ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿಗೆ ಆಗಿದ್ದೇ ಬೇರೆ!

ಬೆಂಗಳೂರಿನ ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಫಲಿತಾಂಶದ ಬಳಿಕ ಆಕೆ ‘3 PM fielding set’ ಎಂದು ಸೋಶಿಯಲ್ ಮೀಡಿಯಾ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸ್ನೇಹಿತೆ ಮತ್ತು ಆಕೆಯ ತಂದೆ ಬಾಗಿಲು ಒಡೆದು ರಕ್ಷಿಸಲು ಯತ್ನಿಸಿದರೂ ತನುಶ್ರೀ ಬದುಕುಳಿಯಲಿಲ್ಲ ಎಂಬುದೂ ಗೊತ್ತಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿಗೆ ಆಗಿದ್ದೇ ಬೇರೆ!
ತನುಶ್ರೀ ಹಾಕಿದ್ದ ಸ್ಟೇಟಸ್‌
Image Credit source: tv9
Edited By:

Updated on: Apr 10, 2026 | 11:53 AM

ಬೆಂಗಳೂರು, ಏಪ್ರಿಲ್ 10: ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿ ತನುಶ್ರೀ ಸಾವು (Tanushree Death Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮೊದಲು ತಾಯಿಯ ಮೇಲೆ ಅನುಮಾನ ವ್ಯಕ್ತವಾಗಿದ್ದರೂ, ಈಗ ಲಭ್ಯವಿರುವ ಸಾಕ್ಷ್ಯಗಳು ಇದು ದ್ವಿತೀಯ ಪಿಯುಸಿ ಪರೀಕ್ಷೆ ಫೇಲ್ ಆಗಿ ಮನನೊಂದ ಆತ್ಮಹತ್ಯೆ ಎಂಬದನ್ನು ಪುಷ್ಟೀಕರಿಸುತ್ತಿವೆ. ತನುಶ್ರೀ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿತ್ತು. ಸಂಬಂಧಿಕರು ಕೂಡ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಅಸಲಿ ಸತ್ಯ ಬಹಿರಂಗವಾಗಿದೆ.

ಏನಿದು ಬಿಗ್ ಟ್ವಿಸ್ಟ್?

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತನುಶ್ರೀ ಗಣಿತ ಮತ್ತು ರಾಸಾಯನಶಾಸ್ತ್ರ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಇದರಿಂದ ತೀವ್ರ ಮನನೊಂದಿದ್ದ ಆಕೆ, ಸಾವಿಗೂ ಮುನ್ನ ಸೋಶಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ‘3 PM fielding set’ ಎಂದು ಬರೆದುಕೊಂಡಿದ್ದಳು. ಇದನ್ನು ಗಮನಿಸಿದ ಆಕೆಯ ಸ್ನೇಹಿತೆ ಗಾಬರಿಗೊಂಡು ‘ನಮ್ಮ ಮನೆಗೆ ಬಾ’ ಎಂದು ಮೆಸೇಜ್ ಮಾಡಿದ್ದಳು. ತನುಶ್ರೀ ಕೂಡ ‘ಸರಿ ಬರ್ತೀನಿ’ ಎಂದು ಉತ್ತರಿಸಿದ್ದಳು.

ಆದರೆ, ತನುಶ್ರೀಯ ಸ್ಟೇಟಸ್ ನೋಡಿ ಅನುಮಾನಗೊಂಡ ಸ್ನೇಹಿತೆ ತಕ್ಷಣ ಆಕೆಯ ಮನೆಗೆ ಓಡಿ ಬಂದಿದ್ದಳು. ಅಷ್ಟರಲ್ಲಾಗಲೇ ತನುಶ್ರೀ ನೇಣು ಬಿಗಿದುಕೊಂಡಿದ್ದಳು. ಕೂಡಲೇ ಸ್ನೇಹಿತೆ ತನ್ನ ತಂದೆ ಅಂಥೋನಿ ಅವರಿಗೆ ಕರೆ ಮಾಡಿದ್ದು, ಅವರು ಬಂದು ಬಾಗಿಲು ಒಡೆದು ತನುಶ್ರೀಯನ್ನು ಕೆಳಕ್ಕೆ ಇಳಿಸಿದ್ದಾರೆ. ಆಗ ತನುಶ್ರೀ ಉಸಿರಾಡುತ್ತಿದ್ದಳು ಎನ್ನಲಾಗಿದೆ. ಕೂಡಲೇ ಆಕೆಯನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

ಈ ಬೆಳವಣಿಗೆಯಿಂದಾಗಿ ಪ್ರಕರಣಕ್ಕೆ ಮತ್ತೊಂದು ಆಯಾಮ ಪಡೆದಂತಾಗಿದೆ. ಪೊಲೀಸರು ಯುಡಿಆರ್ (UDR) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು: ತಾಯಿಯ ನಡವಳಿಕೆ ಮೇಲೆಯೇ ಸಂಬಂಧಿಕರ ಶಂಕೆ!

ಆರಂಭದಲ್ಲಿ ಸಂಬಂಧಿಕರು ತನುಶ್ರೀಯ ತಾಯಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದು ಆತ್ಮಹತ್ಯೆ ಆಗಿರಲಾರದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಆದರೆ, ಸದ್ಯ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂಬುದು ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Fri, 10 April 26

Follow Us