ಈಗ್ದಾ ಮೈದಾನದಲ್ಲಿ ಗಣೇಶ ಕೂಡಿಸುವ ವಿಚಾರ: ಈಗ್ದಾ ಮೈದಾನ ಜಮೀರ್ ಅಪ್ಪನ ಪ್ರಾಪರ್ಟಿನಾ? ಎಂದ ಬಿಜೆಪಿ ಶಾಸಕ ಸಿ ಟಿ ರವಿ

ಈಗ್ದಾ ಮೈದಾನ ಜಮೀರ್ ಅಪ್ಪನ ಪ್ರಾಪರ್ಟಿನಾ !? ಗಣಪತಿ ಇಡುವ ವಿಚಾರ ಜಮೀರ್ ಕೇಳಿ ಮಾಡಬೇಕಾ ? ಎಂದು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಬೆಂಗಳೂರಿನಲ್ಲಿಆಕ್ರೋಶ ಹೊರಹಾಕಿದ್ದಾರೆ.

ಈಗ್ದಾ ಮೈದಾನದಲ್ಲಿ ಗಣೇಶ ಕೂಡಿಸುವ ವಿಚಾರ: ಈಗ್ದಾ ಮೈದಾನ ಜಮೀರ್ ಅಪ್ಪನ ಪ್ರಾಪರ್ಟಿನಾ? ಎಂದ ಬಿಜೆಪಿ ಶಾಸಕ ಸಿ ಟಿ ರವಿ
ಬಿಜೆಪಿ ಶಾಸಕ ಸಿಟಿ ರವಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 10, 2022 | 3:12 PM

ಬೆಂಗಳೂರು: ಈಗ್ದಾ ಮೈದಾನ (Idaga Maidan) ಜಮೀರ್ ಅಪ್ಪನ ಪ್ರಾಪರ್ಟಿನಾ !? ಗಣಪತಿ ಇಡುವ ವಿಚಾರ ಜಮೀರ್ ಕೇಳಿ ಮಾಡಬೇಕಾ ? ಎಂದು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್ (Zameer Ahmed)​ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಬೆಂಗಳೂರಿನಲ್ಲಿಆಕ್ರೋಶ ಹೊರಹಾಕಿದ್ದಾರೆ. ಅದ್ದೂರಿ ಗಣೇಶೋತ್ಸವ ಮಾಡುತ್ತೇವೆ. ಅರಬ್​ನಲ್ಲಿ ಗಣೇಶ ಕೂರಿಸುತ್ತಿಲ್ಲ. ಜಮೀರ್ ಮೇಲೆ FIR ಆಗಬೇಕು ಎಂದು ಶಾಸಕ ಸಿ ಟಿ ರವಿ ಕಿಡಿಕಾರಿದ್ದಾರೆ.

ನಮಗೆ ತಾಕತ್ ಇದೆ, ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸುತ್ತೇವೆ. ಈದ್ಗಾ ಮೈದಾನಕ್ಕೆ‌ ಜಯಚಾಮರಾಜ ಒಡೆಯರ್ ಹೆಸರು ಇಡಬೇಕು. ಸಾರ್ವಜನಿಕ ಪ್ರಾಪರ್ಟಿಗೆ ಅಥಾರಿಟಿಯವರ ಬಳಿ ಅನುಮತಿ ತಗೋಬೇಕು ಎಂದು ಹೇಳಿದರು.

ಬಿಹಾರದಲ್ಲಾದ ರಾಜಕೀಯ ಬದಲಾವಣೆ ಕುರಿತು ಮಾತನಾಡಿದ ಅವರು ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ವಿರುದ್ಧ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭ್ಯಾಸವೇ ಆ ರೀತಿ ಇರುವ ಮನಸ್ಥಿತಿ ಅಂತಾರೆ. ತೇಜಸ್ವಿ ಯಾದವ್ ಪಲ್ಲಟ್ ಚಾಚಾ ಅಂದರು. ಈ ತರದ ಸ್ವಭಾವ ಇವತ್ತಿನದ್ದು ಅಲ್ಲ 1996ರಿಂದ ಇದೇ ರೀತಿ ಬೆಳೆಸಿಕೊಂಡು ಬಂದಿದ್ದಾರೆ ಎಂದರು.

NDA ಬಿಟ್ಟು ಮಹಾಘಟಬಂದನ್ ಜೊತೆ ಹೋಗಿ ಮುಖ್ಯಮಂತ್ರಿ ಆದರು. ಆರ್​ಜೆಡಿ ಭ್ರಷ್ಟಾಚಾರದಲ್ಲಿ ತೊಡಗಿದೆ ಅಂತ ಹೇಳಿ ಹೊರ ಬಂದರು. ಇದು ಅವರ ರಾಜಕೀಯ ರೋಗ ಅನ್ನಬಹುದು. ಬಿಜೆಪಿ ಗಳಿಸಿದ್ದು 77 ಸ್ಥಾನ. ಅವರು ಗಳಿಸಿದ್ದು 31 ಆದರೂ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಇದು ಬಿಹಾರಕ್ಕೆ ಒಳ್ಳೆಯದಲ್ಲ. ಆರ್​ಜೆಡಿಯೇ ಇವರ ಕಾಲೆಳೆದು ಮನೆಗೆ ಕಳಿಸಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು ಚುನಾವಣೆಗೆ ನಿಲ್ಲಲು ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು. ಹತ್ತು ಜನ ಸೂಚಿಸಿದರೆ ನಾಮಪತ್ರ ಸಲ್ಲಿಕೆ ಊರ್ಜಿತ ಆಗುತ್ತೆ. ಗೆಲ್ಲಿಸೋದು ಜನರ ಕೈಯಲ್ಲಿದೆ ಎಂದು ಮಾತನಾಡಿದರು.

ನಾನು ಚಿಕ್ಕಮಗಳೂರು ಜಿಲ್ಲೆ ಮನೆ ಮಗ. ನನ್ನನ್ನ ಗೆಲ್ಲಿಸುತ್ತಾರೆ ನಮ್ಮ ಜನ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ. ರಸ್ತೆ, ಆಸ್ಪತ್ರೆ, ಸ್ಟೇಡಿಯಂ ಎಲ್ಲಾ ಕೆಲಸ ಯಾರು ಅಂದ್ರೆ ಸಿ.ಟಿ ರವಿ ಹೆಸರೇಳುತ್ತಾರೆ. ಸಿದ್ದರಾಮಯ್ಯ ಅಂದ್ರೆ ದತ್ತಪೀಠಕ್ಕೆ ಅನ್ಯಾಯ ಮಾಡಿದವರು ಅಂತಿದೆ. ನಾನು ಹೇಳಿದೆ ಸಿದ್ದರಾಮಯ್ಯ ಅವರೇ ಅನ್ಯಾಯ ಮಾಡಬೇಡಿ. ಅದು ಹಿಂದೂ ಜನರದ್ದು ಅಂತ ಮನವಿ ಮಾಡಿದೆ ಆದರೂ ಕೇರ್ ಮಾಡಲಿಲ್ಲ ಎಂದು ಹೇಳಿದರು.

ಚಿಕ್ಕಮಗಳೂರುನಲ್ಲಿ ಸ್ಪರ್ಧಿಸಿದರೆ ಚಿಕ್ಕಮಗಳೂರು ಜನತೆ ಅವರಿಗೆ ಪಾಠ ಕಲಿಸುತ್ತಾರೆ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆದ್ದಿದ್ದೇವೆ. ಈಗ ಐದಕ್ಕೆ ಐದೂ ಸ್ಥಾನ ಗೆಲ್ಲುತ್ತೇವೆ. ಡಿ.ಕೆ ಶಿವಕುಮಾರ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದರು, ವೀರಪ್ಪ ಯೋಯ್ಲಿ ಹೇಗೆ ಸಿಎಂ ಆದರು ಅಂತ ಎಂದು ಕುತಂತ್ರ ರಾಜಕಾರಣ ಇರೋದು ಕಾಂಗ್ರೆಸ್‌ನಲ್ಲಿ ಅಂತಾ ಕಾಲಳೆದರು.

Published On - 2:43 pm, Wed, 10 August 22