ಈದ್ಗಾ ಮೈದಾನದಲ್ಲೇ ಗಣೇಶ ಕೂರಿಸಬೇಕಾ? ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿಕೆ

ಈದ್ಗಾ ಮೈದಾನದಲ್ಲೇ ಗಣೇಶ ಕೂರಿಸಬೇಕಾ? ನಿಮ್ಮ ನಿಮ್ಮ ಮನೆಗಳಲ್ಲಿ ಗಣೇಶನನ್ನ ಪ್ರತಿಷ್ಠಾನೆ ಮಾಡಿ. ನಿಮ್ಮ ಮನೆಗಳಲ್ಲಿ ಭಕ್ತಿ ತೋರಿಸಿ ಆಗ ದೇವ್ರು ಒಪ್ಪುತ್ತಾನೆ ಎಂದರು.

ಈದ್ಗಾ ಮೈದಾನದಲ್ಲೇ ಗಣೇಶ ಕೂರಿಸಬೇಕಾ? ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿಕೆ
ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2022 | 3:05 PM

ಬೆಂಗಳೂರು: ನಮಾಜ್ ಮಾಡೋಕೆ ನಾವೂ ಯಾವತ್ತೂ ಯಾರಿಗೂ ಅನುಮತಿ ಕೇಳಿಲ್ಲ, ಕೇಳೋದೂ ಇಲ್ಲ. ಈದ್ಗಾ ಮೈದಾನದಲ್ಲಿ (chamrajpet Idgah Maidan) ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ನಿಮಗೆ ಪಾಪ ಬರುತ್ತೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿಕೆ ನೀಡಿದರು. ಈದ್ಗಾ ಮೈದಾನದಲ್ಲೇ ಗಣೇಶ ಕೂರಿಸಬೇಕಾ? ನಿಮ್ಮ ನಿಮ್ಮ ಮನೆಗಳಲ್ಲಿ ಗಣೇಶನನ್ನ ಪ್ರತಿಷ್ಠಾನೆ ಮಾಡಿ. ನಿಮ್ಮ ಮನೆಗಳಲ್ಲಿ ಭಕ್ತಿ ತೋರಿಸಿ ಆಗ ದೇವ್ರು ಒಪ್ಪುತ್ತಾನೆ. ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿ. ಕಂದಾಯ ಇಲಾಖೆಯ ಆಸ್ತಿ ಅಂತ ಹೇಳೋಕೆ ಬಿಬಿಎಂಪಿಗೆ ಏನ್ ಹಕ್ಕು ಇದೆ? ನಾವೇ 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡ್ತೀವಿ. ಬೇರೆ ಯಾರಿಗೂ ಅವಕಾಶ ನೀಡೋದಿಲ್ಲ. ಮುಸಲ್ಮಾನರ ಕೆಣಕೋಕೆ ಇದೆಲ್ಲ ಪಿತೂರಿ ಅಷ್ಟೇ. ರಾಜಕಾರಣವನ್ನ ಬಳಸಿ ಏನೇನೋ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಬಾಬ್ರಿ ಮಸೀದಿ ರೀತಿ ಮೈದಾನದ ಗೋಡೆ ಕೆಡುವುದಾಗಿ ಹೇಳಿಕೆ ನೀಡಿದ್ದ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿರುದ್ಧ ಎಫ್ಐಆರ್ ದಾಖಲು

ಗಣೇಶ ಹಬ್ಬ ಆಚರಿಸಬೇಕು ಅಂದರೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮಾಡಿ. ಮುಸ್ಲಂ ಭಾವನೆಗಳ ಜೊತೆ ಯಾಕೆ ಆಟ ಆಡ್ತೀರಿ. ಹಿಂದೂ ಸಂಘಟಬೆಗಳಿಗೆ ಬೇರೆ ಕೆಲಸ ಇಲ್ಲ. ನಾವು ಮದರಸಾಗಳಲ್ಲಿ ಧ್ವಜಾರೋಹಣ ಮಾಡಿದ್ವಿ. ಈಗ ಆ.15ರಂದು ಈದ್ಗಾದಲ್ಲಿ ನಾವೇ ರಾಷ್ಟ್ರ ಧ್ವಜ ಹಾರಿಸ್ತೀವಿ. ಆದರೆ ಯಾರು ಧ್ವಜಾರೋಹಣ ಮಾಡ್ಬೇಕು ಅಂತ ಆ.12ರಂದು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಜಮೀರ್ ಧ್ವಜಾರೋಹಣ ಮಾಡುವುದು ಬೇಡ: ಹಿಂದೂ ಸಂಘಟನೆಗಳು ಪಟ್ಟು

ಚಾಮರಾಜಪೇಟೆ ಮೈದಾನದಲ್ಲಿ  ಗಣೇಶ ಮೂರ್ತಿ ಪ್ರತಿಷ್ಠಾಪನೆ ಗಲಾಟೆ ಆಯ್ತು‌. ಈಗ ಧ್ವಜಾರೋಹಣ ವಿಚಾರವಾಗಿ ಸಮರ ಶುರುವಾಗಿದ್ದು, ಜಮೀರ್ ಧ್ವಜಾರೋಹಣ ಮಾಡುವುದು ಬೇಡವೇ ಬೇಡ ಎಂದು ಹಿಂದೂ ಸಂಘಟನೆಗಳು ಮತ್ತು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪಟ್ಟು ಹಿಡಿದಿದೆ. ಜಮ್ಮೀರ್ ಧ್ವಜಾರೋಹಣ ಮಾಡಿದ್ರೆ ನಾವು ಬಿಡೋದಿಲ್ಲ. ಜಮೀರ್ 20 ವರ್ಷ ಧ್ವಜಾರೋಹಣಕ್ಕೆ ಅಡ್ಡಿ ಮಾಡಿದವರು. ಈಗ ಇವರು ಧ್ವಜಾರೋಹಣ ಮಾಡೋದು ಬೇಡ.

ಜಮೀರ್ ಬರ್ಲಿ, ಸೆಲ್ಯೂಟ್ ಮಾಡಿ ಹೋಗ್ಲಿ. ಜಮೀರ್ ಸಲ್ಯೂಟ್​ಗೆ ಮಾತ್ರ ಸೀಮಿತವಾಗಿರಲಿ. ನಾವೇ ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದರು. ಇದಕ್ಕೆ ಒಪ್ಪಿಗೆ ನೀಡದಿದ್ರೆ ಅಶಾಂತಿ ಸೃಷ್ಟಿಯಾಗುವ ಎಚ್ಚರಿಕೆ ನೀಡಿದ್ದು, ಈ ಅಶಾಂತಿಗೆ ಸರ್ಕಾರವೇ ನೇರ ಹಣೆ ಆಗಲಿದೆ ಎಂದು ಸಂಘಟನೆಗಳು ಹೇಳುತ್ತಿವೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ