AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BLR Airport: ಟರ್ಮಿನಲ್ 2 ಬಗ್ಗೆ ವಿಮಾನ ನಿಲ್ದಾಣ ಅಧಿಕೃತ ಟ್ವಿಟರ್​​ ಖಾತೆಯಲ್ಲೇ ತಪ್ಪು ಮಾಹಿತಿ!

ಟರ್ಮಿನಲ್ 2 ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡುವುದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಸಂದೇಶದಲ್ಲೇ (ಕನ್ನಡ) ತಪ್ಪು ಮಾಹಿತಿ ನೀಡಲಾಗಿದೆ.

BLR Airport: ಟರ್ಮಿನಲ್ 2 ಬಗ್ಗೆ ವಿಮಾನ ನಿಲ್ದಾಣ ಅಧಿಕೃತ ಟ್ವಿಟರ್​​ ಖಾತೆಯಲ್ಲೇ ತಪ್ಪು ಮಾಹಿತಿ!
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2
Ganapathi Sharma
|

Updated on: Mar 23, 2023 | 4:56 PM

Share

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಇತ್ತೀಚೆಗೆ ಕಾರ್ಯಾರಂಭ ಮಾಡಿದ್ದು, ಕೆಲವು ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2 ಮೂಲಕ ಸೇವೆ ನೀಡುತ್ತಿವೆ. ಪ್ರಸ್ತುತ ಏರ್​ ಏಷ್ಯಾ, ಸ್ಟಾರ್ ಏರ್​ವೇಸ್, ವಿಸ್ತಾರ (Vistara) ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2 ಮೂಲಕ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. 2023ರ ಜನವರಿ 15ರಂದು ಸ್ಟಾರ್​​ ಏರ್​ವೇಸ್ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ತೆರಳುವ ಮೂಲಕ ಟರ್ಮಿನಲ್ 2ರಲ್ಲಿ ಕಾರ್ಯಾಚರಣೆ ಆರಂಭವಾಗಿತ್ತು. ಆದರೆ, ಟರ್ಮಿನಲ್ 2 ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡುವುದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಸಂದೇಶದಲ್ಲೇ (ಕನ್ನಡ) ತಪ್ಪು ಮಾಹಿತಿ ನೀಡಲಾಗಿದೆ.

ವಿಮಾನ ವೇಳಾಪಟ್ಟಿಯ ಬಗ್ಗೆ ತಿಳಿಯಲು ಭೇಟಿ ನೀಡಬೇಕಾಗಿರುವ ವೆಬ್​​ಸೈಟ್ ಲಿಂಕ್ ಅನ್ನು ವಿಮಾನ ನಿಲ್ದಾಣ ಆಡಳಿತ ಟ್ವೀಟ್ ಮಾಡಿದೆ. ಜತೆಗೆ ಸಹಾಯವಾಣಿ ಸಂಖ್ಯೆಗಳನ್ನೂ (080 -22012001/66785555 ಅಥವಾ ವಾಟ್ಸ್​​ಆ್ಯಪ್ ಮೂಲಕ ಚಾಟ್ ಮಾಡಲು – 8884998888) ನೀಡಿದೆ. ಜತೆಗೆ ಸಂದೇಶವೊಂದನ್ನು ಲಗತ್ತಿಸಲಾಗಿದ್ದು, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈಗ ಎರಡು ಟರ್ಮಿನಲ್​ಗಳಿವೆ. ದಯವಿಟ್ಟು ನಿಮ್ಮ ಏರ್​​ಲೈನ್ ಟಿಕೆಟ್ ಅಥವಾ ಬೋರ್ಡಿಂಗ್ ಪಾಸ್​ನಲ್ಲಿ ಟರ್ಮಿನಲ್ ಸಂಖ್ಯೆಯನ್ನು (ಟಿ1 ಅಥವಾ ಟಿ1) ತಪ್ಪದೇ ಪರಿಶೀಲಿಸಿ’ ಎಂದು ಉಲ್ಲೇಖಿಸಲಾಗಿದೆ. ಇಂಗ್ಲಿಷ್​ನಲ್ಲಿ ನೀಡಿರುವ ಸಂದೇಶದಲ್ಲಿ (T1 or T2) ಎಂದು ಸರಿಯಾಗಿಯೇ ನಮೂದಿಸಲಾಗಿದೆ. ಆದರೆ, ಕನ್ನಡದ ಸಂದೇಶದಲ್ಲಿ ಟಿ1 ಅಥವಾ ಟಿ1 ಎಂದು ಉಲ್ಲೇಖಿಸಲಾಗಿದೆ. ನಿಜವಾಗಿ ಇದು ಟಿ2 ಆಗಬೇಕಿತ್ತು.

ವಿಮಾನಗಳ ವೇಳಾಪಟ್ಟಿ ಪರಿಶೀಲಿಸುವುದು ಮಾಡುವುದು ಹೇಗೆ?

ಟ್ವೀಟ್ ಮೂಲಕ ವಿಮಾನ ನಿಲ್ದಾಣ ಆಡಳಿತ ನೀಡಿರುವ ವೆಬ್​ಸೈಟ್​ಗೆ (https://www.bengaluruairport.com/travellers/flights/flight-information) ಭೇಟಿ ನೀಡಿ. ಅದರ ಮೇಲ್ಭಾಗದ ಎಡ ಬದಿಯ ಕಾರ್ನರ್​ನಲ್ಲಿ ‘ಫ್ಲೈಟ್ಸ್’ ಎಂಬ ಆಯ್ಕೆ ಇದೆ. ಅದರ ಮೇಲೆ ಕರ್ಸರ್ ಇಟ್ಟಾಗ ‘ಏರ್​ಲೈನ್ ಇನ್​ಫಾರ್ಮೇಶನ್’ ಹಾಗೂ ‘ಫ್ಲೈಟ್ ಇನ್​ಫಾರ್ಮೇಶನ್’ ಎಂಬ ಆಯ್ಕೆಗಳಿವೆ. ಈ ಪೈಕಿ ಇಟ್ಟಾಗ ‘ಏರ್​ಲೈನ್ ಇನ್​ಫಾರ್ಮೇಶನ್’ ಕ್ಲಿಕ್ ಮಾಡಿ. ಆಗ ವಿಮಾನದ ವೇಳಾಪಟ್ಟಿ ಕಾಣಿಸಿಕೊಳ್ಳುತ್ತದೆ. ಉಳಿದಂತೆ ವಿವಿಧ ಸೇವೆಗಳ ಮಾಹಿತಿ ಪಡೆಯುವ ಆಯ್ಕೆಗಳೂ ಈ ವೆಬ್​ಸೈಟ್​ನಲ್ಲಿವೆ.

2022ರ ನವೆಂಬರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್ 2 ಅನ್ನು ಲೋಕಾರ್ಪಣೆಗೊಳಿಸಿದ್ದರು. ಭಾರತದ ಉದ್ಯಾನ ನಗರವಾಗಿ ಬೆಂಗಳೂರನ್ನು ಪ್ರದರ್ಶಿಸುವ ಥೀಮ್​ನೊಂದಿಗೆ ಟರ್ಮಿನಲ್ 2 ಅನ್ನು ನಿರ್ಮಿಸಲಾಗಿದೆ. ಇತ್ತೀಚೆಗಷ್ಟೇ ಟರ್ಮಿನಲ್ 2 ಮೂಲಕ ವಿಸ್ತಾರ  ಸೇವೆ ಆರಂಭಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ