ಪೀಣ್ಯ ಫ್ಲೈಓವರ್ ಬಗ್ಗೆ ಬಿಗ್ ಅಪ್​ಡೇಟ್: ವಾಹನ ಸವಾರರಿಗೆ 8 ತಿಂಗಳು ಟ್ರಾಫಿಕ್ ಕಿರಿಕಿರಿ ಫಿಕ್ಸ್

ಪೀಣ್ಯ ಪ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ಸಿಕ್ಕಿದ್ದೇನೋ ನಿಜ. ಆದರೆ, ಈ ಮೇಲ್ಸೇತುವೆ ಬಳಸುವ ವಾಹನ ಸವಾರರಿಗೆ ಟ್ರಾಫಿಕ್ ಜಾಮ್‌ನಿಂದ‌ ಮುಕ್ತಿ ಮಾತ್ರ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಯಾಕೆಂದರೆ, ಫ್ಲೈಓವರ್ ಸರಿಯಾಯಿತು, ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ವಾಹನ ಸವಾರರಿಗೆ ಇನ್ನೂ ಎಂಟು ತಿಂಗಳ ಕಾಲ ಈ ಟ್ರಾಫಿಕ್ ಕಿರಿಕಿರಿ ತಪ್ಪದು. ಕಾರಣ ಇಲ್ಲಿದೆ.

ಪೀಣ್ಯ ಫ್ಲೈಓವರ್ ಬಗ್ಗೆ ಬಿಗ್ ಅಪ್​ಡೇಟ್: ವಾಹನ ಸವಾರರಿಗೆ 8 ತಿಂಗಳು ಟ್ರಾಫಿಕ್ ಕಿರಿಕಿರಿ ಫಿಕ್ಸ್
ಪೀಣ್ಯ ಫ್ಲೈಓವರ್ ಬಗ್ಗೆ ಬಿಗ್ ಅಪ್​ಡೇಟ್
Follow us
Vinay Kashappanavar
| Updated By: Ganapathi Sharma

Updated on: Nov 06, 2024 | 8:03 AM

ಬೆಂಗಳೂರು, ನವೆಂಬರ್ 6: ಪೀಣ್ಯ ಫ್ಲೈಓವರ್‌ನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಫ್ಲೈಓವರ್​ ದುರಸ್ತಿ ಯತ್ನ ನಡೆಯುತ್ತಿದೆ. ಆದರೆ, ಇದಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತಲೇ ಇವೆ. ಜುಲೈ 29 ರಿಂದ ಪೀಣ್ಯ ಪ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳು ಓಡಾಡಬಹುದು ಎಂದು ಐಐಎಸ್‌ಇಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದರೆ, ಪ್ರತಿ ಶುಕ್ರವಾರ ಇಲ್ಲಿ ಫ್ಲೈಓವರ್ ಸಂಪೂರ್ಣ ಬಂದ್ ಮಾಡಬೇಕು. ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎಂದು ಐಐಎಸ್‌ಸಿ ತಜ್ಞರು ಸೂಚನೆ ನೀಡಿದ್ದರು.‌

ಪೀಣ್ಯ ಫ್ಲೈಓವರ್‌: ಶುಕ್ರವಾರ ಸಂಚಾರಕ್ಕಿಲ್ಲ ಸದ್ಯಕ್ಕೆ ಅನುಮತಿ

ಈ ಹಿನ್ನೆಲೆ ದಿನನಿತ್ಯದ ಕಾರ್ಯಗಳಿಗೆ ಓಡಾಡುವ ವಾಹನ ಸವಾರರನ್ನು ಹೊರತುಪಡಿಸಿ, ವೀಕೆಂಡ್‌ಗಳಿಗೆ ತುಮಕೂರು ಮಾರ್ಗವಾಗಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಿಗೆ ಹೋಗುವವರಿಗೆ ಈ ಫ್ಲೈಓವರ್ ವರದಾನವಾಗಿತ್ತು. ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೆ ಬೆಂಗಳೂರು ಬಿಟ್ಟು ಹೊರಹೋಗಲು ಅನುಕೂಲವಾಗುತ್ತಿತ್ತು. ಆದರೆ, ಪ್ರತಿ ಶುಕ್ರವಾರ ಈ ಫ್ಲೈಓವರ್ ಬಳಸಲು ಆಗದೆ ಜನರು ಟ್ರಾಫಿಕ್‌ನಲ್ಲೇ ಇರಬೇಕಾದ ಪರಿಸ್ಥಿತಿ ಸದ್ಯಕ್ಕಿದೆ.

Big Update on Peenya Flyover: Traffic annoyance for motorists Fix to 8 months

ಪೀಣ್ಯ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್

ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ, ಪಿಲ್ಲರ್‌ಗಳಲ್ಲಿ ಕೇಬಲ್ ಬದಲಿಸುವ ಕಾರ್ಯ ಕೇವಲ ಒಂದು ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಕೇಬಲ್ ಬದಲಿಸುವ ಕಾರ್ಯ ಇನ್ನೂ 8 ತಿಂಗಳವರೆಗೆ ಮುಂದುವರೆಯಲಿದೆ.

ಐಐಎಸ್​​ಸಿ ತಜ್ಞರು ಹೇಳಿದ್ದೇನು?

ಯಾವುದೇ ಕಾರಣಕ್ಕೂ ಫ್ಲೈಓವರ್‌ ನಲ್ಲಿ ಮತ್ತೆ ಸಮಸ್ಯೆ ಎದುರಾಗಬಾರದು ಎಂಬ ಅನ್ನೊ ಕಾರಣಕ್ಕೆ 1400 ಕೇಬಲ್‌ಗಳನ್ನು ಅಳವಡಿಸಲು ಐಐಎಸ್‌ಸಿ ಸೂಚಿಸಿದ್ದು, ಇದರಲ್ಲಿ ಇದುವರೆಗೂ 700 ಕೇಬಲ್‌ಗಳನ್ನು ಮಾತ್ರ ಬದಲಿಸಲಾಗಿದೆ. ತುಕ್ಕು ಹಿಡಿದಿರುವ ಎಲ್ಲಾ ಕೇಬಲ್ ಬದಲಿಸಲು ಮುಂದಾಗಿರುವುದರಿಂದ ಆ ಕಾಮಗಾರಿ ನಡೆಯುತ್ತಿದೆ. ಇನ್ನುಳಿದ ಕೇಬಲ್‌ಗಳನ್ನು ಅಳವಡಿಸಲು ಮುಂದಿನ 8 ತಿಂಗಳವರೆಗೆ ಸಮಯ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲಿಯವರೆಗೂ ಪ್ರತಿ ಶುಕ್ರವಾರ ಫ್ಲೈಓವರ್ ಬಂದ್ ಆಗಿರಲಿದೆ ಎಂದು ಐಐಎಸ್​​ಸಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಚಂದ್ರ ಕಿಶನ್ ತಿಳಿಸಿದ್ದಾರೆ.

ಇದನ್ನೂ ಓದಿ: ಲಾಲ್ ಬಾಗ್ ಭೇಟಿ ನೀಡುವವರಿಗೆ ಕಹಿ ಸುದ್ದಿ: ಪ್ರವೇಶ ಶುಲ್ಕ, ಪಾರ್ಕಿಂಗ್ ಫೀ ಹೆಚ್ಚಳ

ಈಗಾಗಲೇ ಫ್ಲೈಓವರ್ ಇದ್ದೂ ಇಲ್ಲದಂತಾಗಿದ್ದು, ವಾರದ ದಿನಗಳಲ್ಲಿ ಹೇಗೋ ವಾಹನ ಸವಾರರು ಟ್ರಾಫಿಕ್‌ನ ಸಮಸ್ಯೆ ಸಹಿಸಿಕೊಳ್ಳುತ್ತಿದ್ದಾರೆ. ಆದರೆ, ಶನಿವಾರ, ಭಾನುವಾರ ಬೆಂಗಳೂರು ಬಿಟ್ಟು ಹೊರಗೆ ಹೋಗಲು ಶುಕ್ರವಾರವೇ ಹೆಚ್ಚು ಜನರು ಈ ರಸ್ತೆ ಬಳಸುತ್ತಾರೆ. ಈ ವೇಳೆ ಗಂಟೆಗಟ್ಟಲೆ ಕಾದರೂ ಜನರು ನಗರಕ್ಕೆ ಬರಲು ಹಾಗೂ ಸಿಟಿಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.

ಒಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಫ್ಲೈಓವರ್ ಸರಿಯಾಗುತ್ತದೆ ಎಂದು ಕಾಯುತ್ತಿದ್ದ ಜನರಿಗೆ ಆಡಳಿತ ವೀಕೆಂಡ್ ಶಾಕ್ ನೀಡಿದ್ದು, ದುರಸ್ತಿ ಕಾರ್ಯ ಮುಗಿಯುವವರೆಗೂ ವಾಹನ ಸವಾರರಿಗೆ ಟ್ರಾಫಿಕ್‌ನ ಕಿರಿಕಿರಿ ತಪ್ಪಿದ್ದಲ್ಲ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಡುಪಿಯಲ್ಲಿ ಮಂದಾರ್ತಿ ಮೇಳದ ಚೌಕಿ ಮನೆಗೂ ನುಗ್ಗಿದ ಮಳೆ ನೀರು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು