ಕೆಲಸ ಕೊಡಿಸುವುದು, ಮದುವೆಯಾಗುವುದಾಗಿ 26 ಯುವತಿಯರಿಗೆ ವಂಚಿಸಿದ್ದ ಆರೋಪಿ ಅರೆಸ್ಟ್
ಬಿಜಾಪುರ ಮೂಲದ ಮಾಜಿ ಲೈನ್ ಮೆನ್ ಭೀಮರಾಜ್, ಯುವತಿಯರಿಗೆ ಮದುವೆ ಆಸೆ, ಹೆಸ್ಕಾಂ ಕೆಲಸದ ಆಸೆ ತೋರಿಸಿ ವಂಚಿಸಿದ್ದಾರೆ. ಸದ್ಯ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಹೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ 26 ಯುವತಿಯರಿಗೆ ವಂಚಿಸಿದ್ದ ಮಾಜಿ ಲೈನ್‌ಮನ್ ಭೀಮರಾಜ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಿಜಾಪುರ ಮೂಲದ ಮಾಜಿ ಲೈನ್ ಮೆನ್ ಭೀಮರಾಜ್, ಯುವತಿಯರಿಗೆ ಮದುವೆ ಆಸೆ, ಹೆಸ್ಕಾಂ ಕೆಲಸದ ಆಸೆ ತೋರಿಸಿ ವಂಚಿಸಿದ್ದಾರೆ. ಸದ್ಯ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭೀಮರಾಜ್ ಅನುಕಂಪದ ಆಧಾರದಲ್ಲಿ ಕೆಲಸ ಪಡೆದು ಕೆಲ ತಿಂಗಳು ಹೆಸ್ಕಾಂನಲ್ಲಿ ಲೇನ್ ಮ್ಯಾನ್ ಆಗಿ ಕೆಲಸ ಮಾಡಿದ್ದ. ಲೈನ್‌ಮ್ಯಾನ್ ಆಗಿದ್ದಾಗಲೆ ಸುನೀತಾ ಎಂಬ ಯುವತಿಯನ್ನ ಕೊಲೆ ಮಾಡಿದ್ದ. ಜೈಲಿನಿಂದ ಬಿಡುಗಡೆ ಬಳಿಕ ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದು ಮದುವೆ ಆಗಲು ಇಚ್ಚಿಸಿ ಆನ್ ಲೈನ್ ಮೊರೆ ಹೋದ ಯುವತಿಯರನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದ. ಆನ್ ಲೈನ್ ಶಾಧಿ.ಕಾಮ್ಗಳಲ್ಲಿ ನಕಲಿ ಪ್ರೋಫೈಲ್ ಸೃಷ್ಟಿ ಮಾಡಿ ವಂಚಿಸುತ್ತಿದ್ದ.
ಈ ವೇಳೆ ಯುವತಿಯರಿಗೆ ಎಕ್ಸಾಂ ಇಲ್ಲದೇ ಹೆಸ್ಕಾಂನಲ್ಲಿ ಕೆಲಸ ಕೊಡಿಸೊದಾಗಿ ನಂಬಿಸಿ ಒಂದಲ್ಲ, ಎರಡಲ್ಲಾ ಬರೊಬ್ಬರಿ 26 ಯುವತಿಯರಿಗೆ ಆರೋಪಿ ಭೀಮರಾಜ್ ಮೋಸ ಮಾಡಿದ್ದಾನೆ. ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಧಾರವಾಡ, ರಾಯಚೂರು, ಬಿಜಾಪುರ ಸೇರಿದಂತೆ ಹಲವು ಕಡೆ ಇದೇ ರೀತಿ ವಂಚಿಸಿದ್ದಾನೆ. ಮೋಸದ ಮಾತುಗಳಿಂದ ನಂಬಿಸಿ ಬರೊಬ್ಬರಿ 21.30 ಲಕ್ಷ ದೂಚಿದ್ದಾನೆ. ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು ದೂರಿನ ಬಳಿಕ ಸತ್ಯ ಬಯಲಾಗಿದೆ. ದೂರು ಸಂಬಂಧ ಬಿಜಾಪುರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಇದನ್ನೂ ಓದಿ: Viral Video: ಪೊಲೀಸ್ ವ್ಯಾನ್ನಲ್ಲಿ ಕರೆದೊಯ್ಯುತ್ತಿರುವಾಗಲೇ ಕೈಕೋಳ ತೊಡಿಸಿದ್ದ ಖೈದಿ ಎಸ್ಕೇಪ್; ಇಲ್ಲಿದೆ ವೈರಲ್ ವಿಡಿಯೋ