ಸಚಿವ S.T.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್; ಆರೋಪಿ ರಾಹುಲ್ ಭಟ್ ಬಂಧನ, 5 ದಿನ ಸಿಸಿಬಿ ವಶಕ್ಕೆ
ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ಕೆಲವು ದಿನಗಳ ಹಿಂದೆ ಅಪರಿಚಿತ ನಂಬರ್‌ನಿಂದ ವಾಟ್ಸಾಪ್‌ನಲ್ಲಿ 1 ಮೆಸೇಜ್ ಬಂದಿತ್ತು. ವಿಡಿಯೋದಲ್ಲಿ ತನ್ನ ಫೋಟೋ ಎಡಿಟ್ ಮಾಡಿ ಕಳಿಸಿದ್ದರು. ಬಳಿಕ ವಾಟ್ಸಾಪ್ ಮೂಲಕ ತನಗೆ, ತಂದೆಗೆ ಬೆದರಿಕೆ ಹಾಕಿದ್ದಾರೆ.
ಬೆಂಗಳೂರು: ವಿಡಿಯೋ ಕಳಿಸಿ 1 ಕೋಟಿ ರೂ. ನೀಡುವಂತೆ ಸಚಿವ S.T.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಸಚಿವ S.T.ಸೋಮಶೇಖರ್ ಪುತ್ರ ನಿಶಾಂತ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು ಆರೋಪಿ ರಾಹುಲ್ ಭಟ್ನನ್ನು ಪೊಲೀಸರು ಬಂಧಿಸಿದ್ದಾರೆ.
ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ಕೆಲವು ದಿನಗಳ ಹಿಂದೆ ಅಪರಿಚಿತ ನಂಬರ್‌ನಿಂದ ವಾಟ್ಸಾಪ್‌ನಲ್ಲಿ 1 ಮೆಸೇಜ್ ಬಂದಿತ್ತು. ವಿಡಿಯೋದಲ್ಲಿ ತನ್ನ ಫೋಟೋ ಎಡಿಟ್ ಮಾಡಿ ಕಳಿಸಿದ್ದರು. ಬಳಿಕ ವಾಟ್ಸಾಪ್ ಮೂಲಕ ತನಗೆ, ತಂದೆಗೆ ಬೆದರಿಕೆ ಹಾಕಿದ್ದಾರೆ. ಪಿಎಗೆ ಕಳಿಸಿ ಬೆದರಿಕೆ ಹಾಕಿದ್ದಾಗಿ ನಿಶಾಂತ್ ದೂರು ನೀಡಿದ್ದಾರೆ. 1 ಕೋಟಿ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸೈಬರ್ ಕ್ರೈಂ ಪೊಲೀಸರಿಗೆ ಎಸ್.ಟಿ.ಸೋಮಶೇಖರ್ ಪುತ್ರ ದೂರು ನೀಡಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಹುಲ್ ಭಟ್ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ 5 ದಿನ ಸಿಸಿಬಿ ವಶಕ್ಕೆ ಪಡೆಯಲಾಗಿದೆ. ದುಬೈನಿಂದ ವಾಪಸಾದ ಬಳಿಕ ರಾಹುಲ್ ಭಟ್ ವಶಕ್ಕೆ ಪಡೆದಿದ್ದು ಮತ್ತೋರ್ವ ಆರೋಪಿ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಯುತ್ತಿದೆ.
ಕೇಸ್ನಲ್ಲಿ ವಿಜಯಪುರ ಜಿಲ್ಲೆಯ ಓರ್ವ ಎಮ್ಎಲ್ಎ ಪುತ್ರಿ ಹೆಸರು ಪ್ರಸ್ತಾಪ ಈ ಕೇಸ್ ಸಂಬಂಧ ತನಿಖೆ ವೇಳೆ ವಿಜಯಪುರ ಜಿಲ್ಲೆಯ ಓರ್ವ ಎಮ್ಎಲ್ಎ ಪುತ್ರಿ ಹೆಸರು ಪ್ರಸ್ತಾಪವಾಗಿದೆ. ಸದ್ಯ ಎಂಎಲ್ಎ ಮಗಳು ಲಂಡನ್ನಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ಹಾಗೂ ಆರ್ಟಿ ನಗರದಲ್ಲಿ ನೆಲೆಸಿರುವ ಓರ್ವ ಅಸ್ಟ್ರಾಲಜಿಸ್ಟ್ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಈ ಕೇಸ್ ಸಂಬಂಧ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಒಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆದಿರುವುದಾಗಿ ಹೇಳಿದ್ದಾರೆ. ಇಷ್ಟು ಬಿಟ್ಟರೆ ಬೇರೆ ಯಾವುದೇ ಮಾಹಿತಿಯನ್ನು ಹೇಳಿಲ್ಲ ಎಂದಿದ್ದಾರೆ. ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿದ್ದಾರೆಂದು ಗೊತ್ತಿಲ್ಲ. ಆದರೆ ಇದರ ಹಿಂದಿನ ಉದ್ದೇಶ ಏನೆಂದು ಕೇಳಿದ್ದೇನೆ. ಸಂಪೂರ್ಣ ತನಿಖೆ ನಡೆಸಿದ ಬಳಿಕ ಮಾಹಿತಿ ನೀಡಲಿದ್ದಾರೆ. ಅನುಮಾನ ಹಿನ್ನೆಲೆ ಗನ್‌ಮ್ಯಾನ್ ವಿಚಾರಣೆ ಮಾಡಿದ್ದಾರೆ. ನನ್ನ ಪುತ್ರನ ಗನ್‌ಮ್ಯಾನ್ ಪ್ರತಿನಿತ್ಯ ಫೋಟೋ ತೆಗೆಯುತ್ತಿದ್ದ. ಹೀಗಾಗಿ ಗನ್‌ಮ್ಯಾನ್‌ನನ್ನು ವಿಚಾರಣೆ ನಡೆಸಿದ್ದಾರಷ್ಟೇ. ಎಫ್‌ಎಸ್‌ಎಲ್ ತನಿಖೆಯಲ್ಲಿ ಮಾಹಿತಿ ತಿಳಿಯಲಿದೆ. ಅವರು ಪದೇಪದೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಕಾಲ ಮಿಂಚಿಲ್ಲ ಈಗಲೇ ನಿರ್ಧಾರ ಮಾಡಿ ಎನ್ನುತ್ತಿದ್ದರು. ಬೇಗ ಸೆಟಲ್‌ಮೆಂಟ್ ಮಾಡಿಕೊಳ್ಳುವಂತೆ ಹೇಳುತ್ತಿದ್ದರು. ಯುಕೆ ಸಂಖ್ಯೆಯಿಂದ ಕರೆ ಮಾಡಿ ಫೋಟೋ ಬಿಡುಗಡೆ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ: Best Smartphone: ಜನವರಿಯಲ್ಲಿ 25,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಗಳು ಇಲ್ಲಿವೆ ನೋಡಿ
Published On - 1:52 pm, Sun, 9 January 22