ದ್ವೇಷ ರಾಜಕಾರಣದ ವಿರುದ್ಧ ರಾಜ್ಯದಲ್ಲಿ ‘ಎದ್ದೇಳು ಕರ್ನಾಟಕ’ ಅಭಿಯಾನ; ಏನೇ ಆದ್ರೂ ದ್ವೇಷ ಭಾಷಣಕಾರರಿಗೆ ಮತ ಇಲ್ಲ ಎಂಬ ಕೂಗು

ಸಮಾನ ಮನಸ್ಕರು ಸೇರಿಕೊಂಡು ದ್ವೇಷ ರಾಜಕಾರಣದ ವಿರುದ್ಧ "ಎದ್ದೇಳು ಕರ್ನಾಟಕ" ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ. ಏನೇ ಆಗಲಿ ದ್ವೇಷ ಭಾಷಣಕಾರರಿಗೆ ಈ ಸಲ ನನ್ನ ಮತವಿಲ್ಲ ಎಂಬ ಎದ್ದೇಳು ಕರ್ನಾಟಕ ಅಭಿಯಾನದ ಫೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ದ್ವೇಷ ರಾಜಕಾರಣದ ವಿರುದ್ಧ ರಾಜ್ಯದಲ್ಲಿ 'ಎದ್ದೇಳು ಕರ್ನಾಟಕ' ಅಭಿಯಾನ; ಏನೇ ಆದ್ರೂ ದ್ವೇಷ ಭಾಷಣಕಾರರಿಗೆ ಮತ ಇಲ್ಲ ಎಂಬ ಕೂಗು
'ಎದ್ದೇಳು ಕರ್ನಾಟಕ' ಅಭಿಯಾನ
Follow us
ಆಯೇಷಾ ಬಾನು
|

Updated on:Mar 23, 2023 | 3:51 PM

ಕರ್ನಾಟಕ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ಭರ್ಜರಿ ತಯಾರಿ ಶುರುವಾಗಿದೆ. ಬಹುತೇಕ ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಮತ ಬೇಟೆಗೆ ಇಳಿದಿದ್ದಾರೆ. ಅದರಲ್ಲೂ ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದ ವೇಳೆ ಧರ್ಮ, ದ್ವೇಷದ ಭಾಷಣ ಮಾಡುವುದನ್ನೇ ಅಜೆಂಡ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಹೀಗಾಗಿ ಸಮಾನ ಮನಸ್ಕರು ಸೇರಿಕೊಂಡು ದ್ವೇಷ ರಾಜಕಾರಣದ ವಿರುದ್ಧ “ಎದ್ದೇಳು ಕರ್ನಾಟಕ” ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ. ಏನೇ ಆಗಲಿ ದ್ವೇಷ ಭಾಷಣಕಾರರಿಗೆ ಈ ಸಲ ನನ್ನ ಮತವಿಲ್ಲ ಎಂಬ ಎದ್ದೇಳು ಕರ್ನಾಟಕ ಅಭಿಯಾನದ ಫೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಭ್ರಷ್ಟಾಚಾರ, ದ್ವೇಷರಾಜಕಾರಣ, ಜನ ವಿರೋಧಿ, ಸಂವಿಧಾನ ವಿರೋಧಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವಂತಹ, ಜನರಲ್ಲಿ ವಿಷ ಬೀಜ ಬಿತ್ತುವಂತಹ ಹೇಳಿಕೆ ನೀಡುವವರ ವಿರುದ್ಧ ಈ ಅಭಿಯಾನ ಮಾಡಲಾಗುತ್ತಿದೆ ಎಂದು ಎದ್ದೇಳು ಕರ್ನಾಟಕ ಅಭಿಯಾನದ ವಾಲೆಂಟಿಯರ್ ಸಂದೀಪ್ ಟಿವಿ9 ಕನ್ನಡ ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಆಜಾನ್‌ ಬಗ್ಗೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಮಾರ್ಚ್ 5ರಿಂದ ಈ ಅಭಿಯಾನ ಶುರುವಾಗಿದೆ. ಇದು ಯಾವುದೇ ಪಕ್ಷ ಎನ್ನದೆ ಸ್ವತಂತ್ರವಾಗಿ ನಡೆಯುತ್ತಿರುವ ಅಭಿಯಾನ. ಇದನ್ನು ಸಮಾನ ಮನಸ್ಕರೆಲ್ಲ ಸೇರಿಕೊಂಡು ಇಡೀ ರಾಜ್ಯಾದ್ಯಂತ ಯಶಸ್ವಿಯಾಗಿ ಅಭಿಯಾನ ಮಾಡುತ್ತಿದ್ದೇವೆ. ಸಂವಿಧಾನ ವಿರೋಧಿ, ಜನ ವಿರೋಧಿಯಾದಂತವರು ಅಧಿಕಾರಕ್ಕೆ ಬರಬಾರದೆಂಬುದಷ್ಟೇ ನಮ್ಮ ಉದ್ದೇಶ. ಈಗಾಗಲೇ ಸಾವಿರಾರು ಜನ ನಮ್ಮೊಂದಿಗೆ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕಾರ್ಯಗಾರವನ್ನು ಮಾಡಿ ಈ ಅಭಿಯಾನವನ್ನು ಮುನ್ನೆಡೆಸುತ್ತಿದ್ದೇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನ ವಿರೋಧಿ ಸರ್ಕಾರ ಬರಬಾರದೆಂದು ಅನೇಕರು ನಮಗೆ ಸಹಕಾರ ನೀಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮನೆ ಮನೆಗೆ ಹೋಗಿ ರಾಜಕೀಯ ಪಕ್ಷಗಳ ಮುಖವಾಡ ಕಳಚಲು ಪ್ರಯತ್ನಿಸುತ್ತೇವೆ. ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಮುಂದೆ ಜನಪರ ಸರ್ಕಾರ ಬರಬೇಕು. ಬಡ ಜನರಿಗಾಗಿ ನಿಲ್ಲಬೇಕು ಎಂದು ಸಂದೀಪ್ ಮಾಹಿತಿ ನೀಡಿದ್ದಾರೆ.

ಸದ್ಯ ನಾವೀಗ ಮೊದಲ ಹಂತದಲ್ಲಿದ್ದೇವೆ. ನಮ್ಮ ವಾಲೆಂಟಿಯರ್​ಗಳಿಗೆ ನಾವು ಯಾವ ಉದ್ದೇಶಕ್ಕಾಗಿ ಈ ಅಭಿಯಾನವನ್ನು ಮಾಡುತ್ತಿದ್ದೇವೆ. ಹಾಗೂ ಜನರಿಗೆ ಸತ್ಯವನ್ನೇ ಹೇಳಬೇಕು. ಜನರಿಗೆ ಯಾವ ರೀತಿ ವಿಚಾರಗಳನ್ನು ತಿಳಿಸಬೇಕು ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.

ಈ ಅಭಿಯಾನದಲ್ಲಿ ಭಾಗಿಯಾಗಲು 7406900778 ನಂಬರ್​ಗೆ ಮಿಸ್ ಕಾಲ್ ಕೊಡಿ. ಬಳಿಕ ಮೆಸೇಜ್ ಮೂಲಕ ಬಂದ ಗೂಗಲ್ ಫಾರ್ಮ್ ಫಿಲ್ ಮಾಡಿದರೆ ನೀವೂ ಕೂಡ ಈ ಅಭಿಯಾನದಲ್ಲಿ ಜೊತೆಯಾಗಬಹುದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:51 pm, Thu, 23 March 23

ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?