರ ಬೆಂಗಳೂರಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ನಿರ್ಮಾಣ ಕಾಮಗಾರಿಯ ಕಾರಣ ತುಮಕೂರು ವ್ಯಾಪ್ತಿಯಲ್ಲಿ ಕಡಿತ ಮಾಡಲಾಗುತ್ತಿದೆ.