ಮೇಲ್ಮನೆಗೆ ಚುನಾವಣೆ: ಗೋ. ಮಧುಸೂಧನ್​ಗೆ ತಪ್ಪಿದ ಟಿಕೆಟ್; ಹೊರಟ್ಟಿ ಬಿಜೆಪಿ ಸೇರ್ಪಡೆ ಸಾಧ್ಯತೆ ಅಭ್ಯರ್ಥಿ ಘೋಷಣೆ ಪೆಂಡಿಂಗ್

Biennial Election to Karnataka State Legislative Council: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ನಾಲ್ಕು ಕ್ಷೇತ್ರಗಳ ಪೈಕಿ 3ಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ.

ಮೇಲ್ಮನೆಗೆ ಚುನಾವಣೆ: ಗೋ. ಮಧುಸೂಧನ್​ಗೆ ತಪ್ಪಿದ ಟಿಕೆಟ್; ಹೊರಟ್ಟಿ ಬಿಜೆಪಿ ಸೇರ್ಪಡೆ ಸಾಧ್ಯತೆ ಅಭ್ಯರ್ಥಿ ಘೋಷಣೆ ಪೆಂಡಿಂಗ್
ಬಿಜೆಪಿ
TV9kannada Web Team

| Edited By: sadhu srinath

Mar 12, 2022 | 8:24 PM

ಬೆಂಗಳೂರು: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ನಾಲ್ಕು ಕ್ಷೇತ್ರಗಳ ಪೈಕಿ 3ಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಆದರೆ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಅಥವಾ ಬೆಂಬಲ ವಿಚಾರ ಪೆಂಡಿಂಗ್​ ಇರುವುದರಿಂದ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯನ್ನೂ ಬಿಜೆಪಿ ಪೆಂಡಿಂಗ್ ನಲ್ಲಿಟ್ಟಿದೆ. ಗಮನಾರ್ಹವೆಂದರೆ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಾಜಿ ಎಂಎಲ್​ಸಿ ಗೋ. ಮಧುಸೂಧನ್ ಗೆ ಟಿಕೆಟ್ ಕೈತಪ್ಪಿದೆ.

ಮೈಸೂರು ವರದಿ: ಪರಿಷತ್ ಪದವೀಧರ ಮತ್ತು ಶಿಕ್ಷಕರ ವಲಯದಿಂದ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಉಮೇದುವಾರಿಕೆಗೆ ಈಗಾಗಲೇ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಮಾದೇಗೌಡ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಕೆ.ರಾಮು ಕಣಕ್ಕೆ ಇಳಿಯಲಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಪ್ರಬಲ ಆಕಾಂಕ್ಷಿ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಅಥವಾ ಬೆಂಬಲ ವಿಚಾರ ಇನ್ನೂ ಬಗೆಹರಿಯದ ಕಾರಣ ಅಭ್ಯರ್ಥಿ ಘೋಷಣೆ ಕಾಯ್ದಿರಿಸಲಾಗಿದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಮತ್ತು ಮಾಜಿ ಎಂಎಲ್ಸಿ ಮೋಹನ್ ಲಿಂಬಿಕಾಯಿ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿ‌ನ್ನೆಲೆ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಹೆಸರು ಹೀಗಿವೆ: 1. ವಾಯುವ್ಯ ಶಿಕ್ಷಕರ ಕ್ಷೇತ್ರ -ಅರುಣ್ ಶಹಾಪುರ್ 2. ವಾಯವ್ಯ ಪದವೀಧರ ಕ್ಷೇತ್ರ -ಹನುಮಂತ ನಿರಾಣಿ 3. ದಕ್ಷಿಣ ಪದವೀಧರ ಕ್ಷೇತ್ರ -ಎಂ.ವಿ.ರವಿಶಂಕರ್

Biennial Election to Karnataka State Legislative Council BJP announces three candidate name

ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿ‌ನ್ನೆಲೆ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಇದನ್ನೂ ಓದಿ: Jal Jeevan Mission: ಗೌರಿಬಿದನೂರು ತಾಲೂಕಿನ 41 ಗ್ರಾಮಗಳ ಕುಡಿಯುವ ನೀರು ಯೋಜನೆಗೆ ಅಸ್ತು ಎಂದ ರಾಜ್ಯ ಸಚಿವ ಸಂಪುಟ

ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಬಗ್ಗೆ ಮುಂದಿನ ವಾರ ನಿರ್ಧಾರ ಸಾಧ್ಯತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada