AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಲು ಕಾರಣವೇನು? ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾಡಿದ ಪಟ್ಟಿ ಇಲ್ಲಿದೆ ನೋಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ಮತದಾನಕ್ಕೆ ಕಾರಣಗಳೇನು ಮತ್ತು ಏನು ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ರಾಜಾಜಿನಗರ ಬಿಜೆಪಿ ಶಾಸಕ ಎಸ್​ ಸುರೇಶ್​ ಕುಮಾರ್​ ಸಾಮಾಜಿಕ ಮಾಧ್ಯಮ ಫೇಸ್​​ಬುಕ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಿಚಾರ ಇಲ್ಲಿದೆ.

ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಲು ಕಾರಣವೇನು? ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾಡಿದ ಪಟ್ಟಿ ಇಲ್ಲಿದೆ ನೋಡಿ
ಮತದಾರರೊಬ್ಬರ ಜತೆ ಸುರೇಶ್ ಕುಮಾರ್ (ಫೇಸ್​ಬುಕ್ ಚಿತ್ರ)
Ganapathi Sharma
|

Updated on: Apr 27, 2024 | 1:22 PM

Share

ಬೆಂಗಳೂರು, ಏಪ್ರಿಲ್ 27: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ (Karnataka) ಮೊದಲ ಹಂತದ ಮತದಾನ ಶುಕ್ರವಾರ ನಡೆದಿದ್ದು, 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಶೇಕಡಾ 69.23 ರಷ್ಟು ಮತದಾನವಾಗಿದೆ. ಬೆಂಗಳೂರು (Bengaluru) ನಗರ ವ್ಯಾಪ್ತಿಯಲ್ಲಿ ಈ ಬಾರಿಯೂ ಮತದಾನ ಪ್ರಮಾಣ ಕಡಿಮೆಯಾಗಿದೆ. ನಗರ ವ್ಯಾಪ್ತಿಯ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಪೈಕಿ ಸುಮಾರು ಅರ್ಧದಷ್ಟು ಮಂದಿ ಮತ ಚಲಾಯಿಸಿಯೇ ಇಲ್ಲ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇಕಡಾ 52.81, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡಾ 54.42, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 67.29, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 53.15ರಷ್ಟು ಮತದಾನವಾಗಿದೆ.

ರಾಜ್ಯ ರಾಜಧಾನಿಯಲ್ಲಿ ಕಳಪೆ ಮತದಾನಕ್ಕೆ ಕಾರಣಗಳೇನು ಮತ್ತು ಏನು ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ರಾಜಾಜಿನಗರ ಬಿಜೆಪಿ ಶಾಸಕ ಎಸ್​ ಸುರೇಶ್​ ಕುಮಾರ್​ ಸಾಮಾಜಿಕ ಮಾಧ್ಯಮ ಫೇಸ್​​ಬುಕ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಮತ್ತೊಮ್ಮೆ ನಗರ ಪ್ರದೇಶಗಳಲ್ಲಿ ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಮತದಾನ ತೀರ ಕಡಿಮೆ ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ಕಂಡುಬಂದಿರುವ ನಿಟ್ಟುಸಿರು. ‘‘ಫಸ್ಟ್ ಕ್ಲಾಸ್ ಸಿಟಿಯಲ್ಲಿ ಸೆಕೆಂಡ್ ಕ್ಲಾಸ್ ಮತದಾನ’’ ಎಂಬ ಬಿರುದೂ ಸಹ ನಮ್ಮ ಪಾಲಾಗಿದೆ. ನಾನೊಬ್ಬ ಬೆಂಗಳೂರಿನ ನಾಗರಿಕನಾಗಿ ಬೆಂಗಳೂರು ಬಗ್ಗೆ ಬಂದಿರುವ ಈ “ಪ್ರಶಂಸಾ” ಪತ್ರವನ್ನು ತಲೆ ಬಾಗಿ ಸ್ವೀಕರಿಸುತ್ತ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಅವರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಅವುಗಳು ಹೀಗಿವೆ;

ಚುನಾವಣಾ ಆಯೋಗವನ್ನು ಕನಿಷ್ಠ ಮೂರು ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದೇನೆ. ‘‘ಬೆಂಗಳೂರು ನಗರದಲ್ಲಿ ಚುನಾವಣೆಯನ್ನು ಶುಕ್ರವಾರ, ಶನಿವಾರ, ಭಾನುವಾರ ಅಥವಾ ಸೋಮವಾರ ಇಡಬಾರದು’’ ಎಂಬುದಾಗಿ.

ಮತದಾನದ ದಿನ ಶುಕ್ರವಾರ ವಾದರೆ, ಆಯಾ ದಿನವನ್ನು ಚುನಾವಣಾ ಆಯೋಗ ರಜೆಯೆಂದು ಘೋಷಿಸಿದರೆ ಅನೇಕರು ಇದನ್ನು ದೀರ್ಘ ವಾರಂತ್ಯವೆಂದು ಪರಿಗಣಿಸಿ ತಮ್ಮ ಸಂತೋಷಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಇದು ಸಹಜ

ಕೆಲವು ಮತದಾನ ಕೇಂದ್ರಗಳಲ್ಲಿ ಉದಾಹರಣೆಗೆ ರಾಜಾಜಿನಗರ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡಿನ ವಾರ್ಡ್ ಆಫೀಸ್ ಮತಗಟ್ಟೆ ಸಂಖ್ಯೆ 99ರಲ್ಲಿ ಇರುವ ಮತದಾರರ ಸಂಖ್ಯೆ 1424. ಇಂತಹ ಕಡೆ (ಮತದಾನ ಪ್ರಕ್ರಿಯೆಯಲ್ಲಿ ನಿಧಾನವಾದ ಕಾರಣ) ಅಲ್ಲಿ ನಿಂತ ಉದ್ದವಾದ ಸಾಲನ್ನು ಕಂಡು ಕೆಲವರು ವಾಪಸ್ ಹೋಗಿದ್ದು ನಿಜ. ಇಂತಹ ಕಡೆಗಳಲ್ಲಿ ಮತ್ತೊಂದು ಉಪ ಕೇಂದ್ರ ಮಾಡಿದ್ದರೆ ಒಳಿತಾಗುತ್ತಿತ್ತು.

ಸುರೇಶ್ ಕುಮಾರ್ ಫೇಸ್​​​ಬುಕ್ ಸಂದೇಶ ನಮ್ಮ ಕ್ಷೇತ್ರದ ಮತ್ತೊಂದು ಉದಾಹರಣೆ ಕೊಡಬೇಕೆಂದರೆ ನಮ್ಮ ಕ್ಷೇತ್ರದಲ್ಲಿ ಇರುವ ಮತದಾರರ ಪೈಕಿ ಸುಮಾರು 50 ಸಾವಿರ ಮತದಾರರಿಗೆ ನಮ್ಮ ಕಾರ್ಯಕರ್ತರು ಮತದಾನ ಚೀಟಿ ತಲುಪಿಸಲು ಆಗಲಿಲ್ಲ. ಏಕೆಂದರೆ ಅನೇಕ ವರ್ಷಗಳ ಹಿಂದೆ ತೀರಿ ಹೋದವರು, ಮನೆಗಳಲ್ಲಿ ಬಾಡಿಗೆಗೆ ಇದ್ದ ಅನೇಕರು ಇಲ್ಲಿಂದ ಬೇರೆ ಕಡೆ ಮನೆ ಮಾಡಿಕೊಂಡು ಹೋಗಿದ್ದರೂ, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇನ್ನೂ ಇವೆ. ಅವರನ್ನು ಸಂಪರ್ಕಿಸಲು ನಮ್ಮ ಕಾರ್ಯಕರ್ತರು ಪ್ರಯತ್ನ ಪಟ್ಟರೂ ಸಹ ಬಹುತೇಕ ಸಾಧ್ಯವಾಗಲಿಲ್ಲ.

ನಮ್ಮ ಮತದಾರ ಪಟ್ಟಿಯನ್ನು ಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಆಗುವ ವರೆಗೂ “ಮತದಾನ ಪ್ರಮಾಣ ಕಡಿಮೆ” ಎಂಬ ಗೊಣಗಾಟ ಕೇಳುತ್ತಲೇ ಇರಬೇಕು.

ಓರ್ವ ಮತದಾರರನ್ನು ಸಂಪರ್ಕಿಸಿ “ನಿಮ್ಮ ಮತ ನಮ್ಮ ಕ್ಷೇತ್ರದಲ್ಲಿ ಇದೆ, ದಯವಿಟ್ಟು ಬಂದು ಮತ ಚಲಾಯಿಸಿ” ಎಂದು ಮನವಿ ಮಾಡಿಕೊಂಡಾಗ ಆ ಮಹನೀಯರು ಹೇಳಿದ್ದು” ನನ್ನದು ಇನ್ನೂ ಮೂರು ಕಡೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವೈದ್ಯ ಅಭ್ಯರ್ಥಿ ನನಗೆ ಇಷ್ಟ ಅದಕ್ಕೋಸ್ಕರ ನಾನು ಅಲ್ಲಿ ಮತ ಚಲಾಯಿಸುತ್ತೇನೆ” ಎಂದು.

ಆಧಾರ್ ಕಾರ್ಡ್ ಲಿಂಕ್ ಆಗುವವರೆಗೂ ಎರಡು ಮೂರು ಹೆಚ್ಚು ಕಡೆಗಳಲ್ಲಿ ಮತದಾರರ ಹೆಸರು ಇರುವುದು ಮುಂದುವರೆಯುತ್ತದೆ. ಇದರಿಂದ ಮತದಾನ ಪ್ರಮಾಣಕ್ಕೆ ಏಟು ಬೀಳುತ್ತದೆ.

ಇದನ್ನೂ ಓದಿ: ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಹೇಗಾಯ್ತು? ಕಾನೂನು ಸುವ್ಯವಸ್ಥೆ ಎಡಿಜಿಪಿ ಹೇಳಿದ್ದಿಷ್ಟು

ಅಭ್ಯರ್ಥಿಗಳ ಜೊತೆ ಕ್ಷೇತ್ರದ ಜನತೆ ಯಾವುದಾದರೂ ಒಂದು ರೀತಿಯಲ್ಲಿ ನಂಟು, ಸಂಬಂಧ, ಸದಾ ಅಭಿಪ್ರಾಯ ಇದ್ದಲ್ಲಿ ಮತದಾನ ಪ್ರಮಾಣ ಹೆಚ್ಚಾಗಲು ಸಹಾಯವಾಗುತ್ತದೆ. ನಮ್ಮ ರಾಜಾಜಿನಗರ ಕ್ಷೇತ್ರದಲ್ಲಿ ವರದಿ ಆಗಿರುವಂತೆ ಮತದಾನ ಪ್ರಮಾಣ ಶೇಕಡ 51.11. ಆದರೆ ನಮ್ಮಲ್ಲಿ ಮತದಾನ ಪಟ್ಟಿಯಲ್ಲಿ ಹೆಸರು ಇದ್ದು ಕ್ಷೇತ್ರದಲ್ಲಿ ಇಲ್ಲದ, ಮರಣ ಹೊಂದಿದವರ ಹೆಸರುಗಳು ಇನ್ನೂ ಮುಂದುವರೆದಿರುವುದು, ಇವೆಲ್ಲ ಸೇರಿದಂತೆ ಸಂಖ್ಯೆ ಲೆಕ್ಕ ಹಾಕಿ ಅದನ್ನು ಒಟ್ಟು ಮತದಾರರ ಸಂಖ್ಯೆಯಿಂದ ಕಳೆದರೆ ಉಳಿಯುವ ಮತದಾರರ ಪೈಕಿ ಆಗಿರುವ ಮತದಾನ ಶೇಕಡ 75 ಕ್ಕೂ ಹೆಚ್ಚು ಎಂಬುದು ನನ್ನ ಅನಿಸಿಕೆ ಎಂದು ಸುರೇಶ್​ ಕುಮಾರ್ ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?